ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇನ್ನೇನು ಗೃಹಸ್ಥರಾಗೋ ಸಮಯ ಹತ್ತಿರ ಬಂದಂತಿದೆ. ಇತ್ತೀಚೆಗಷ್ಟೇ ಪ್ರೇರಣಾ ಜೊತೆ ಅವರ ನಿಶ್ಚಿತಾರ್ತವೂ ನಡೆದಿದೆ. ಇದೀಗ ನಟ ಭಯಂಕರ ಪ್ರಥಮ್ ಈ ಭಾವೀ ದಂಪತಿಯನ್ನು ಭೇಟಿಯಾಗಿ ಅವರ ಜೊತೆಗೊಂದಿಷ್ಟು ಮಾತು, ಹರಟೆ ತಮಾಶೆಯ ಕ್ಷಣಗಳನ್ನು ಕಳೆದು ಭರ್ಜರಿ ಆತಿಥ್ಯವನ್ನೂ ಪಡೆದು ಬಂದಿದ್ದಾರೆ!
ಧ್ರವಾ ಸಜಾರನ್ನು ಪ್ರಥನ್ ಸಹೋದರ ಎಂದೇ ಈ ವರೆಗೂ ಅಲ್ಲಲ್ಲಿ ಹೇಳಿಕೊಂಡಿದ್ದಿದೆ. ಧ್ರುವ ಕೂಡಾ ಈ ಹಿಂದೆ ಪ್ರಥಮ್ ಚಿತ್ರಕ್ಕೆ ಸಾಥ್ ಕೊಟ್ಟಿದ್ದೂ ನಡೆದಿತ್ತು. ಇಂಥಾ ಧ್ರುವ ಅವರ ಲವ್ ಮ್ಯಾಟರ್ ಬಯಲಾಗುತ್ತಲೇ ಪ್ರಥಮ್ ಬೆಂಬಿದ್ದಿದ್ದರಂತೆ. ಧ್ರುವ ಅವರನ್ನು ಪ್ರೇರಣಾ ಸಮೇತ ಭೇಟಿಯಾಗಬೇಕೆಂಬುದು ಪ್ರಥಮ್ ಬೇಡಿಕೆಯಾಗಿತ್ತು!
ಕಡೆಗೂ ಅದಕ್ಕೆ ಒಪ್ಪಿಗೆ ನೀಡಿದ ಧ್ರುವ ತಾನೇ ಪ್ರಥಮ್ನನ್ನು ಕಾರ್ನಲ್ಲಿ ಪ್ರೇರಣಾ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಆ ಬಳಿಕ ಪ್ರಥಮ್ ಪ್ರೇರಣಾ ಮತ್ತವರ ಪೋಷಕರ ಜೊತೆ ಖುಷಿಯಿಂದಲೇ ಹರಟಿದ್ದಾರೆ. ಜೊತೆಗೆ ಭರ್ಜರಿ ಆತಿಥ್ಯವನ್ನೂ ಸ್ವೀಕರಿಸಿದ್ದಾರೆ.
ಧ್ರುವ ಸರ್ಜಾರಂಥಾ ಹುಡುಗನನ್ನು ಪಡೆದಿರೋ ಪ್ರೇರಣಾ ಲಕ್ಕಿ ಅಂತಾರೆ. ಆದರೆ ಪ್ರಚಾರ ಅಂದ್ರೆ ಅಲರ್ಜಿ ಅನ್ನೋ ಪ್ರೇರಣಾರಂಥಾ ಹುಡುಗಿಯನ್ನ ಪಡೆದ ಧ್ರುವ ಕೂಡಾ ಲಕ್ಕಿ ಅನ್ನೋದು ಪ್ರಥಮ್ ಅಭಿಪ್ರಾಯ. ಜೊತೆಗೆ ಪ್ರೇರಣಾ ವರದ್ದೊ ಒಳ್ಳೆ ಫ್ಯಾಮಿಲಿ ಅಂತ ಮೆಚ್ಚುಗೆ ಸೂಚಿಸಿರುವ ಪ್ರಥಮ್ ಅವರಿಗೆಲ್ಲ ಧ್ರುವ ಬರೀ ಅಳಿಯನಲ್ಲ, ಒಳ್ಳೇ ಸ್ನೇಹಿತ ಎಂಬ ಮಾತನ್ನೂ ಹೇಳಿದ್ದಾರೆ.
#
No Comment! Be the first one.