ಕಳೆದ ಒಂದು ತಿಂಗಳಿನಿಂದ ಪತಿ ನಿಕ್ ಜೋನಾಸ್ ಜತೆಗೆ ಹಾಲಿಡೇ ಎಂಜಾಯ್ ಮಾಡುತ್ತಾ ಪ್ರವಾಸದಲ್ಲಿರುವ ಪ್ರಿಯಾಂಕ ಪ್ರಚಾರದ ಜತೆಗೆ ಸಾಕಷ್ಟು ಟ್ರೋಲ್ ಕೂಡ ಆಗಿದ್ದಾರೆ. ಈ ಮಧ್ಯೆ ಪ್ರಿಯಾಂಕ ಚೋಪ್ರಾ ಶೀಘ್ರದಲ್ಲಿ ಮಗುವನ್ನು ಹೊಂದಲಿದ್ದಾರೆ ಎಂಬ ಸುದ್ದಿ ಒಮ್ಮಿಂದೊಮ್ಮೆಲೆ ಗಾಳಿ ಸುದ್ದಿಯಾಗಿ ಸೋಶಿಯಲ್ ಮೀಡಿಯಾದಲ್ಲಿ ಹರಡಿಕೊಂಡಿತ್ತು.
ಆದರೆ ಅಂತಹ ಸುದ್ದಿಗಳನ್ನು ಅಲ್ಲಗಳೆದಿರುವ ಪ್ರಿಯಾಂಕ ಚೋಪ್ರಾ ಸದ್ಯಕ್ಕೆ ನಾವಿಬ್ಬರೂ ನಮ್ಮ ಕರಿಯರ್ ಬಗ್ಗೆ ಗಮನ ಹರಿಸಲು ನಿರ್ಧರಿಸಿದ್ದೇವೆ. ಆದ್ದರಿಂದ ನಾನು ತಾಯಿಯಾಗುವ ಸಮಯ ಇನ್ನೂ ದೂರವಿದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಸದ್ಯ ನಿಕ್ ಜೋನಾಸ್ ತಮ್ಮ ಮ್ಯೂಸಿಕ್ ಟೂರ್ ಗಳಲ್ಲಿ ಬ್ಯುಸಿಯಾಗಿದ್ದರೆ, ಪ್ರಿಯಾಂಕ ಚೋಪ್ರಾ ಸ್ಕೈ ಇಸ್ ಪಿಂಕ್ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದಾರೆ.