ಕಳೆದ ಐದಾರು ತಿಂಗಳಿಂದ ಪ್ರಥಮ್ ಸರ್ಕಾರಿ ಶಾಲೆಯ ಕಾರ್ಯಕ್ರಮಗಳನ್ನು ಬಿಟ್ಟರೆ ಬೇರೆಡೆ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ನಿರ್ಮಾಣಹಂತದಲ್ಲಿರುವ ನಟ ಭಯಂಕರ ಸಿನಿಮಾದ ಕೆಲಸಗಳನ್ನು ಮುಗಿಸಿ ಆಗಾಗ ನಾಪತ್ತೆಯಾಗುತ್ತಿದ್ದರು. ಆ ಸಮಯದಲ್ಲಿ ಏನು ಮಾಡುತ್ತಿದ್ದರು ಎನ್ನುವ ಪ್ರಶ್ನೆಗೆ ನಿಜಕ್ಕೂ ಅಚ್ಛರಿಯ ಉತ್ತರದೊಂದಿಗೆ ಪ್ರಥಮ್ ಎದುರಾಗಿದ್ದಾರೆ.
ಪ್ರಥಮ್!
ಕರ್ನಾಟಕದ ಪಾಲಿಗೆ ನಿಜಕ್ಕೂ ವರ್ಣರಂಜಿತ ವ್ಯಕ್ತಿತ್ವದ ಹೆಸರಿದು..
ಬಿಗ್ ಬಾಸ್ ಎನ್ನುವ ರಿಯಾಲಿಟಿ ಶೋನಲ್ಲಿ ಪ್ರಥಮ್ ಕಾಣಿಸಿಕೊಂಡು, ಗೆದ್ದು ಬಂದಮೇಲಂತೂ ಪ್ರತಿಯೊಬ್ಬ ಕನ್ನಡಿಗನ ಪಾಲಿಗೆ ಪ್ರಥಮ್ ಅನ್ನೋ ವ್ಯಕ್ತಿ ಮತ್ತು ವ್ಯಕ್ತಿತ್ವ ಕುತೂಹಲದ ವಸ್ತುವಾಗಿಬಿಟ್ಟಿತು.
ಅಸಾಧ್ಯ ಸ್ಪೀಡು, ಚೂಟಿ ಮಾತು, ದಿಢೀರ್ ನಿರ್ಧಾರಗಳನ್ನೆಲ್ಲಾ ಕಂಡವರು, ಮುಂದೆ ಈ ಹುಡುಗನ ಭವಿಷ್ಯ ಏನಾಗುತ್ತದೋ ಅಂದುಕೊಳ್ಳುವಂತಾಗಿತ್ತು. ಇದ್ದಕ್ಕಿದ್ದಂತೆ ನಾನು ಸಿನಿಮಾ ಹೀರೋ ಆಗುತ್ತೇನೆ ಅಂದಾಗ ಇದು ಒಂದು ಸಿನಿಮಾಗೆ ಮುಗಿದುಹೋಗಬಹುದು ಅನ್ನೋ ಲೆಕ್ಕಾಚಾರ ಎಲ್ಲರದ್ದಾಗಿತ್ತು. ಆದರೆ ಅದೀಗ ಮೂರನ್ನು ದಾಟಿದೆ. ಸ್ವಲ್ಪ ದಿನ ಕಳೆಯುತ್ತಿದ್ದತೆ ಸಿನಿಮಾವನ್ನು ಬಿಟ್ಟು ಊರು ಸೇರುತ್ತೇನೆ. ಮದುವೆಯಾಗುವ ಹೊತ್ತಿಗೆ ಕೃಷಿಕಗುತ್ತೀನಿ ಅಂತಾ ಸ್ವತಃ ಪ್ರಥಮ್ ಅಂದಾಗ ’ಈ ಹುಡುಗ ಪಬ್ಲಿಸಿಟಿಗೋಸ್ಕರ ಹೀಗನ್ನುತ್ತಿರಬಹುದು’ ಎಂದು ಜನ ನಗಾಡಿದ್ದರು. ಅದೇನೋ ಗೊತ್ತಿಲ್ಲ ಪ್ರಥಮ್ ಏನೇ ನಿರ್ಧಾರಗಳನ್ನು ಪ್ರಕಟಿಸಿದಾಗಲೂ ‘ಇದು ಸಾಧ್ಯವಾ’ ಅಂತಾ ಜಗತ್ತು ಅನುಮಾನದ ಕಣ್ಣಿನಿಂದಲೇ ನೋಡುತ್ತಾಬಂದಿದೆ. ಆದರೆ ಎಲ್ಲರನ್ನೂ ಆಶ್ಚರ್ಯಕ್ಕೀಡುಮಾಡುವಂತೆ ಪ್ರಥಮ್ ನುಡಿದಂತೆ ನಡೆಯುತ್ತಾ ಬರುತ್ತಿದ್ದಾರೆ.
ಪ್ರಥಮನ ವಿಚಾರದಲ್ಲಿ ತೀರಾ ಮೆಚ್ಚಬೇಕಾದ ವಿಚಾರವೊಂದಿದೆ. ಗೆದ್ದ ಬಹುತೇಕರಿಗೆ ಆರಂಭದಲ್ಲಿ ತಾವು ಮಾಡಿದ್ದೇ ಸರಿ ಎನ್ನುವ ಮನೋಭಾವವಿರುತ್ತದೆ. ಆ ಗೆಲುವಿನ ಪ್ರಭೆ ಕಣ್ಣುಗಳನ್ನು ಕಟ್ಟಿದಂತಾಗಿರುತ್ತದೆ. ಈ ನಿಟ್ಟಿನಲ್ಲಿ ಪ್ರಥಮ್ ನಡೆಯನ್ನು ಹಲವಾರು ಬಾರಿ ಮಾಧ್ಯಮ ಪ್ರಶ್ನಿಸಿದ್ದಿದೆ. ಇದು ಸರಿಯಲ್ಲ, ಹೀಗಿದ್ದರೆ ಚೆನ್ನ ಅಂತಾ ತಿದ್ದಲು ಪ್ರಯತ್ನಿಸಿದ ಸಂದರ್ಭಗಳೂ ಎದುರಾಗಿದ್ದವು. ಬೇರೆ ಯಾರಾದರೂ ಆಗಿದ್ದರೆ ‘ಅಯ್ಯೋ ಯಾರೇನಾದರೂ ಹೇಳಿಕೊಳ್ಳಲಿ ನನ್ನ ಪಾಡು ನನಗೆ’ ಅಂತಾ ಅಂದುಕೊಂಡು ತಮ್ಮಿಷ್ಟದಂತೆ ಮುನ್ನಡೆಯುತ್ತಿದ್ದರೋ ಏನೋ? ಪ್ರಥಮ್ ಹಾಗೆ ಮಾಡಲಿಲ್ಲ. ಮಾಧ್ಯಮದವರ ಪ್ರತಿಯೊಂದು ಕಿವಿಮಾತನ್ನೂ ತಲೆಗಿಳಿಸಿಕೊಂಡು, ತಪ್ಪಿದ್ದಾಗ ತಿದ್ದಿಕೊಂಡರು. ತಾನು ಮಾಡಿಕೊಂಡಿದ್ದ ಯಡವಟ್ಟುಗಳನ್ನು ಖುದ್ದು ತಾನೇ ನಿಂತು ಸರಿಪಡಿಸಿಕೊಂಡರು. ಇದೆಲ್ಲದರ ಪ್ರತಿಫಲವಾಗಿ ಇಂದು ಪ್ರಥಮ್’ರನ್ನು ಮಂದಿ ನೋಡುವ ದೃಷ್ಟಿಯೇ ಬದಲಾಗಿದೆ.
ಕಳೆದ ಐದಾರು ತಿಂಗಳಿಂದ ಪ್ರಥಮ್ ಸರ್ಕಾರಿ ಶಾಲೆಯ ಕಾರ್ಯಕ್ರಮಗಳನ್ನು ಬಿಟ್ಟರೆ ಬೇರೆಡೆ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ನಿರ್ಮಾಣಹಂತದಲ್ಲಿರುವ ನಟ ಭಯಂಕರ ಸಿನಿಮಾದ ಕೆಲಸಗಳನ್ನು ಮುಗಿಸಿ ಆಗಾಗ ನಾಪತ್ತೆಯಾಗುತ್ತಿದ್ದರು. ಆ ಸಮಯದಲ್ಲಿ ಏನು ಮಾಡುತ್ತಿದ್ದರು ಎನ್ನುವ ಪ್ರಶ್ನೆಗೆ ನಿಜಕ್ಕೂ ಅಚ್ಛರಿಯ ಉತ್ತರದೊಂದಿಗೆ ಪ್ರಥಮ್ ಎದುರಾಗಿದ್ದಾರೆ. ಕೊಳ್ಳೇಗಾಲದಿಂದಾಚೆ ಒಂದು ಪುಟ್ಟ ಗ್ರಾಮದಲ್ಲಿ ಭೂಮಿ ಖರೀದಿಸಿ ಭರ್ಜರಿ ವ್ಯವಸಾಯ ಮಾಡಿ ಜೋಳ, ಹುರುಳಿಕಾಳು ಬೆಳೆದು ಸರಿ ಸುಮಾರು ಎರಡು ವರೆ ಲಕ್ಷ ರೂ ಬೆಳೆ ಬೆಳೆದು ಲಾಭ ಮಾಡಿದ್ದಾರೆ ಪ್ರಥಮ್. ಬಿಗ್ ಬಾಸ್ ನಂತರ ದೇವ್ರಂಥ ಮನುಷ್ಯ, ಎಮ್.ಎಲ್.ಎ, ನಟಭಯಂಕರ ಇತ್ಯಾದಿ ಸಿನಿಮಾ ಮಾಡಿದ ಪ್ರಥಮ್ ಮೂರೂ ಸಿನಿಮಾದಲ್ಲಿ ಪಡೆದ ಅಷ್ಟೂ ಸಂಭಾವನೆಯ ದುಡ್ಡನ್ನು ಭೂಮಿ ಮೇಲೆ ಹಾಕಿ, ಈಬಾರಿ ನೀರಿನ ಅಭಾವವಿದ್ದರೂ ಸಹ ಭರ್ಜರಿ ಬೆಳೆ ತೆಗೆದು ಮುಂದಿನ ದಿನಗಳಲ್ಲಿ ಪರಿಪೂರ್ಣ ಕೃಷಿಕನಾಗುವ ಸೂಚನೆ ನೀಡಿದ್ದಾರೆ.
ವೈಯುಕ್ತಿಕವಾಗಿ ತೀರಾ ಸರಳವಾಗಿ ಬದುಕುತ್ತಿರೋ ಪ್ರಥಮ್ ಬಳಿ ಈಗಲೂ ಒಂದು ವಾಹನವಿಲ್ಲ! ಯಾವುದೇ ಕಾರ್ಯಕ್ರಮಗಳಿದ್ದರೂ ಆಯೋಜಕರೇ ಕಾರು ಕಳಿಸಬೇಕು, ಮನೆಗೆ ತಂದು ಬಿಡಬೇಕು.
ವ್ಯವಸಾಯಕ್ಕೆ ಏನು ಬೇಕೋ ಅದನ್ನ ತಾನೇ ವ್ಯಯಿಸಿ ತನ್ನ ತಂದೆ ಜೊತೆಗೂಡಿ ಈ ಬಾರಿ ನಾಲ್ಕು ಎಕರೆ ಭೂಮಿಯಲ್ಲಿ ಹುರಳಿ, ಜೋಳದ ಬೆಳೆಯನ್ನು ಬೆಳೆದಿದ್ದಾರೆ. ಕೃಷಿಕನಾಗುತ್ತೀನಿ ಅಂತಾ ಪ್ರಥಮ್ ಹೇಳಿದಾಗ ಯಯಾರೆಲ್ಲಾ ಲೇವಡಿ ಮಾಡಿದ್ದರೋ ಅವರೇ ಕರೆ ಮಾಡಿ ಅಭಿನಂದಿಸುತ್ತಿದ್ದಾರೆ. ಈ ಯಶಸ್ಸು ಪ್ರಥಮ್’ಗೆ ವ್ಯವಸಾಯದಲ್ಲಿ ಮತ್ತಷ್ಟು ಮುಂದುವರೆಯಲು ಉತ್ತೇಜನ ನೀಡಿದೆ. ನಟಭಯಂಕರ ಜೊತೆಗೆ ಉಳಿದಿರೋ ಒಂದು ಪ್ರಾಜೆಕ್ಟ್ ಮುಗಿಸಿ ಮದುವೆಯಾಗೋದರೊಳಗೆ ಪೂರ್ಣಪ್ರಮಾಣದಲ್ಲಿ ಕೃಷಿಕನಾಗುವ ಕಡೆ ಪ್ರಥಮ್ ಗಮನ ಹರಿಸಿರೋದು ನಿಜಕ್ಕೂ ಮೆಚ್ಚಬೇಕಿರುವ ವಿಚಾರ.
No Comment! Be the first one.