ಕುಮಾರಿ ೨೧ಎಫ್ ಚಿತ್ರದ ಮೂಲಕವೇ ಸ್ಯಾಂಡಲ್‌ವುಡ್ಡಿಗೆ ಎಂಟ್ರಿ ಕೊಟ್ಟಿದ್ದವರು ಪ್ರಣಾಮ್. ಡೈನಾಮಿಕ್ ಸ್ಟಾರ್ ದೇವರಾಜ್ ಪುತ್ರನ ಈ ಚಿತ್ರಕ್ಕೆ ಕನ್ನಡದ ಪ್ರೇಕ್ಷಕರು ಮನಃಪೂರ್ವಕವಾಗಿಯೇ ಬೆಂಬಲಿಸಿದ್ದರು. ಈ ಚಿತ್ರದಲ್ಲಿ ಗಮನಾರ್ಹವಾದ ನಟನೆ ನೀಡಿದ್ದ ಪ್ರಣಾಮ್ ನಾಯಕನಾಗಿ ನೆಲೆ ನಿಲ್ಲುತ್ತಾನೆಂಬ ಭರವಸೆಯೂ ಹುಟ್ಟಿಕೊಂಡಿತ್ತು.
ಇದೀಗ ಪ್ರಣಾಮನ ಹೊಸಾ ಚಿತ್ರ ಕನ್ನಡದಲ್ಲಿ ಶುರುವಾಗೋ ಮುನ್ನವೇ ಆತ ತೆಲುಗು ಚಿತ್ರವೊಂದರಲ್ಲಿ ನಟಿಸಲು ಮುಂದಾಗಿದ್ದಾನೆ. ಸಾಯಿ ಶಿವಾನಿ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರೋ ಈ ಚಿತ್ರದ ಮೋಷನ್ ಪೋಸ್ಟರ್ ಕೂಡಾ ಈಗಾಗಲೇ ಬಿಡುಗಡೆಯಾಗಿದೆ. ಅದರ ಬಗೆಗೂ ಸಾಮಾಜಿಕ ಜಾಲತಾಣಗಳಲ್ಲಿ ಸಕಾರಾತ್ಮಕ ಪ್ರತಿಕ್ರಿಯೆಗಳು ಬಂದಿವೆ.
ಈ ಚಿತ್ರಕ್ಕೆ ವೈರಂ ಎಂಬ ಶೀರ್ಷಿಕೆ ಇಡಲಾಗಿದೆ. ಈಗಾಗಲೇ ಅದ್ದೂರಿಯಾಗಿ ಮುಹೂರ್ತವೂ ನೆರವೇರಿದೆ. ಜೆಎಂಕೆ ನಿರ್ಮಾಣ ಮಾಡಿರೋ ಈ ಚಿತ್ರ ಕನ್ನಡದಲ್ಲಿಯೂ ತಯಾರಾಗಲಿದೆಯಂತೆ. ಈ ಹಿಂದೆ ಪ್ರಣಾಮನ ಮೊದಲ ಚಿತ್ರ ಕುಮಾರಿ ಕೂಡಾ ತೆಲುಗಿನಲ್ಲಿಯೂ ಬಿಡುಗಡೆಯಾಗಿತ್ತು. ಈ ಮೂಲಕ ಈತನಿಗೆ ತೆಲುಗಿನಲ್ಲಿಯೂ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ.  ಈಗಿರೋ ವಾತಾವರಣ ಗಮನಿಸಿದರೆ ಪ್ರಣಾಮ್ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೇ ನಾಯಕ ನಟನಾಗಿ ನೆಲೆ ನಿಲ್ಲೋ ಸೂಚನೆಗಳಿವೆ.

#

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಛಾಲೆಂಜಿಂಗ್ ಸ್ಟಾರ್ ಅಭಿಮಾನಿಗಳ ಪಾಲಿಗೆ ಶುಭ ಶ್ರಾವಣ!

Previous article

ಪಾಕಿಸ್ತಾನದ ಪರವಾಗಿ ಮಾತಾಡಿದರಾ ಉಪ್ಪಿ?

Next article

You may also like

Comments

Leave a reply

Your email address will not be published.