ಪ್ರಿಯಾಂಕ ಚೋಪ್ರಾ ಯಾಕೋ ತೆಪ್ಪಗಿರುವಂತೆ ಕಾಣುತ್ತಿಲ್ಲ. ಒಂದಿಲ್ಲೊಂದು ವಿಚಾರಗಳಿಂದ ಸುದ್ದಿಯಗುತ್ತಲೇ ಇರುವ ಪಿಂಕಿ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ತಾನೇ ತೊಟ್ಟಿರುವ ಬಟ್ಟೆಯಿಂದ ಟ್ರೋಲ್ ಆಗಿದ್ದಾರೆ. ಹೌದು ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಸ್ ಜೊತೆಗೆ ಕಳೆದ ಸೋಮವಾರದಂದು ಲಾಸ್ ಏಂಜಲೀಸ್ ನಲ್ಲಿ ನಡೆಯುತ್ತಿದ್ದ ‘ಚೇಸಿಂಗ್ ಹ್ಯಾಪಿನೆಸ್’ ವರ್ಲ್ಡ್ ಪ್ರೀಮಿಯರ್ ಗೆ ಹೋಗಿದ್ದರು.
https://www.instagram.com/p/ByTEP8OHuRD/?utm_source=ig_web_copy_link
ಈ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಬಣ್ಣದ ಥೈ ಹೈ ಸಿಲ್ಟ್ ಪ್ಲಾಗಿಂನ್ ನೆಕ್ಲೈನ್ ಡ್ರೆಸ್ ಧರಿಸಿದ್ದರು. ಅಲ್ಲದೆ ಅದಕ್ಕೆ ಮ್ಯಾಚ್ ಆಗುವ ವಜ್ರದ ಕಿವಿಯೋಲೆ ಹಾಕಿದ್ದರು. ನ್ಯೂಡ್ ಮೇಕಪ್ ಹಾಗೂ ಬ್ರೌನ್ ಐಬ್ರೋ ಸಹ ಮಾಡಿಸಿದ್ದರು. ಅಷ್ಟರಮಟ್ಟಿಗೆ ದುಬಾರಿಯಾಗಿ ಪಿಂಕಿ ಸಿಂಗಾರಗೊಂಡಿದ್ದರೂ ಸಹ ಅಭಿಮಾನಿಗಳು ಆಕೆ ತೊಟ್ಟಿರುವ ಡ್ರೆಸ್ಸಿಗೆ ಗುರ್ ಎನ್ನುತ್ತಿದ್ದರು. ಅಲ್ಲದೇ ಇನ್ ಸ್ಟಾದಲ್ಲಿ ಶೇರ್ ಆಗಿರುವ ಆಕೆಯ ಫೋಟೋಗಳಿಗೆ ಕಮೆಂಟುಗಳ ಸುರಿಮಳೆಯನ್ನೇ ಮಾಡುತ್ತಿದ್ದಾರೆ. ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಟ್ರೋಲ್ ಪೇಜ್ ಗಳು ವಿಧ ವಿಧವಾಗಿ ಪಿಂಕಿಯ ಕಾಲೆಳೆಯುತ್ತಿದ್ದಾರೆ. ಅಷ್ಟಾದರೂ ಪ್ರಿಯಾಂಕ ಚೋಪ್ರಾ ಯಾರ ಪ್ರತಿಕ್ರಿಯೆಗಳಿಗೆ ಕ್ಯಾರೇ ಎನ್ನದಿರುವುದು ಆಶ್ಚರ್ಯ. ಇತ್ತೀಚಿಗಷ್ಟೇ ವಿಚಿತ್ರ ಹೇರ್ ಸ್ಟೈಲ್ ನಿಂದಾಗಿ ಟ್ರೋಲಿಗರಿಗೆ ಆಹಾರವಾಗಿದ್ದ ಪ್ರಿಯಾಂಕ ಚೋಪ್ರಾಗೆ ಯಾಕೋ ಟೈಮೇ ಸರಿ ಇಲ್ಲ. ಆಕೆಯ ವಿಚಿತ್ರ ವರ್ತನೆ, ಆಕೆ ತೊಡುವ ಉಡುಪುಗಳೇ ಆಕೆಗೆ ಶನಿಗಳಂತೆ ಕಾಡುತ್ತಿದೆ.
No Comment! Be the first one.