ಬಿಗ್ ಬಾಸ್ ಶೋ ಸೀಸನ್ ನಾಲಕ್ಕರ ವಿನ್ನರ್ ಆಗಿದ್ದವರು ಪ್ರಥಮ್. ಆ ಸೀಜನ್ನಿನಲ್ಲಿ ಪ್ರಥಮ್ ಕೊಟ್ಟಿದ್ದ ಮನೋರಂಜನೆಯನ್ನ ಪ್ರೇಕ್ಷಕರಿನ್ನೂ ಮರೆತಿರಲಿಕ್ಕಿಲ್ಲ. ಒಂದಷ್ಟು ಕಿರಿಕ್ಕು, ಕೀಟಲೆ, ವಾದ ವಿವಾದಗಳಿಂದ ಸದ್ದು ಮಾಡಿದ್ದ ಪ್ರಥಮ್ ಇದೀಗ ಮತ್ತೆ ಬಿಗ್ಬಾಸ್ ಮನೆಯೊಳಗೆ ಪ್ರವೇಶಿಸಿದ್ದಾರೆ.
ಕಡೇಯ ವಾರಗಳಲ್ಲಿ ಹೊಸಾ ಅತಿಥಿಗಳು ಬಿಗ್ಬಾಸ್ ಮನೆ ಪ್ರವೇಶಿಸೋ ಪರಿಪಾಠ ಬೆಳೆದು ಬಂದಿದೆ. ಈಗಾಗಲೇ ಈ ಸೀಜನ್ನಿನಲ್ಲಿಯೂ ಸಾಕಷ್ಟು ಮಂದಿ ಬಿಗ್ಬಾಸ್ ಮನೆಗೆ ಹೋಗಿ ಬಂದಿದ್ದಾರೆ. ಇದೀಗ ಪ್ರಥಮ್ ಎಂಟ್ರಿ ಕೊಟ್ಟಿರೋದರಿಂದ ಒಂದಷ್ಟು ಮನೋರಂಜನೆ ಬಿಗ್ಬಾಸ್ ಪ್ರೇಕ್ಷಕರಿಗೆ ಸಿಗೋದು ಪಕ್ಕಾ!
ಈ ಸೀಜನ್ನಿನ ಬಿಗ್ಬಾಸ್ ಶೋ ಮೊದಲ ವಾರದಲ್ಲಿಯೇ ಜಗಳ, ಕಿರಿಕ್ಕುಗಳಿಂದ ಸದ್ದು ಮಾಡಿತ್ತು. ಈ ಸಲ ಇಡೀ ಶೋನ ಒಟ್ಟಾರೇ ರೂಪುರೇಷೆಗಳೂ ಬದಲಾಗಿವೆ. ಈಗಾಗಲೇ ಬಿಗ್ಬಾಸ್ ಮನೆಯೊಳಗೆ ಆಂಡಿಯಂಥಾ ಸೈಕೋ ಎಲಿಮೆಂಟುಗಳು, ರಾಕೇಶನಂಥಾ ಕಿರಿಕ್ಕು ಪಾರ್ಟಿಗಳಿಂದಲೇ ತುಂಬಿದೆ. ಇಂಥವರ ಮಧ್ಯೆ ಪ್ರಥಮ್ ಒಂದು ವಾರ ಇದ್ದು ಬಿಟ್ಟರೆ ಮನೆಯೊಳಗೆ ಹವಾಮಾನ ವೈಪರೀತ್ಯವಾಗೋದಂತೂ ಗ್ಯಾರೆಂಟಿ!
#