ಕನ್ನಡದ ಹುಡುಗಿ ಪ್ರಣೀತಾ ಸುಭಾಷ್‌. ಛಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ಪೊರ್ಕಿ ಚಿತ್ರದಿಂದ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಹುಡುಗಿ ಈಕೆ. ನಂತರ ಜರಾಸಂಧ ಸಿನಿಮಾದಲ್ಲೂ ಈಕೆ ನಾಯಕಿಯಾಗಿ ನಟಿಸಿದ್ದಳು. ಆ ನಂತರ ಕನ್ನಡ ಚಿತ್ರರಂಗದಿಂದ ಸ್ವಲ್ಪ ದೂರವೇ ಉಳಿದಿದ್ದ ಪ್ರಣೀತ ನೆರೆಯ ತೆಲುಗು, ತಮಿಳು ಸಿನಿಮಾರಂಗಗಳಲ್ಲಿ ಬ್ಯುಸಿಯಾಗಿಹೋದಳು.

ಈ ನಡುವೆ ಮತ್ತೆ ಕನ್ನಡ ಸಿನಿಮಾಗಳಿಗೂ ಮತ್ತೆ ಬಂದ ಪ್ರಣೀತ ಭೀಮಾತೀರದಲ್ಲಿ, ಬ್ರಹ್ಮ, ಜಗ್ಗುದಾದ ಮತ್ತು ಮಾಸ್‌ ಲೀಡರ್‌ ಸಿನಿಮಾಗಳಲ್ಲಿ ನಟಿಸಿದಳು. ಆರಂಭದ ದಿನಗಳಲ್ಲಿ ಯಾರೂ ನಿರೀಕ್ಷಿಸದ ಮಟ್ಟಿಗೆ ಅವಕಾಶಗಳನ್ನು ಪಡೆದು, ದಕ್ಷಿಣ ಭಾರತದಲ್ಲಿ ಹೆಸರು ಮಾಡಿದ ಈ ಹುಡುಗಿಗೆ ಚಿತ್ರರಂಗದಲ್ಲಿ ಹೇಳಿಕೊಳ್ಳುವಂತಾ ಅವಕಾಶಗಳು ಸಿಗಲಿಲ್ಲ. ಪ್ರಣೀತ ಹೆಸರು ಮಾಡುತ್ತಿದ್ದ ಸಮಯದಲ್ಲೇ ಕನ್ನಡ ಚಿತ್ರರಂಗದಲ್ಲಿ ಎದ್ದು ನಿಂತ ರಶ್ಮಿಕಾ ಮಂದಣ್ಣ ಸೌತ್‌ ಇಂಡಿಯಾದ ಸೂಪರ್‌ ಸ್ಟಾರ್‌ ಗಳ ಜೊತೆ ಜೋಡಿಯಾದಳು.

ಸಿನಿಮಾಗಳಲ್ಲಿ ಅವಕಾಶ ಕಡಿಮೆ ಆದರೂ ಪ್ರಣೀತ ತನ್ನ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಹೆಚ್ಚು ಚಾಲ್ತಿಗೆ ಬಂದಳು. ಕರ್ನಾಟಕದ ಒಂದಷ್ಟು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಬಡಮಕ್ಕಳಿಗೆ ನೆರವಾದಳು. ಸಿನಿಮಾ ನಟಿಯರು ಬರೀ ಥಳುಕು ಬಳುಕಿಗಷ್ಟೇ ಸೀಮಿತ. ಹಣ ಸಂಪಾದನೆ, ಪ್ರಚಾರ ಪಡೆಯುವುದಷ್ಟೇ ಇವರ ಪರಮ ಉದ್ದೇಶ ಎಂಬಂಥಾ ವಾತಾವರಣದಲ್ಲೂ ಪ್ರಣೀತ ಜನಮೆಚ್ಚುವ ಕೆಲಸ ಮಾಡಿದರಳು.

ಇಷ್ಟೆಲ್ಲದರ ನಡುವೆಯೂ ಪ್ರಣೀತ ಎದುರಾದ ಕೂಡಲೇ ಮಾಧ್ಯಮದವರು ಕೇಳುತ್ತಿದ್ದ ಒಂದೇ ಪ್ರಶ್ನೆ ʻನಿಮ್ಮ ಮದುವೆ ಯಾವಾಗ?ʼ. ಪ್ರತೀ ಬಾರಿ ಇಂಥಾ ಪ್ರಶ್ನೆಗಳು ಎದುರಾದಾಗಲೂ ಪ್ರಣೀತ ಅಷ್ಟೇ ನಯವಾಗಿ ನಾನು ತಿಳಿಸುತ್ತೇನೆ ಅಂತಷ್ಟೇ ಹೇಳಿ ಜಾರಿಕೊ‍ಳ್ಳುತ್ತಿದ್ದಳು. ಒಂದೆರಡು ವರ್ಷಗಳಿಂದೀಚೆಗೆ ಈಕೆಯ ಮದುವೆಯ ಕುರಿತಾಗಿ ಥರಹೇವಾರಿ ಗಾಳಿಸುದ್ದಿಗಳೂ ಹರಿದಾಡಿದವು. ಇಷ್ಟೆಲ್ಲದರ ನಡುವೆಯೂ ಪ್ರಣೀತ ಈಗ ನಿಜಕ್ಕೂ ಮದುವೆಯಾಗಿದ್ದಾಳೆ.

ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ರೆಸಾರ್ಟ್‌ ವೊಂದರಲ್ಲಿ ಪ್ರಣೀತ ವಿವಾಹ ಸದ್ದಿಲ್ಲದೆ ನೆರವೇರಿದೆ. ಪ್ರಣೀತ ಮದುವೆಯಾದರೆ ಚಿತ್ರರಂಗಕ್ಕೆ ಸಂಬಂಧಿಸಿದವರನ್ನೇ ಇರಬಹುದು ಎನ್ನುವ ಅಂದಾಜು ಮೀಡಿಯಾದವರದ್ದಾಗಿತ್ತು. ಆದರೆ, ಪ್ರಣೀತ ಅದನ್ನು ಸುಳ್ಳಾಗಿಸಿದ್ದಾಳೆ. ಬೆಂಗಳೂರಿನಲ್ಲಿ ದೊಡ್ಡ ಉದ್ಯಮವನ್ನು ನಡೆಸುತ್ತಿರುವ ನಿತಿನ್‌ ರಾಜ್(?) ಕ್ಷತ್ರಿಯ ಎಂಬಾತನ ಜೊಗೆ ಪ್ರಣೀತ ದಾಂಪತ್ಯ ಪ್ರಯಾಣ ಆರಂಭಗೊಂಡಿದೆ.

Actress Pranitha in Saree Latest Stills

ವಧು-ವರರ ಕಡೆಯ ತಲಾ ಹತ್ತು ಮಂದಿಗೆ ಮಾತ್ರ ಈ ಮದುವೆ ಸಮಾರಂಭದಲ್ಲಿ ಆಮಂತ್ರಣವಿತ್ತಂತೆ. ಮದುವೆ ಸುದ್ದಿ ಮೀಡಿಯಾ ಬಾಯಿಗೆ ಬಿದ್ದರೆ, ಜನಜಾತ್ರೆ ಏರ್ಪಡಬಹುದು. ಮೊದಲೇ ಲಾಕ್‌ ಡೌನ್‌ ಜಾರಿಯಲ್ಲಿದೆ. ಜನರ ಸಾವು ನೋವಿನ ಸುದ್ದಿಯನ್ನು ಪಕ್ಕಕ್ಕೆಸೆದು ಮದುವೆ ನ್ಯೂಸನ್ನು ವೈಭವೀಕರಿಸುತ್ತಾರೆ ಅನ್ನೋ ಕಾರಣಕ್ಕೆ ಬಹುಶಃ ಪ್ರಣೀತ ಗುಟ್ಟುಗುಟ್ಟಾಗಿ ತಾಳಿ ಕಟ್ಟಿಸಿಕೊಂಡಿದ್ದಾಳೆ!

ಇವೆಲ್ಲ ಏನೇ ಆಗಲಿ, ಸಿನಿಮಾ ನಟನೆಯ ಜೊತೆಗೆ ಬಡ ಮಕ್ಕಳು, ಅವರ ವಿದ್ಯೆ, ಭವಿಷ್ಯದ ಬಗ್ಗೆಯೂ ಯೋಚಿಸುವ ಗುಣ ಹೊಂದಿರುವ ಪ್ರಣೀತ ಬಾಳು ಬಂಗಾರವಾಗಲಿ…

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ತಂದೆ ಆ ಹುಡುಗನ ಮರ್ಮಾಂಗವನ್ನು ಕತ್ತರಿಸಿಬಿಡುತ್ತಾನೆ!

Previous article

ಏನಾಯಿತು ಶೆಟ್ರೇ?

Next article

You may also like

Comments

Leave a reply

Your email address will not be published.