ರಾತ್ರೋ ರಾತ್ರಿ ತನ್ನ ಕಣ್ಸನ್ನೆಯಿಂದಲೇ ನ್ಯಾಷನಲ್ ಕ್ರಶ್ ಆದ ಪ್ರಿಯಾ ಪ್ರಕಾಶ್ ವಾರಿಯರ್ ಯಾರಿಗೆ ತಾನೆ ಗೊತ್ತಿಲ್ಲ. ಕಣ್ ಹೊಡೆದು ಯುವಕರನ್ನು ಕ್ಲೀನ್ ಬೋಲ್ಡ್ ಮಾಡಿದ್ದ ಪ್ರಿಯಾ ರಾತ್ರಿ ಕಳೆದು ಬೆಳಗಾಗುವುದರಲ್ಲೇ ವರ್ಲ್ಡ್ ಸ್ಟಾರ್ ಆಗಿ ಮಿಂಚಿದವರು. ಒರು ಆಡಾರ್ ಲವ್ ಚಿತ್ರದ ಆ ಒಂದು ಪುಟ್ಟ ದೃಶ್ಯ ಪ್ರಿಯಾ ಪ್ರಕಾಶ್ ವಾರಿಯರ್ ಸಿನಿ ಜೀವನವನ್ನೇ ಚೇಂಜ್ ಮಾಡಿತ್ತು.
ಕಣ್ಣು ಮಿಟುಕಿಸಿ ಚಮಕ್ ಕೊಟ್ಟು ಹೋದ ಪ್ರಿಯಾ ಈಗ ಏನ್ಮಾಡಿದ್ದೀರೆ ಎನ್ನುವ ಯಕ್ಷ ಪ್ರಶ್ನೆ ಅಭಿಮಾನಿಗಳಲ್ಲಿತ್ತು. ಸದ್ಯ ಪ್ರಿಯಾ ಲವ್ ಹ್ಯಾಕರ್ಸ್ ಎನ್ನುವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ವಿಶೇಷವೆಂದರೆ ಪ್ರಿಯಾ ಅಭಿನಯಿಸುತ್ತಿರುವ ಎರಡನೇ ಬಾಲಿವುಡ್ ಸಿನಿಮಾವಾಗಿದೆ.
ಅಂದಹಾಗೆ ‘ಲವ್ ಹ್ಯಾಕರ್ಸ್’ ಹೆಸರೆ ಹೇಳುವ ಹಾಗೆ ಸೈಬರ್ ಬಗ್ಗೆ ಇರುವ ಸಿನಿಮಾವಾಗಿದೆ. ಕ್ರೈಮ್ ಥ್ರಿಲ್ಲಿಂಗ್ ಚಿತ್ರ ಇದಾಗಿದ್ದು ಈ ಚಿತ್ರದಲ್ಲಿ ಪ್ರಿಯಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಆನ್ ಲೈನ್ ಹ್ಯಾಕಿಂಗ್ ಗೆ ಸಂಬಂಧಿಸಿದ ಕತೆ ಇದಾಗಿದ್ದು ಕೆಲವು ನೈಜ ಘಟನೆಗಳನ್ನು ಸ್ಫೂರ್ತಿಯಾಗಿರಿಸಿಕೊಂಡು ಮಾಡಿದ ಸಿನಿಮಾ ಇದಾಗಿದಲಿದೆ. ಸೈಬರ್ ಸುಳಿಯಲ್ಲಿ ಸಿಲುಕಿಕೊಳ್ಳುವ ಯುವತಿ ಅದರಿಂದ ಹೇಗೆ ಆಚೆಗೆ ಬರುತ್ತಾಳೆ ಎನ್ನುವುದು ಚಿತ್ರದ ತಿರುಳು. ಚಿತ್ರಕ್ಕೆ ಮಯಾಂಕ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ‘ಲವ್ ಹ್ಯಾಕರ್ಸ್’ ಪ್ರಿಯಾ ಅಭಿನಯದ ಎರಡನೇ ಬಾಲಿವುಡ್ ಸಿನಿಮಾ. ಈ ಮೊದಲು ‘ಶ್ರೀದೇವಿ ಬಂಗ್ಲೋ’ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಪ್ರಿಯಾ ಮೊದಲ ಸಿನಿಮಾ ಬಿಡುಗಡೆಗೂ ಮೊದಲೆ ಎರಡನೆ ಬಾಲಿವುಡ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
No Comment! Be the first one.