ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಮದುವೆ ಫೋಟೋ ಈಗ ಹೊರಬಂದಿದೆ. ಸಾಮಾನ್ಯವಾಗಿ ಸಿನಿಮಾ ನಟ ನಟಿಯರ ಮದುವೆ ಸಮಾರಂಭಗಳ ಲಾಟು ಲಾಟು ಫೋಟೋಗಳು ಎಲ್ಲೆಡೆ ರಾರಾಜಿಸುತ್ತವೆ. ಆದರೆ ಪ್ರಿಯಾಂಕಾ ಮದುವೆ ಫೋಟೋಗಳ್ಯಾಕೆ ಕಾಣಸಿಗುತ್ತಿಲ್ಲ ಎಂದರೆ ಆಶ್ಚರ್ಯಕರ ಸಂಗತಿ ಕೇಳಿಬರುತ್ತಿದೆ. ಅದೇನೆಂದರೆ ಪ್ರಿಯಾಂಕಾ ಮತ್ತು ನಿಕ್ ಮದುವೆ ಸಮಾರಂಭದ ಫೋಟೋಗಳ ಹಕ್ಕನ್ನು ಪೀಪಲ್ ಮ್ಯಾಗಜೀನ್ ಎನ್ನುವ ಇಂಟರ್ ನ್ಯಾಷನಲ್ ಪತ್ರಿಕೆಯೊಂದು ಎರಡೂವರೆ ಮಿಲಿಯನ್ನಿನಷ್ಟು ದೊಡ್ಡ ಮಟ್ಟದ ಹಣ ನೀಡಿ ಹಕ್ಕನ್ನು ಖರೀದಿಸಿದೆಯಂತೆ.
ಸಿನಿಮಾ, ಜಾಹೀರಾತುಗಳಲ್ಲಿ ನಟಿಸಲು ಕಾಸು ಪಡೆಯುವ ಸಿನಿ ತಾರೆಯರು ಖಾಸಗಿ ಸಭೆ ಸಮಾರಂಭಗಳು, ಮಳಿಗೆಗಳ ಉದ್ಘಾಟನೆ ಸೇರಿದಂತೆ ಎಲ್ಲೆಲ್ಲಿ ಸಾಧ್ಯವಾಗುತ್ತದೋ ಅಲ್ಲೆಲ್ಲಾ ಕಾಸೆತ್ತುವುದು ಮಾಮೂಲು. ಆದರೆ ತೀರಾ ತಮ್ಮದೇ ಮದುವೆ ಫೋಟೋಗಳನ್ನೂ ಇಷ್ಟೊಂದು ಮೊತ್ತಕ್ಕೆ ಮಾರಿಕೊಳ್ಳುತ್ತಾರೆಂದರೆ ಏನನ್ನಬೇಕು? ಸದ್ಯ ಮದುವೆ ಫೋಟೋವನ್ನು ಬಿಕರಿ ಮಾಡಿರುವ ಪ್ರಿಯಾಂಕಾ ಚೋಪ್ರಾ ಮುಂದೆ ನಡೆಯುವ ಕಾರ್ಯಚಟುವಟಿಕೆಗಳಿಗೂ ಬೆಲೆ ಕಟ್ಟಿ ವ್ಯಾಪಾರ ಮಾಡದಿದ್ದರೆ ಸಾಕು!
#