ಪ್ರಿಯಾಂಕ ಚೋಪ್ರಾ ದಾಂಪತ್ಯಕ್ಕೆ ಕಾಲಿಟ್ಟ ಮೇಲಂತೂ ಪತಿ ನಿಕ್ ಜೋನಸ್ ಜತೆ ಪಾರ್ಟಿ, ಟ್ರಿಪ್ಪು ಅಂತ ಸುತ್ತಾಡುತ್ತ ಫುಲ್ ಎಂಜಾಯ್ ಮಾಡುತ್ತಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಕಡೆಗೆ ಹೆಚ್ಚು ಗಮನ ನೀಡುತ್ತಿರುವ ಪ್ರಿಯಾಂಕ ಚೋಪ್ರಾ ಸಿನಿಮಾಗಳ ಕಡೆ ಅಷ್ಟೇನೂ ಫೋಕಸ್ ಮಾಡುತ್ತಿಲ್ಲ. ವಿಚಾರಮಾಡಿ ನೋಡಿದರೆ ಪ್ರಿಯಾಂಕ ಕೈಯಲ್ಲಿ ಯಾವುದೇ ಸಿನಿಮಾಗಳೂ ಇಲ್ಲ. ಜತೆಗೆ ಬಾಲಿವುಡ್ ನಲ್ಲಿ ಪಿಂಕಿಗೆ ಅವಕಾಶಗಳು ಕಡಿಮೆಯಾಗುತ್ತಿವೆಯಂತೆ.
ಸದ್ಯ ಪ್ರಿಯಾಂಕ ಸ್ಕೈ ಈಸ್ ಪಿಂಕ ಸಿನಿಮಾದಲ್ಲಿ ನಟಿಸುತ್ತಿರುವುದನ್ನು ಬಿಟ್ಟರೆ ಮತ್ತಾವುದೇ ಚಿತ್ರಕ್ಕೂ ಪಿಂಕಿ ಸಹಿ ಮಾಡಿಲ್ಲ. ಜತೆಗೆ ಹಾಲಿವುಡ್ ನಿಂದಲೂ ಅವರಿಗೆ ಯಾವುದೇ ಅವಕಾಶಗಳು ಬಂದಿಲ್ಲ. ಹಿಂಗೇ ಆದರೆ ಪ್ರಿಯಾಂಕ ಫುಲ್ ಟೈಮ್ ಗೃಹಿಣಿಯಾಗೋದ್ರಲ್ಲಿ ಅನುಮಾನನೇ ಇಲ್ಲ.
No Comment! Be the first one.