ಕನ್ನಡ, ಸಿನಿಮಾರಂಗ, ಇಲ್ಲಿನ ಕಲಾವಿದ, ತಂತ್ರಜ್ಞರ ಪತಿಚಯವೇ ಇಲ್ಲದ ಮಂದಿಯನ್ನು ಅಮೆಜಾನ್ ಪ್ರೈಮ್ ಥರದ ಓಟಿಟಿ ಪ್ಲಾಟ್ ಫಾರ್ಮಲ್ಲಿ ತುಂಬಿಹೋಗಿದ್ದಾರೆ. ಇಂಥವರನ್ನು ಸಂಸ್ಥೆಗಳು ಕೆಲಸಕಿಟ್ಟುಕೊಂಡಿರೋದರಿಂದಲೋ ಏನೋ ಗೊಂದಲ, ತಪ್ಪುಗಳು ಸಂಭವಿಸುತ್ತಿವೆ.

ಮೊನ್ನೆ ದಿನ ಅಮೆಜಾನ್ ಪ್ರೈಮಲ್ಲಿ ಡಾಲಿ ಧನಂಜಯನ ರತ್ನನ್ ಪ್ರಪಂಚ ಸಿನಿಮಾ ಬಿಡುಗಡೆಯಾಗಿದೆ. ಅಲ್ಲಿ ದಾಖಲಿಸಿರುವ ಸಿನಿಮಾದ ಪರಿಚಯದಲ್ಲಿ ಹೀರೋ ಫೋಟೋನೇ ಮಿಸ್ ಆಗಿದೆ. ಧನಂಜಯ ಅಂದರೆ ಯಾರು ಅನ್ನೋದು ಅಲ್ಲಿರುವವರಿಗೆ ಗೊತ್ತಾಗಿಲ್ಲವೇನೋ. ಹೀರೋ ಫೋಟೋ ತಾನೆ ಕಾಣೆಯಾಗಿದೆ, ಹೋದ್ರೆ ಹೋಗ್ಲಿ ಅಂತಾ ಸುಮ್ಮನಾಗಬಹುದು. ಅದೇ ಪಟ್ಟಿಯಲ್ಲಿ ಪ್ರಮೋದ್ ಶೆಟ್ಟಿಯ ಹೆಸರು ಮತ್ತು ಫೋಟೋ ಕೂಡಾ ನಮೂದಾಗಿದೆ. ಸಿನಿಮಾ ಮುಗಿಯೋತನಕ ಹುಡುಕಾಡಿದರೂ ಪ್ರಮೋದ್ ಶೆಟ್ಟರ ಸುಳಿವಿಲ್ಲ.

ಅಸಲಿಗೆ ಅಲ್ಲಿರೋದು ಯುವ ನಟ ಪ್ರಮೋದ. ಮತ್ತೆ ಉದ್ಭವ, ಪ್ರೀಮಿಯರ್ ಪದ್ಮಿನಿ‌ ಮುಂತಾದ ಸಿನಿಮಾಗಳಲ್ಲಿ ನಟಿಸಿ, ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರಮೋದ ಬಹುಮುಖ್ಯ ಪಾತ್ರದಲ್ಲಿ ಭಾಗಿಯಾಗಿದ್ದಾನೆ. ಅಮೆಜಾನ್ ಪ್ರೈಂ ನವರಿಗೆ ಗೊಂದಲವಾಗಿ ಈ ಹುಡುಗನ ಬದಲಿಗೆ ಪ್ರಮೋದ್ ಶೆಟ್ಟರ ಫೋಟೋವನ್ನು ಅಂಟಿಸಿಬಿಟ್ಟಿದ್ದಾರೆ. ಮೊದಲೇ ಅತ್ಯುತ್ಸಾಹದಿಂದ, ದೊಡ್ಡ ಮಟ್ಟದಲ್ಲಿ ಹೆಸರು ಮಾಡುವ ಬಯಕೆಯಲ್ಲಿರುವ ನಟ ಪ್ರಮೋದ, ತನ್ನ ಜಾಗದಲ್ಲಿ ಶೆಟ್ಟರ ಪಟ ಕಂಡು ಗೊಳೋ ಅನ್ನುತ್ತಿದ್ದಾನಂತೆ.

ಪ್ರಮೋದ ಅಂತಲ್ಲ, ಯಾವುದೇ ಒಬ್ಬ ನಟ, ಅದರಲ್ಲೂ ಗುರುತಿಸಿಕೊಳ್ಳಲು ಬಯಸುವ ಸಮಯದಲ್ಲಿ ಹೀಗಾದರೆ ನೊಂದುಕೊಳ್ಳೋದು ಸಹಜ. ಅಮೆಜ಼ಾನ್‌ ಆಗಿರಲಿ, ಮತ್ತೊಬ್ಬರಿರಲಿ, ಕನ್ನಡ ಸಿನಿಮಾಗಳ ವ್ಯವಹಾರ, ವಿಚಾರಗಳನ್ನು ನೋಡಿಕೊಳ್ಳಲು ಸ್ಥಳೀಯರೊಬ್ಬರನ್ನು ಕೆಲಸಕ್ಕಿಟ್ಟುಕೊಳ್ಳಬೇಕು. ಬಾಂಬೆ, ಕೇರಳದ ಜನರಿಗೆ ಅಲ್ಲಿ ಹೆಚ್ಚು ಆದ್ಯತೆ ನೀಡುವುದರಿಂದ, ಇಲ್ಲಿನ ಸಿನಿಮಾಗಳ ಕುರಿತಾಗಿ ಏನೆಂದರೆ ಏನೂ ಅವರಿಗೆ ಮಾಹಿತಿಯೇ ಇರುವುದಿಲ್ಲ. ಗೂಗಲ್‌ ನಲ್ಲಿ ಸಿಕ್ಕಿದ್ದನ್ನೇ ನಂಬಿ ಇಂತಾ ಯಡವಟ್ಟುಗಳನ್ನು ಸೃಷ್ಟಿಸಿರುತ್ತಾರೆ.

ಇನ್ನಾದರೂ ಅಮೆಜ಼ಾನಿನವರು ಯಾರದ್ದೋ ಹೆಸರು, ಮಾಹಿತಿಗೆ ಮತ್ತೊಬ್ಬರ ಫೋಟೋ ಅದಲು ಬದಲು ಮಾಡಿ, ಕಲಾವಿದರಿಂದ ಹಿಡಿ ಶಾಪ ಹಾಕಿಸಿಕೊಳ್ಳದಿರಲಿ.!

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ʻಮಾʼ ಅಖಾದಲ್ಲಿ ಮಣ್ಣು ಮುಕ್ಕಿದ ʻರೈʼ

Previous article

ಬಂದಾ ನೋಡಿ ಭಜರಂಗಿ!

Next article

You may also like

Comments

Leave a reply

Your email address will not be published.