ದಿನಕರ್ ನಿರ್ದೇಶನದ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಬಗ್ಗೆ ಪ್ರಜ್ವಲ್ ದೇವರಾಜ್ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದ ನಾಯಕರಲ್ಲೊಬ್ಬರಾಗಿರೋ ಪ್ರಜ್ವಲ್ ಈ ಚಿತ್ರದಲ್ಲಿ ಕೋಟ್ಯಾಧೀಶನ ಮಗ ವಿರಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರವನ್ನ ಬರೀ ನಟಿಸದೇ ಪ್ರೀತಿಸುವಂತಾಗಿದ್ದಕ್ಕೆ, ಇಡೀ ಚಿತ್ರ ಆರಂಭಿಕವಾಗಿಯೇ ಕಾಡಿದ್ದಕ್ಕೆ ಪ್ರಜ್ವಲ್ ತಮ್ಮದೇ ಆದ ಕಾರಣಗಳನ್ನು ಕೊಟ್ಟಿದ್ದಾರೆ!
ದಿನಕರ್ ಅವರ ಮಡದಿ ಮಾನಸಾ ಬರೆದ ಈ ಕಥೆಯನ್ನು ಕೇಳಿದಾಗ ಮೊದಲ ಹಂತದಲ್ಲಿಯೇ ಪ್ರಜ್ವಲ್ಗೆ ಇಷ್ಟವಾಗಿತ್ತಂತೆ. ಅದಕ್ಕೆ ಕಾರಣ ಇಡೀ ಕಥೆ ಬದುಕಿನ ವಾಸ್ತವಕ್ಕೆ ತೀರಾ ಹತ್ತಿರಾಗಿರೋದು. ನೋಡುವ ಪ್ರತಿಯೊಬ್ಬರೂ ಒಂದೊಂದು ತಿರುವಲ್ಲಾದರೂ ಇದರ ಪಾತ್ರಗಳಲ್ಲಿ ಕಳೆದು ಹೋಗುತ್ತಾರೆ. ಒಂದಸಲ್ಲ ಒಂದು ಕಾರಣಕ್ಕೆ ಇಲ್ಲಿನ ಪಾತ್ರಗಳ ತುಮುಲಗಳು ಎಲ್ಲರಿಗೂ ತಮ್ಮದೂ ಹೌದೆನ್ನಿಸುತ್ತೆ. ಕಡೇಗೆ ಮನಸಿಗೆ ಮುತ್ತಿಕೊಂಡಿದ್ದ ಎಲ್ಲ ನಿರಾಸೆ, ಧಾವಂತಗಳನ್ನೂ ಕೊಡವಿಕೊಂಡು ತಮ್ಮದೇ ಗಮ್ಯದತ್ತ ಹೊಸಾ ಹುರುಪಿನಿಂದ ನಡೆಯುವ ಪ್ರೇರೇಪಣೆಯನ್ನೂ ನೀಡುತ್ತದೆ. ಇಂಥಾ ಗುಣಗಳಿಂದಲೇ ತಮಗಿಷ್ಟವಾದ ಈ ಕಥೆ ಪ್ರೇಕ್ಷಕರನ್ನೂ ಖಂಡಿತಾ ಆವರಿಸಿಕೊಳ್ಳುತ್ತೆ ಎಂಬುದು ಪ್ರಜ್ವಲ್ ಭರವಸೆ.
ಇನ್ನುಳಿದಂತೆ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಚಿತ್ರೀಕರಣದ ಬಗ್ಗೆಯೂ ಪ್ರಜ್ವಲ್ ಹೇಳಿಕೊಂಡಿದ್ದಾರೆ. ಚಿತ್ರೀಕರಣದ ಶುರುವಾಗಿ ಮುಗಿಯೋ ಹೊತ್ತಿಗೆಲ್ಲ ಬಿಟ್ಟಿರಲಾರದಂಥಾ ವಾತಾವರಣವೊಂದು ಅಲ್ಲಿ ಬೆಳೆದುಕೊಂಡಿತ್ತಂತೆ. ಈ ಹಿಂದೆ ಚೌಕ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದ ಪ್ರೇಮ್ ಪ್ರಜ್ವಲ್ಗೆ ಹಳೇ ಸ್ನೇಹಿತ. ನಿರ್ದೇಶಕ ದಿನಕರ್ ಫ್ಯಾಮಿಲಿ ಫ್ರೆಂಡ್. ಹರಿಪ್ರಿಯಾ ಕೂಡಾ ಎಲ್ಲರೊಂದಿಗೂ ಬೆರೆಯುವಂಥಾ ಸ್ವಭಾವದವರು. ಹೀಗಿದ್ದಿದ್ದರಿಂದಲೇ ಕಡೇಯ ಹಂತ ತಲುಪಿದಾಗ ಚಿತ್ರೀಕರಣ ಯಾಕೆ ಇಷ್ಟು ಬೇಗ ಮುಗಿಯಿತೋ ಅಂತನ್ನಿಸಲಾರಂಭಿಸಿತ್ತಂತೆ.
ಇಡೀ ಚಿತ್ರವೂ ಅಂಥಾದ್ದೇ ರಸವತ್ತಾಗಿ, ರುಚಿಕಟ್ಟಾಗಿ ಮೂಡಿ ಬಂದಿದೆಯೆಂಬ ಖುಷಿ ಪ್ರಜ್ವಲ್ ದೇವರಾಜ್ ಅವರದ್ದು.
#
No Comment! Be the first one.