ಪ್ರಿಯಾಳ ಕಣ್ಣಿನ ನೋಟಕ್ಕೆ ಮರುಳಾಗಿದ್ದವರೆಲ್ಲಾ ಈಗ ಈಕೆಯ ಎದೆ ಮೇಲೆ ಕಣ್ಣಿದ್ದಾರೆ. ಎಲ್ಲೋ ಕೆಲವರು ಮಾತ್ರ ಒಂದು ಕಣ್ಸನ್ನೆಯಿಂದ ಸೆಳೆದವಳು, ಈ ಮಟ್ಟಿಗೆ ಬಿಚ್ಚುವ ಅಗತ್ಯವಿತ್ತಾ ಅಂತಾ ಕೊಂಕು ತೆಗೆದಿದ್ದಾರೆ!
ಒರು ಅಡಾರ್ ಲವ್ ಎನ್ನುವ ಮಲಯಾಳಂ ಸಿನಿಮಾದ ಹಾಡಿನ ದೃಶ್ಯಕ್ಕಾಗಿ ಕಣ್ಣು ಮಿಟುಕಿಸಿ, ರಾತ್ರಿ ಕಳೆದು ಬೆಳಕಾಗುವ ಹೊತ್ತಿಗೆ ವಿಶ್ವ ಪ್ರಸಿದ್ಧಿ ಪಡೆದವಳು ನಟಿ ಪ್ರಿಯಾ ಪ್ರಕಾಶ್ ವಾರಿಯರ್. ಕಣ್ಸನ್ನೆಯಿಂದ ಪ್ರಿಯಾ ದೇಶವ್ಯಾಪಿ ಪಬ್ಲಿಸಿಟಿ ಪಡೆದಿದ್ದೇನೋ ಸರಿ. ಸಿನಿಮಾ ಅಡ್ಡಡ್ಡ ಮಲಗಿತು. ಆದರೆ, ಪ್ರಿಯಾಗೆ ಮಾತ್ರ ಅವಕಾಶ ಕಡಿಮೆಯಾಗಲಿಲ್ಲ. ಕನ್ನಡ ಸೇರಿದಂತೆ ಭಾರತೀಯ ಚಿತ್ರರಂಗದ ಬಹುತೇಕ ಭಾಷೆಯಲ್ಲೀಕೆ ಛಾನ್ಸು ಗಿಟ್ಟಿಸುತ್ತಿದ್ದಾಳೆ. ಸದ್ಯ ಕೊಬ್ರಿ ಮಂಜು ಮಗ ಶ್ರೇಯಸ್ ಜೊತೆ ವಿಷ್ಣುಪ್ರಿಯ ಹೆಸರಿನ ಸಿನಿಮಾದಲ್ಲೀಕೆ ಹೀರೋಯಿನ್ನು.
ಈಗಿನ ವಿಚಾರವೇನೆಂದರೆ, ಮನೆಮಗಳಂತೆ ಬಟ್ಟೆ ತೊಟ್ಟು ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದ ಪ್ರಿಯಾ ಇದ್ದಕ್ಕಿದ್ದಂತೆ ತನ್ನ ಔಟ್ ಲುಕ್ಕನ್ನು ಬದಲಿಸಿಕೊಂಡಿದ್ದಾಳೆ. ಎದೆ ಎದ್ದು ಕಾಣುವಂತಾ ಬಟ್ಟೆಯಲ್ಲಿ ತೆಗೆಸಿರುವ ಫೋಟೋವನ್ನು ತನ್ನ ಇನ್ಸ್ಟಾಗ್ರಾಮಿನಲ್ಲಿ ಟ್ಯಾಗ್ ಮಾಡಿದ್ದಾಳೆ. ಏಕಾಏಕಿ ಈ ಮಟ್ಟಿಗೆ ಪರಿವರ್ತನೆ ಹೊಂದಿರುವ ಪ್ರಿಯಾಳ ಫೋಟೋ ನೋಡಿ ಜನ ದಂಗಾಗಿದ್ದಾರೆ. ಈ ಫೋಟೋ ಕೂಡಾ ಹೆಚ್ಚೂ ಕಮ್ಮಿ ಇವಳ ಕಣ್ಸನ್ನೆಯ ಮಟ್ಟಿಗೇ ವೈರಲ್ ಆಗಿದೆ. ಪ್ರಿಯಾಳ ಕಣ್ಣಿನ ನೋಟಕ್ಕೆ ಮರುಳಾಗಿದ್ದವರೆಲ್ಲಾ ಈಗ ಈಕೆಯ ಎದೆ ಮೇಲೆ ಕಣ್ಣಿದ್ದಾರೆ. ಎಲ್ಲೋ ಕೆಲವರು ಮಾತ್ರ ಒಂದು ಕಣ್ಸನ್ನೆಯಿಂದ ಸೆಳೆದವಳು, ಈ ಮಟ್ಟಿಗೆ ಬಿಚ್ಚುವ ಅಗತ್ಯವಿತ್ತಾ ಅಂತಾ ಕೊಂಕು ತೆಗೆದಿದ್ದಾರೆ!
No Comment! Be the first one.