ಇಲ್ಲಿಯವರೆಗೂ ಹೆಚ್ಚು ಮಹಿಳಾ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡ ನಟಿ ಪ್ರಿಯಾ ಹಾಸನ್. ಜಂಭದ ಹುಡುಗಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಪಡೆದ ಪ್ರಿಯಾ ಹಾಸನ್ ಸದ್ಯ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹೌದು.. ನಿನ್ನೆಯಷ್ಟೇ ಬೆಂಗಳೂರಿನ ಕ್ಲೌಡ್ ನೈನ್ ಆಸ್ಪತ್ರೆಯಲ್ಲಿ ಮುದ್ದಾದ ಗಂಡು ಮಗುವಿನ ತಾಯಿಯಾಗಿದ್ದಾರೆ.
ಮಗು ಮತ್ತು ಪ್ರಿಯಾ ಹಾಸನ್ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.2016ರಂದು ರಿಯಲ್ ಎಸ್ಟೇಟ್ ಉದ್ಯಮಿ ರಾಮು ಎಂಬುವವರನ್ನು ವರಿಸಿದ್ದ ಪ್ರಿಯಾ ಹಾಸನ್ ಸದ್ಯ ತಾಯ್ತನದ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಜೂನಿಯರ್ ಮಾಲಾಶ್ರೀ ಎಂದೇ ಗುರುತಿಸಿಕೊಂಡಿರುವ ಪ್ರಿಯಾ ಹಾಸನ್ 2007ರಲ್ಲಿ ಜಂಭದ ಹುಡುಗಿ ಚಿತ್ರದಲ್ಲಿ ನಟಿಸಿ, ನಂತರ ಬಿಂದಾಸ್ ಹುಡುಗಿ, ಸದ್ಯ ರಣಚತುರೆ ಎಂಬ ಸಿನಿಮಾವನ್ನು ನಟಿಸಿ, ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ.
No Comment! Be the first one.