ಇತ್ತೀಚಿನ ವರ್ಷಗಳಲ್ಲಿ ಕನ್ನಡದಿಂದ ಮರೆಯಾಗಿ ತೆಲುಗು ತಮಿಳಿನತ್ತ ಮುಖ ಮಾಡಿದ್ದವಳು ನಟಿ ಪ್ರಣೀತ. ಆದರೆ ಅಂದುಕೊಂಡಂತಾಗದೆ ಪ್ರಣೀತಾ ಇದೀಗ ನೇರವಾಗಿಯೇ ಬಾಲಿವುಡ್ಗೆ ಜಿಗಿದು ಅಚ್ಚರಿ ಹುಟ್ಟಿಸಿದ್ದಳು. ಆದರೀಗ ಆಕೆ ಬಹು ಕಾಲದ ನಂತರ ನಾಯಕಿಯಾಗಿ ಕನ್ನಡಕ್ಕೆ ಬಂದಿದ್ದಾಳೆ.
ರಾಜ್ ಬಿ ಶೆಟ್ಟಿ, ರಿಷಿ ಮತ್ತು ಡ್ಯಾನಿಶ್ ಸೇಠ್ ರಾಮನ ಅವತಾರ ಎಂಬ ಚಿತ್ರದಲ್ಲಿ ನಟಿಸುತ್ತಿರೋದರ ಬಗ್ಗೆ ಸುದ್ದಿಗಳು ಹೊರ ಬೀಳುತ್ತಲೇ ಇವೆ. ಏನೋ ಮ್ಯಾಜಿಕ್ ಮಾಡುತ್ತೆ ಎಂಬ ಸೂಚನೆಯನ್ನು ಆರಂಭದಲ್ಲಿಯೇ ಈ ಚಿತ್ರ ಧ್ವನಿಸಿದೆ. ಆದರೆ ನಾಯಕಿ ಯಾರಾಗುತ್ತಾರೆ, ನಾಯಕಿ ಪಾತ್ರ ಇದೆಯಾ ಇಲ್ಲವಾ ಎಂಬುದನ್ನೂ ಚಿತ್ರತಂಡ ಹೇಳಿರಲಿಲ್ಲ. ಆದರೀಗ ಪ್ರಣೀತಾ ನಾಯಕಿಯಾಗಿ ಆಯ್ಕೆಯಾಗಿದ್ದಾಳಂತೆ.
ಇದುವರೆಗೂ ಒಂದಷ್ಟು ಚಿತ್ರಗಳಲ್ಲಿ ನಟಿಸಿರೋ ಪ್ರಣೀತಾ ನೆನಪಿಟ್ಟುಕೊಳ್ಳವಂಥಾ ಪಾತ್ರಗಳನ್ನು ನಿಭಾಯಿಸಿದ್ದು ಸುಳ್ಳೇನಲ್ಲ. ಆದರೆ ರಾಮನ ಅವತಾರ ಚಿತ್ರದ ಪಾತ್ರದ ಬಗ್ಗೆ ಖುದ್ದು ಪ್ರಣೀತಾಳೇ ಥ್ರಿಲ್ ಆಗಿದ್ದಾಳೆ. ಅದೇ ಖುಷಿಯಲ್ಲಿಯೇ ಈ ವಿಚಾರವನ್ನೂ ಹಂಚಿಕೊಂಡಿದ್ದಾಳೆ.
ಈಕೆ ಈಗಾಗಲೇ ಒಂದು ಬಾಲಿವುಡ್ ಚಿತ್ರದಲ್ಲಿ ನಟಿಸಿದ್ದಾಳೆ. ಆಕೆ ನಟಿಸಿರುವ ಸದರಿ ಚಿತ್ರದ ಹಾಡಿನ ಭಾಗದ ವೀಡಿಯೋ ಒಂದು ಭಾರೀ ಜನಪ್ರಿಯತೆ ಗಳಿಸಿಕೊಂಡಿದೆ. ಈ ಚಿತ್ರವನ್ನು ನಿರ್ದೇಶನ ಮಾಡುತ್ತಿರುವವರು ತುಮ್ಹಾರಿ ಸುಲು ಚಿತ್ರ ಖ್ಯಾತಿಯ ಸುರೇಶ್ ತ್ರಿವೇದಿ. ಪ್ರಣೀತಾ ಈ ಚಿತ್ರದಲ್ಲಿ ಆಯುಶ್ಮನಾನ್ ಖುರಾನಾಗೆ ನಾಯಕಿಯಾಗಿ ನಟಿಸಿದ್ದಾಳೆ.
ಲವ್ ಸ್ಟೋರಿ ಆಧಾರಿತ ಈ ಚಿತ್ರದಲ್ಲಿ ನಾಯಕ ಆಯುಶ್ಮಾನ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡರೆ ಪ್ರಣೀತಾಗೆ ಬಬ್ಲಿ ಹುಡುಗಿಯ ಪಾತ್ರ ಸಿಕ್ಕಿದೆಯಂತೆ. ಈಗ ಜನಪ್ರಿಯತೆ ಗಳಿಸಿಕೊಂಡಿರೋ ಈ ಚಿತ್ರದ ಹಾಡಿನ ವೀಡಿಯೋ ತುಣುಕನ್ನು ಭಾರೆತ ಮತ್ತು ಚೀನಾದ ಗಡಿ ಭಾಗದಲ್ಲಿ ಚಿತ್ರೀಕರಿಸಲಾಗಿದೆಯಂತೆ. ಒಂದಷ್ಟು ಚಿತ್ರೀಕರಣವನ್ನೂ ಕೂಡಾ ಈ ಭಾಗದಲ್ಲಿಯೇ ನಡೆಸಿದ್ದಾರಂತೆ. ಅಂತೂ ಅವಕಾಶಕ್ಕಾಗಿ ಅರಸುತ್ತಾ ಬೇರೆ ಬೇರೆ ಭಾಷೆಗಳನ್ನು ಸುತ್ತಿ ತೆಲುಗಿನಲ್ಲಿ ಒಂದು ಮಟ್ಟದ ಯಶವನ್ನೂ ದಾಖಲಿಸಿದ್ದ ಪ್ರಣೀತಾ ಈಗ ಬಾಲಿವುಡ್ ಚಿತ್ರದಲ್ಲಿ ನಟಿಸುತ್ತಿರೋ ಖುಷಿಯಲ್ಲಿದ್ದಾಳೆ!
ಸಾಮಾನ್ಯವಾಗಿ ಕನ್ನಡದ ನಟಿಯರು ಸುಖಾ ಸುಮ್ಮನೆ ಫೋಟೋ ಶೂಟ್ ನಡೆಸಿ ಬಾಲಿವುಡ್ಗೆ ಎಂಟ್ರಿ ಕೊಡುತ್ತಿರೋದಾಗಿ ಸುಳ್ಳು ಸುದ್ದಿ ಹಬ್ಬಿಸುತ್ತಾರೆ. ಆದರೆ ಸದ್ದೇ ಇಲ್ಲದೆ ಬಾಲಿವುಡ್ ಪ್ರವೇಶ ಮಾಡಿರೋ ಪ್ರಣೀತಾ ಹೊಸಾ ಚಿತ್ರದ ಹಾಡಿನ ದಾಖಲೆಯೊಂದಿಗೇ ಸದ್ದು ಮಾಡಿದ್ದಾಳೆ. ಇಂಥಾ ಅವಕಾಶ ಇದ್ದೂ ಮತ್ತೆ ಕನ್ನಡಕ್ಕೆ ಮುಖ ಮಾಡಿರೋ ಪ್ರಣೀತಾಳನ್ನು ಮೆಚ್ಚಲೇ ಬೇಕು.
#
No Comment! Be the first one.