ವರ್ಷದ ಹಿಂದೆ ಮದುವೆಯಾಗೋ ಮೂಲಕ ಸಂಸಾರಸ್ಥೆಯಾಗಿದ್ದ ಪ್ರಿಯಾಮಣಿ ಆ ನಂತರ ಚಿತ್ರರಂಗದಿಂದ ಸಂಪೂರ್ಣವಾಗಿಯೇ ಕಣ್ಮರೆಯಾಗಿದ್ದಳು. ಆಕೆ ಸಾಮಾಜಿಕ ಜಾಲತಾಣಗಳಲ್ಲಿಯೂ ಹೆಚ್ಚು ಆಕ್ಟೀವ್ ಆಗಿರದ ಕಾರಣ ಅಭಿಮಾನಿಗಳೆಲ್ಲ ಕಸಿವಿಸಿಗೊಂಡಿದ್ದರು. ಇದೀಗ ಪ್ರಿಯಾಮಣಿ ಟ್ವಿಟರ್ನಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷಳಾಗಿದ್ದಾಳೆ!
ಹಾಗಂತ ಟ್ವಿಟರ್ ಮೂಲಕ ಪ್ರಿಯಾಮಣಿ ಮತ್ತೆ ನಟನೆಗೆ ವಾಪಾಸಾಗೋದರ ಬಗೆಗಾಗಲಿ, ಹೊಸಾ ಚಿತ್ರದ ವಿಚಾರವನ್ನಾಗಲಿ ಹೇಳಿಕೊಂಡಿಲ್ಲ. ಆದರೆ ಸುತ್ತೀ ಬಳಸಿ ತಾನು ತಾಯಿಯಾಗುತ್ತಿರೋ ಸೂಚನೆಯನ್ನು ನೀಡಿದ್ದಾಳೆ!
ಟ್ವಿಟರ್ನಲ್ಲಿ ತಂನ್ನ ಪತಿ ಮುಸ್ತಫಾ ರಾಜ್ ಜೊತೆಗಿನ ಕಲರ್ ಕಲರ್ ಫೋಟೋಗಳನ್ನು ಹಾಕಿಕೊಂಡಿರೋ ಪ್ರಿಯಾಮಣಿ ತನ್ನ ಸಂಸಾರಕ್ಕೆ ಪುಟ್ಟ ಅತಿಥಿಯ ಆಗಮನ ಆಗುತ್ತಿರೋದರ ಸೂಚನೆ ಕೊಟ್ಟಿದ್ದಾಳೆ. ಇದನ್ನು ಬೇಗನೆ ಅರ್ಥ ಮಾಡಿಕೊಂಡಿರೋ ಅಭಿಮಾನಿಗಳೆಲ್ಲ ಶುಭಾಶಯಗಳ ಸುರಿಮಳೆಯನ್ನೇ ಹರಿಸಲಾರಂಭಿಸಿದ್ದಾರೆ.
ಕಳೆದ ವರ್ಷ ಮುಸ್ತಾಫಾನನ್ನು ಮದುವೆಯಾಗಿದ್ದ ಪ್ರಿಯಾಮಣಿ ಚಿತ್ರ ರಂಗದಿಂದ ದೂರವಾಗೋ ನಿರ್ಧಾರ ಮಾಡಿದ್ದಳೋ ಅಥವಾ ಆ ನಂತರದ ಸಾಂಸಾರಿಕ ಜಂಜಾಟಗಳೇ ಆಕೆಯನ್ನು ದೂರವಿಟ್ಟಿದ್ದವೋ ಗೊತ್ತಿಲ್ಲ. ಆದರೆ ನಟನೆಯತ್ತ ಮಾತ್ರ ಆಕೆ ಮನಸು ಮಾಡಿಲ್ಲ. ಇದೀಗ ಆಕೆಯೇ ತಾಯಿಯಾಗುತ್ತಿರುವ ವಿಚಾರವನ್ನು ಹೇಳಿಕೊಂಡಿರೋದರಿಂದ ಸದ್ಯಕ್ಕೆ ಆಕೆಯನ್ನು ಹೊಸಾ ಚಿತ್ರಗಳಲ್ಲಿ ನೋಡುವ ಅಭಿಮಾನಿಗಳ ಆಸೆ ಕೈಗೂಡುವ ಲಕ್ಷಣಗಳು ಕಾಣಿಸುತ್ತಿಲ್ಲ!
#