• ಮಹಂತೇಶ್‌ ಮಂಡಗದ್ದೆ

ಉಗ್ರಂ ಅನ್ನೋ ಒಂದೇ ಸಿನಿಮಾದ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಸೌಂಡ್ ಮಾಡಿದ ನಿರ್ದೇಶಕ ಪ್ರಶಾಂತ್​ ನೀಲ್ ಕೆ.ಜಿ.ಎಫ್ ಸಿನಿಮಾದ ಮೂಲಕ ಭಾರತೀಯ ಸ್ಟಾರ್ ಡೈರೆಕ್ಟರ್ ಲಿಸ್ಟ್​ಗೆ ಸೇರಿದ್ದಾರೆ. ಸೌತ್ ಇಂಡಿಯಾದಲ್ಲಿ ರಾಜಮೌಳಿ ನೆಕ್ಸ್ಟ್​ ಪ್ರಶಾಂತ್ ನೀಲ್ ಅನ್ನೋ ಮಾತುಗಳು ಕೇಳಿ ಬರ್ತಿವೆ.

ಸದ್ಯ ಪ್ರಭಾಸ್ ಜೊತೆ ಸಲಾರ್ ಸಿನಿಮಾ ಮಾಡ್ತಿರೋ ನೀಲ್ ನೆಕ್ಸ್ಟ್​ ಅಲ್ಲು ಅರ್ಜುನ್​ಗೆ ಆ್ಯಕ್ಷನ್ ಕಟ್ ಹೇಳ್ತಾರೆ ಎನ್ನಲಾಗ್ತಿದೆ. ಹೌದು, ಹೀಗೊಂದು ಸುದ್ದಿ ಸೌಂಡ್ ಮಾಡೋಕೆ ಸ್ವತಃ  ಪ್ರಶಾಂತ್​ ನೀಲ್​ರೇ ಕಾರಣ. ಇಂದು ಹೈದ್ರಾಬಾದ್​ನ ಅಲ್ಲು ಅರವಿಂದ್​​ರ ಆಫೀಸ್​ಗೆ ನಿರ್ದೇಶಕ ಪ್ರಶಾಂತ್ ನೀಲ್ ಭೇಟಿ ನೀಡಿದ್ದು, ಪ್ರಶಾಂತ್​ ನೀಲ್​ಗಾಗಿ ಅಲ್ಲು ಅರ್ಜುನ್​ ಕೂಡ ತಮ್ಮ ಅಪ್ಪನ ಆಫೀಸ್​ಗೆ ಭೇಟಿ ನೀಡಿದ್ದಾರೆ. ಅಲ್ಲು ಅರ್ಜುನ್ ಕ್ಯಾಮರಾಗೆ ಕೈ ಮಾಡಿ ಒಳ ಹೋಗ್ತಿರೋ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡ್ತಿವೆ.

ಹೈದ್ರಾಬಾದ್​ನ ಅಲ್ಲು ಅರವಿಂದ್ ಆಫೀಸ್​ನಲ್ಲಿ ಅಲ್ಲು ಅರ್ಜುನ್ ಹಾಗೂ ನಿರ್ದೇಶಕ ಪ್ರಶಾಂತ್​ ನೀಲ್ ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.   ದಿಢೀರನೆ ಗೀತಾ ಆರ್ಟ್ಸ್​​ಗೆ ಭೇಟಿ ನೀಡಿರೋ ಪ್ರಶಾಂತ್​ ನೀಲ್ ಅಲ್ಲು ಸ್ಟೈಲಿಷ್ ಸ್ಟಾರ್ ಜೊತೆ ಸ್ಕ್ರಿಪ್ಟ್​ ಬಗ್ಗೆ ಮಾತುಕತೆ ನಡೆಸಿದ್ದಾರೆ ಅಂತಾ ಮೂಲಗಳು ತಿಳಿಸಿವೆ. ಪ್ರಭಾಸ್​ರ ಸಲಾರ್ ಸಿನಿಮಾದ ನಂತರ ಅಲ್ಲು ಅರ್ಜುನ್ ಜೊತೆ ನೀಲ್ ಸಿನಿಮಾ ಮಾಡೋದು ಕನ್ಫರ್ಮ್ ಅನ್ನೋ ಸುದ್ದಿ ಟಿಟೌನ್ ಗಲ್ಲಿಯಲ್ಲಿ ಸಖತ್ ಸೌಂಡ್ ಮಾಡ್ತಿದೆ.

ಈಗಾಗಲೇ ಜೂನಿಯರ್ ಎನ್​.ಟಿ.ಆರ್ ಜೊತೆಯೂ ಪ್ರಶಾಂತ್​ ನೀಲ್​ ಸಿನಿಮಾವೊಂದನ್ನ ಮಾಡ್ತಿದ್ದು, ಸಲಾರ್ ನಂತರ ಅಲ್ಲು ಅರ್ಜುನ್ ಜೊತೆ ಆದ್ರೆ ಎನ್​ಟಿಆರ್ ಸಿನಿಮಾದ ಬಗ್ಗೆ ಏನು ಅನ್ನೋ  ಪ್ರಶ್ನೆ ಉದ್ಭವವಾಗಿವೆ. ಅಲ್ಲದೇ ಮಹೇಶ್ ಬಾಬುಗೂ ಕೆ.ಜಿ.ಎಫ್ ಮಾಂತ್ರಿಕ ಆ್ಯಕ್ಷನ್ ಕಟ್ ಹೇಳ್ತಾರೆ ಅಂತಾನೂ ಹೇಳಲಾಗ್ತಿದೆ.  ಹೀಗೆ ಟಾಲಿವುಡ್​ ಸ್ಟಾರ್​ಗಳ ಜೊತೆಯೇ ಪ್ರಶಾಂತ್​ ನೀಲ್​ ಹೆಸರು ಕೇಳಿ ಬರ್ತಿದ್ದು, ಸ್ಯಾಂಡಲ್​ವುಡ್ ಸ್ಟಾರ್​ಗಳನ್ನ ಮರೆತು ಬಿಡ್ತಾರಾ ಅಂತಾ ಕನ್ನಡಿಗರು ಪ್ರಶ್ನೆ ಮಾಡ್ತಿದ್ದಾರೆ.  ಒಟ್ಟಾರೆಯಾಗಿ ಸೌತ್ ಇಂಡಿಯಾದಲ್ಲಿ ತನ್ನದೇ ಟ್ರೆಂಡ್ ಕ್ರಿಯೇಟ್ ಮಾಡ್ತಿರೋ ಮಾಸ್ಟರ್ ಮೈಂಡ್ ನಿರ್ದೇಶಕ ಪ್ಯಾನ್ ಇಂಡಿಯಾದಾದ್ಯಂತ ಸೌಂಡ್ ಮಾಡೋ ಸಿನಿಮಾಗಳನ್ನ ಮಾಡ್ತಿರೋದಂತು ಸತ್ಯ.

ರಿಯಾಲಿಟಿ ಶೋ ಸುತ್ತ ಮೈಲಾಪುರ

Previous article

ರಾಘವನಿಗಾಗಿ ರಾಬರ್ಟ್ ಯುದ್ಧ…

Next article

You may also like

Comments

Leave a reply

Your email address will not be published.