ಜಾಹಿರಾತಿನ ಸಲುವಾಗಿ, ಸೋಶಿಯಲ್ ಸಂದೇಶವನ್ನು ನೀಡುವುದಕ್ಕಾಗಿ ಸಿನಿಮಾ ತಾರೆಯರು ಸಾಮಾಜಿಕ ಸಮಸ್ಯೆಗಳ ವಿರುದ್ಧ, ಆರೋಗ್ಯಕ್ಕೆ ಸಂಬಂಧಿಸಿದ ವಿಚಾರವಾಗಿ ಪರ ನಿಂತು ಮಾತನಾಡುತ್ತಲೇ ಇರುತ್ತಾರೆ. ತಮ್ಮ ನೆಚ್ಚಿನ ತಾರೆಯರ ಮೇಲಿನ ಪ್ರೀತಿಯಿಂದ ಬಹಳಷ್ಟು ಬದಲಾವಣೆಗಳು ಈಗಾಗಲೇ ಆಗಿವೆ. ಆಗುತ್ತಿವೆ. ಆದರೆ ಹೀಗೆ ಮಾಡಬೇಡಿ.. ಹಾಗೇ ಮಾಡಬೇಡಿ ಎಂದು ಲೆಕ್ಚರ್ ಮಾಡಿದ್ದ ಸಿನಿತಾರೆಯರೇ ಆ ಕೆಲಸ ಮಾಡಿಬಿಟ್ಟರೇ ಹೇಗೆ?

ಹೌದು.. ಸದ್ಯ ಅದೇ ವಿಚಾರವೇ ಸೋಶಿಯಲ್ ಮೀಡಿಯಾದಲ್ಲಿ ಪ್ರವರ್ಧಮಾನಕ್ಕೆ ಬಂದು ಪ್ರಿಯಾಂಕ ಚೋಪ್ರಾ ಅವರ ಕಾಲೆಳೆಯುವಂತಾಗಿದೆ. ಮದುವೆಗೆ ಕೆಲ ದಿನ ಉಳಿದಿದ್ದ ಸಂದರ್ಭದಲ್ಲಿ ಪ್ರಿಯಾಂಕ ಚೋಪ್ರಾ ದೀಪಾವಳಿಯಲ್ಲಿ ಪಟಾಕಿ ಹಚ್ಚಬೇಡಿ, ಇದರಿಂದ ಅಸ್ತಮಾ ರೋಗಿಗಳಿಗೆ ತೊಂದರೆಯಾಗುತ್ತದೆ. ಎಂದು ಟ್ವಿಟರ್ ನಲ್ಲಿ ವಿಡಿಯೋ ಮೂಲಕ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಿದ್ದರು. ಆದರೆ ಮದುವೆಯ ದಿನವೇ ಭಾರೀ ಪ್ರಮಾಣದ ಸಿಡಿಮದ್ದು ಸಿಡಿಸಲಾಗಿತ್ತು. ಇನ್ನು ಸ್ವತಃ ತಾನೂ ಬಾಲ್ಯದಿಂದಲೂ ಅಸ್ತಮಾದಿಂದ ಬಳಲುತ್ತಿರುವುದಾಗಿಯೂ ಪ್ರಿಯಾಂಕ ಹೇಳಿಕೊಂಡಿದ್ದರು. ಅಲ್ಲದೇ ಸ್ಮೋಕಿಂಕ್ ವಿಚಾರಕ್ಕೆ ಸಂಬಂಧಿಸಿದಂತೆ ಸ್ಮೋಕಿಂಗ್ ಅಂದ್ರೆ ನನಗೆ ಅಸಹ್ಯ ನಾನು ಸ್ಮೋಕ್ ಮಾಡುವುದಿಲ್ಲವೆಂದು ಸಾಕಷ್ಟು ಟ್ವೀಟ್ ಕೂಡ ಮಾಡಿದ್ದರು.

https://www.instagram.com/p/B0K2uJbhjeq/?utm_source=ig_web_copy_link

ಇಷ್ಟೆಲ್ಲಾ ವಿಚಾರ ಈಗ ಯಾಕೆ ಅಂದ್ರೆ ತಾನೇ ಹೇಳಿಕೊಂಡಿದ್ದ ಸಾಕಷ್ಟು ವಿಚಾರಗಳನ್ನು ಬ್ರೇಕ್ ಮಾಡುವ ಮೂಲಕ ಪ್ರಿಯಾಂಕ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೌದು.. ಮಿಯಾಮಿಯಲ್ಲಿ ಪ್ರವಾಸದಲ್ಲಿರುವ ಪ್ರಿಯಾಂಕ ಅದೇ ವೇಳೆ ಯಾಚ್ ನಲ್ಲಿ ಕುಳಿತು ಧಮ್ ಹೊಡೆಯುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪ್ರಿಯಾಂಕ ವರ್ತನೆಗೆ ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ. ಪ್ರಿಯಾಂಕ ಜತೆ ಈ ಫೋಟೋದಲ್ಲಿ ಪ್ರಿಯಾಂಕ ತಾಯಿ ಮಧು ಚೋಪ್ರಾ ಹಾಗೂ ಪತಿ ನಿಕ್ ಜೋನಾಸ್ ಕೂಡ ಇದ್ದು ಅವರೂ ಕೂಡ ಸಿಗಾರ್ ಸೇದುತ್ತಿದ್ದಾರೆ. ಅದಕ್ಕಾಗಿ ರೊಚ್ಚಿಗೆದ್ದ ಅಭಿಮಾನಿಗಳು ಪ್ರಿಯಾಂಕ ಈ ಹಿಂದೆ ಮಾಡಿದ್ದ ಅಭಿಯಾನದ ಫೋಟೋಗಳನ್ನು ಹಾಗೂ ಸದ್ಯದ ಫೋಟೋಗಳನ್ನು ಹೋಲಿಕೆ ಮಾಡಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಜತೆಗೆ ಪ್ರಿಯಾಂಕಗೆ ಇದ್ದ ಆಸ್ತಮಾ ರಾತ್ರೋರಾತ್ರಿ ವಾಸಿಯಾಗಿದೆಯಲ್ಲ ಅಂತ ವ್ಯಂಗ್ಯವಾಗಿ ಕಮೆಂಟ್​ ಕೂಡಾ ಮಾಡಿದ್ದಾರೆ.

CG ARUN

ಸದ್ಗುರು ಜತೆ ಕೈ ಜೋಡಿಸಿದ ಪವರ್ ಸ್ಟಾರ್!

Previous article

ಕಿರುತೆರೆಗೆ ಕಾಲಿಟ್ಟ ಶಾನ್ವಿ ಶ್ರೀವಾತ್ಸವ್!

Next article

You may also like

Comments

Leave a reply

Your email address will not be published. Required fields are marked *