8ಎಂಎಂ ಸಿನಿಮಾದ ಬಳಿಕ ನವರಸ ನಾಯಕ ಜಗ್ಗೇಶ್ ನಟಿಸುತ್ತಿರುವ ಪ್ರೀಮಿಯರ್ ಪದ್ಮಿನಿ ಸಿನಿಮಾ ಈ ವಾರ ತೆರೆಗೆ ಬರಲಿದೆ. ಚಿತ್ರದಲ್ಲಿ ಜಗ್ಗೇಶ್ ಗೆ ಅಣ್ಣಯ್ಯ ಮಧುಬಾಲ ಸಾಥ್ ನೀಡಲಿದ್ದಾರೆ. ಸಿನಿಮಾದ ಪ್ರಚಾರಕ್ಕಾಗಿ ಹಳೆಯ ಪದ್ಮಿನಿ ಕಾರೊಂದನ್ನೇ ಚಿತ್ರತಂಡ ಸಿದ್ಧಪಡಿಸಿದೆ. ಸಿನಿಮಾ ಪ್ರಚಾರದ ಸಲುವಾಗಿಯೇ ಈ ಕಾರನ್ನು ಸಿದ್ಧಪಡಿಸಿದ್ದು, ಸಿನಿಮಾಕ್ಕೂ ಇದೇ ಕಾರನ್ನು ಬಳಸಿಕೊಳ್ಳಲಾಗಿದೆಯಂತೆ.
ಅಂದಹಾಗೆ ಜಗ್ಗೇಶ್ ತಮ್ಮ ಎಂದಿನ ಕಾಮಿಡಿ ಜಾನರ್ ನ್ನು ಬಿಟ್ಟು, ತುಂಬಾನೆ ಇಷ್ಟಪಟ್ಟು ಮಾಡಿರೋ ಸಿನಿಮಾ ಇದಾಗಿದ್ದು, ಈ ಸಲುವಾಗಿ ಜಗ್ಗೇಶ್ ಚಿತ್ರದ ಪ್ರೊಮೋಷನ್ ನಲ್ಲಿ ಲಘುಬಗೆಯಿಂದ ಪಾಲ್ಗೊಂಡಿದ್ದಾರೆ. ಇನ್ನು ಈ ಸಿನಿಮಾವನ್ನು ಖ್ಯಾತ ಕಿರುತೆರೆ ಧಾರಾವಾಹಿ ನಿರ್ದೇಶಕ ರಮೇಶ್ ಇಂದಿರಾ ನಿರ್ದೇಶಿಸುತ್ತಿದ್ದು, ಶೃತಿ ನಾಯ್ಡು ನಿರ್ಮಾಣ ಮಾಡಿದ್ದಾರೆ. ಇನ್ನು ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಅರ್ಜುನ್ ಜನ್ಯಾ ಸಂಗೀತ ಪ್ರೀಮಿಯರ್ ಪದ್ಮಿನಿಗಿದೆ. ಜಗ್ಗೇಶ್ ಜೊತೆಗೆ ಸುಧಾರಾಣಿ, ಪ್ರಮೋದ್, ಹಿತಾ ಚಂದ್ರಶೇಖರ್, ವಿವೇಕ್ ಸಿಂಹ ಸೇರಿದಂತೆ ಅನೇಕರು ನಟಿಸಿದ್ದಾರೆ.
No Comment! Be the first one.