ಕೆಲ ಸಿನಿಮಾ ತಾರೆಯರು ಮದುವೆಯಾದ ಮೇಲೆ ಬಣ್ಣದ ಲೋಕದಿಂದ ದೂರ ಉಳಿದು ಬಿಡುತ್ತಾರೆ. ಮತ್ತೂ ಕೆಲವರೂ ಸೆಕೆಂಡ್ ಇನ್ನಿಂಗ್ಸ್ ನಲ್ಲಿಯೂ ತರಹೇವಾರಿ ಸಿನಿಮಾಗಳನ್ನೊಪ್ಪಿ ಗೆದ್ದು ಬೀಗುತ್ತಾರೆ. ಗಾಯಕ ನಿಕ್ ಜೋನಸ್ ಅವರನ್ನು ವಿವಾಹವಾದ ಬಳಿಕ ನಟಿ ಪ್ರಿಯಾಂಕ ಚೋಪ್ರಾ ಸಿನಿಮಾಗಳಲ್ಲಿ ಅಷ್ಟೇನೂ ಆಸಕ್ತಿ ತೋರದೇ ಜಾಲಿ ಮೂಡ್ ನಲ್ಲಿ ಅನ್ನಿಸಿದ ಕಡೆಗೆಲ್ಲಾ ಟ್ರಿಪ್ ಹೋಗುತ್ತಾ ಸಾಂಸಾರಿಕ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಮೇಲಾಗಿ ಪಿಂಕಿಗೆ ಅವಕಾಶದ ಕೊರತೆಯೂ ಇದೆ ಎಂಬ ಗುಸುಗುಸು ಬಿ ಟೌನ್ ನಲ್ಲಿ ಕೇಳಿಬರುತ್ತಿದೆ. ಈ ಮಧ್ಯೆ ಈ ಅಪವಾದವನ್ನು ತೊಡೆದು ಹಾಕುವ ಸಲುವಾಗಿ ಪ್ರಿಯಾಂಕ್ ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರವಾಗಲಿರುವ ವಿ ಕ್ಯಾನ್ ಬಿ ಹಿರೋಸ್ ಎಂಬ ಬಿಗ್ ಬಜೆಟ್ ಸಿರೀಸ್ ವೊಂದರಲ್ಲಿ ನಟಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
📸 | @priyankachopra with director @Rodriguez on the set of #WeCanBeHeroes pic.twitter.com/r6C5VeM7a5
— PRIYANKA DAILY (@PriyankaDailyFC) August 24, 2019
ಅಲ್ಲದೇ ಪ್ರಿಯಾಂಕ ಶೂಟಿಂಗ್ ಸೆಟ್ ನಲ್ಲಿರುವ ಪೋಟೋವೊಂದನ್ನು ಚೋಪ್ರಾ ಫ್ಯಾನ್ ಪೇಜ್ ಟ್ವಿಟರ್ ನಲ್ಲಿ ಹಂಚಿಕೊಂಡಿದೆ. ಈ ಪೋಟೋದಲ್ಲಿ ಪ್ರಿಯಾಂಕಾ ನಿರ್ದೇಶಕ ರಾಬರ್ಟ್ ರೋರ್ಡಿಗಸ್ ಹಾಗೂ ಪುಟಾಣಿ ಮಕ್ಕಳು ಇದ್ದಾರೆ. ಈ ಸಿರೀಸ್ ಸಂಪೂರ್ಣವಾಗಿ ಅನ್ಯಲೋಕದ ಏರಿಯನ್ಸ್ ಆಧರಿತವಾಗಿದ್ದು, ಏಲಿಯನ್ಗಳು ಭೂಮಿಯಲ್ಲಿರೋ ಸೂಪರ್ ಹೀರೋಗಳನ್ನು ಕಿಡ್ನಾಪ್ ಮಾಡಿದ ಸಂದರ್ಭದಲ್ಲಿ ಅವರ ಮಕ್ಕಳೆಲ್ಲಾ ಒಂದಾಗಿ ತಮ್ಮ ಪೋಷಕರನ್ನು ಹಾಗೂ ಇಡೀ ವಿಶ್ವವನ್ನು ಹೇಗೆ ರಕ್ಷಿಸುತ್ತಾರೆ ಎಂಬುದೇ ಚಿತ್ರದ ಕಥೆಯಾಗಿದೆ.