ಒರು ಅಡಾರ್ ಲವ್ ಸಿನಿಮಾದ ದೃಶ್ಯವೊಂದರಲ್ಲಿ ಕಾಳ್ ಹಾಕುತ್ತಿದ್ದ ಪ್ರಿಯಕರನಿಗೆ ಕಣ್ಣೊಡೆಯುವ ಮೂಲಕ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ರಾತ್ರೋ ರಾತ್ರಿ ಇಡೀ ವಿಶ್ವಕ್ಕೆ ಸೆಲೆಬ್ರೆಟಿಯಾಗಿ ಪರಿಚಯವಾಗಿಬಿಟ್ಟರು. ಆನಂತರ ಆಕೆ ಮುಟ್ಟಿದ್ದೆಲ್ಲವೂ ಚಿನ್ನವೇ. ಆಕೆಯನ್ನು ಫೇಮಸ್ ಮಾಡಿದ ಸಿನಿಮಾ ಅಟ್ಟರ್ ಫ್ಲಾಫ್ ಆಗಿ ಹೋಯ್ತು ಎಂದರೆ ನಂಬಲಿಕ್ಕೂ ಸಾಧ್ಯವಾಗುವುದಿಲ್ಲ. ಆದರೆ ಅದು ಸತ್ಯವೇ. ಆನಂತರ ಶ್ರೀದೇವಿ ಬಂಗ್ಲೋ ಸಿನಿಮಾದಲ್ಲಿ ಪ್ರಿಯಾ ನಟಿಸಿ ಸಾಕಷ್ಟು ವಿವಾದಗಳನ್ನು ಮೈ ಮೇಲೆ ಎಳೆದುಕೊಂಡು ಪರದಾಡುವಂತಾಯಿತು.
ಸದ್ಯ ಪ್ರಿಯಾ ಪ್ರಕಾಶ್ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಹೌದು ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ, ಸಂಭಾಷಣೆಕಾರರಾಗಿ ಗುರುತಿಸಿಕೊಂಡಿದ್ದ ರಘು ಕೋವಿ ಹೊಸ ಸಿನಿಮಾವೊಂದನ್ನು ಮಾಡಲಿದ್ದಾರೆ. ಚಿತ್ರಕ್ಕೆ ಟೈಟಲ್ಲಿನ್ನು ಫೈನಲ್ ಆಗಲಿದ್ದರೂ ಸಹ ನಾಯಕಿನಾಗಿ ಪ್ರಿಯಾ ರನ್ನು ಕರೆ ತರುವ ಕೆಲಸದಲ್ಲಿ ರಘು ಬ್ಯುಸಿಯಾಗಿದ್ದಾರೆ. ಎಲ್ಲ ಅಂದುಕೊಂಡಂತಾದರೆ ಸಿನಿಮಾದ ಚಿತ್ರೀಕರಣವನ್ನು ಆಗಸ್ಟ್ ನಲ್ಲಿ ಶುರು ಮಾಡಲು ರಘು ಪ್ಲ್ಯಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ಸತ್ಯ ಹೆಗಡೆ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಈ ಚಿತ್ರಕ್ಕಿರಲಿದೆ. ಈ ಹಿಂದೆ ಕಿಲ್ಲಿಂಗ್ ವೀರಪ್ಪನ್ ನಿರ್ಮಾಣದಲ್ಲಿ ಪಾಲುದಾರರಾಗಿದ್ದ ಬಿ.ಎಸ್. ಸುಧೀಂದ್ರ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.
No Comment! Be the first one.