ಪ್ರಥಮ್ ನಿರ್ದೇಶಿಸಿ, ನಟಿಸುತ್ತಿರುವ ನಟ ಭಯಂಕರ ಚಿತ್ರ ಒಂದಾದ ಮೇಲೊಂದು ವಿಚಾರಕ್ಕೆ ನಿರಂತರವಾಗಿ ಸೌಂಡ್ ಮಾಡುತ್ತಿದೆ.
ಈಗ ಹೀರೋ ಇಂಟ್ರಡಕ್ಷನ್ ಹಾಡನ್ನು ಉಪೇಂದ್ರ ಹಾಡಿದ್ದಾರೆ. ಈ ವರೆಗೆ ಉಪ್ಪಿ ಹಾಡಿರುವ ಬಹುತೇಕ ಹಾಡುಗಳೆಲ್ಲಾ ಸೂಪರ್ ಹಿಟ್ ಆಗಿವೆ. ಬಹಳಷ್ಟು ಸ್ಟಾರ್ ನಟರಿಗೆ ಉಪ್ಪಿ ಹಾಡುತ್ತಲೇ ಬಂದಿದಾರೆ.
ಪ್ರಥಮ್ ಎನ್ನುವ ಪ್ರತಿಭಾವಂತ ರಿಯಾಲಿಟಿ ಶೋ, ಮಾತುಗಾರಿಕೆ, ಅದರಿಂದ ಬಾಚಿಕೊಂಡ ಪಬ್ಲಿಸಿಟಿ ಸೇರಿದಂತೆ ಮುಂತಾದ ವಿಚಾರಗಳಲ್ಲಿ ಎಷ್ಟೇ ಫೇಮಸ್ಸಾಗಿರಬಹುದು. ಸಿನಿಮಾದ ಮಟ್ಟಿಗೆ ಪ್ರಥಮ್ ಇನ್ನೂ ಎಳೇ ಕೂಸು. ಈಗಾಲೇ ಪ್ರಥಮ್ ನಟನೆಯ ಒಂದು ಸಿನಿಮಾ ತೆರೆಗೆ ಬಂದಿದ್ದರೂ ಅದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಬಿಗ್ ಬಾಸ್ ರಿಯಾಲಿಟಿ ಶೋ, ಅದಕ್ಕೂ ಮುಂಚೆ ಪ್ರಥಮ್ ಆರಂಬಿಸಿದ್ದ ಸಿನಿಮಾ ಎಲ್ಲವನ್ನೂ ಹೊರತಾಗಿಸಿ ಚಿತ್ರರಂಗದಲ್ಲಿ ಪ್ರಥಮ್ ಏನಾದರೂ ಗುರುತಿಸಿಕೊಳ್ಳಬೇಕು,  ತಲೆ ಎತ್ತಿ ನಿಲ್ಲಬೇಕು ಅಂದರೆ ಅದು ‘ನಟಭಯಂಕರ ಅನ್ನೋ ಸಿನಿಮಾದಿಂದ ಮಾತ್ರ ಸಾಧ್ಯ. ಇದು ಪ್ರಥಮ್ ಪಾಲಿಗೆ ನಿಜಕ್ಕೂ ನಿರ್ಣಾಯಕ ಘಟ್ಟ. ಹೀಗಾಗಿ ನಟಭಯಂಕರನನ್ನು ನಿಲ್ಲಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಪ್ರಥಮ್‌ಗೆ ಹೆಚ್ಚಿದೆ. ಯಾಕೆಂದರೆ ಇದು ಸ್ವತಃ ಪ್ರಥಮ್ ನಟಿಸಿ, ನಿರ್ದೇಶಿಸಿರುವ ಚಿತ್ರ!
ಈ ಸಿನಿಮಾ ಪ್ರಥಮ್ ವೃತ್ತಿಬದುಕಿಗೆ ವರವಾಗಬಹುದು, ನಿರೀಕ್ಷೆಯನ್ನು ಮೀರಿ ಏನೋ ಘಟಿಸಬಹುದು ಅನ್ನೋದರ ಕುರುಹೆನ್ನುವಂತೆ ‘ನಟಭಯಂಕರ  ಸಿನಿಮಾದ ಹೀರೋ ಇಂಟ್ರಡಕ್ಷನ್ ಹಾಡನ್ನು ಖುದ್ದು ರಿಯಲ್ ಸ್ಟಾರ್ ಉಪೇಂದ್ರ ಸಿಕ್ಕಾಪಟ್ಟೆ ಇಷ್ಟ ಪಟ್ಟು ಹಾಡಿದ್ದಾರೆ. ಉಪ್ಪಿ ಸಿನಿಮಾ ವಿಚಾರಗಳಲ್ಲಿ ಯಾವತ್ತಿಗೂ ನೇರವಂತಿಕೆಯನ್ನು ಉಳಿಸಿಕೊಂಡುಬಂದವರು. ಸುಖಾಸುಮ್ಮನೆ ಸಿನಿಮಾಗಳನ್ನು ಹೊಗಳುವುದು, ಜೈ ಅಂದುಬಿಡೋ ಜಾಯಮಾನದವರಲ್ಲ. ತಮಗಿಷ್ಟವಿಲ್ಲದ ಕೆಲಸದಲ್ಲಿ ತೊಡಗಿಸಿಕೊಳ್ಳುವವರೂ ಅಲ್ಲ. ಅಂಥವೇನಾದರೂ ಎದುರಾದರೂ ನಯವಾಗಿ ತಿರಸ್ಕರಿಸುವ ಬುದ್ದಿವಂತ ಉಪ್ಪಿ. ಇಂಥಾ ಉಪೇಂದ್ರ ಈ ಸಲ ಪ್ರಥಮ್ ನಟಿಸಿ, ನಿರ್ದೇಶಿಸುತ್ತಿರುವ ‘ನಟ ಭಯಕಂಕರ ಸಿನಿಮಾದ ಹಾಡನ್ನು ಇಷ್ಟಪಟ್ಟು ಹಾಡಿದ್ದಾರೆ. ಈ ಸಿನಿಮಾದ ಹಾಡಿನಲ್ಲಿ ಉಪ್ಪಿಗೆ ಸಿಕ್ಕ ರುಚಿ ಪ್ರೇಕ್ಷಕರಿಗೂ ದಕ್ಕುವಂತಾಗಲಿ.
CG ARUN

ಬಂದೇಬಿಟ್ಟ ಪೈಲ್ವಾನ್

Previous article

ಎಗರಾಡಿತು ಇಲಿ!

Next article

You may also like

Comments

Leave a reply

Your email address will not be published. Required fields are marked *