ಮಾಜಿ ವಿಶ್ವಸುಂದರಿ ಪ್ರಿಯಾಂಕ ಚೋಪ್ರಾ ಒಂದಿಲ್ಲೊಂದು ವಿಚಾರಗಳಿಂದ ಸುದ್ದಿಯಾಗುತ್ತಲೇ ಇರುತ್ತಾರೆ. ರಾಜಕೀಯದಿಂದ ಬಹಳಷ್ಟು ಅಂತರವನ್ನು ಕಾಯ್ದುಕೊಂಡಿರುವ ಪಿಂಕಿ ಮದುವೆಯಾದ ಮೇಲಂತೂ ಇನ್ನಷ್ಟು ಗ್ಯಾಪ್ ಮೇನ್ ಟೇನ್ ಮಾಡುತ್ತಿದ್ದಾರೆ. ಸಮಾಜದ ಬದಲಾವಣೆಗೆ ರಾಜಕಾರಣದ ಹೊರತಾಗಿ ತನ್ನಿಂದಾಗಬಹುದಾದ ಕೆಲಸವನ್ನು ಮಾಡುತ್ತಿರುತ್ತಾರೆ. ಇದೀಗ ಮೊಟ್ಟ ಮೊದಲ ಬಾರಿಗೆ ರಾಜಕೀಯದ ಕುರಿತಾಗಿ ಮಾತನಾಡಿ ಕೇಳುಗರಿಗೆ ಶಾಕ್ ನೀಡಿದ್ದಾರೆ.
https://www.instagram.com/p/BxsQICQHWRf/?utm_source=ig_web_copy_link
ಅಮೆರಿಕಾದ ನಿಯತಕಾಲಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಿಯಾಂಕ ಚೋಪ್ರಾ “ಅವಕಾಶ ಸಿಕ್ಕಿದರೆ ನಾನು ಭಾರತ ಪ್ರಧಾನಿ ಆಗಲು ಬಯಸುತ್ತೇನೆ. ನನ್ನ ಪತಿ ಅಮೆರಿಕ ಅಧ್ಯಕ್ಷ ಪದವಿಯನ್ನು ಬಯಸುತ್ತಾರೆ. ನನಗೆ ರಾಜಕೀಯದ ಜತೆಗೆ ತಳುಕು ಹಾಕಿಕೊಂಡಿರುವ ಅಂಶಗಳೆಂದರೆ ಇಷ್ಟವಿಲ್ಲ. ಆದರೆ ದೇಶದಲ್ಲಿ ಬದಲಾವಣೆ ಬರಬೇಕೆಂದು ನಾನು, ನಿಕ್ ಬಯಸುತ್ತಿದ್ದೇವೆ” ಎಂದಿದ್ದಾರೆ. ಪಿಂಕಿ ಈ ವಿಚಾರವನ್ನು ಕುಚೋದ್ಯಕ್ಕೆ ಹೇಳಿದ್ದೋ! ಅಥವಾ ಆಕೆಯ ಮನದ ಇಂಗಿತವೋ! ತಿಳಿದುಬಂದಿಲ್ಲ. ಸದ್ಯ ಪ್ರಿಯಾಂಕಾ ಚೋಪ್ರಾ ಹಾಲಿವುಡ್ ಪ್ರಾಜೆಕ್ಟ್ಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ನಲ್ಲಿ ‘ದಿ ಸ್ಕೈ ಈಸ್ ಪಿಂಕ್’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶೀಘ್ರದಲ್ಲೇ ಸಿನಿಮಾ ರಿಲೀಸ್ ಆಗಲಿದೆ.
No Comment! Be the first one.