ರಿಯಲ್ ಸ್ಟಾರ್ ಉಪೇಂದ್ರ ಅವರ ಮಡದಿ ಹಾಗೂ ಬಂಗಾಳಿ ಬೆಡಗಿ ಪ್ರಿಯಾಂಕ ಉಪೇಂದ್ರ ಸ್ಯಾಂಡಲ್ ವುಡ್ ನಲ್ಲಿ ಉಪೇಂದ್ರ ಹೆಂಡತಿ ಎಂದು ಎಷ್ಟರಮಟ್ಟಿಗೆ ಫೇಮಸ್ಸೋ.. ಅದೇ ರೀತಿ ನಟಿಯಾಗಿಯೂ ತನ್ನನ್ನು ಗುರುತಿಸಿಕೊಂಡಿದ್ದಾರೆ. ಇತ್ತೀಚಿಗೆ ಇವರ ಮತ್ತು ಮಗಳು ಐಶ್ವರ್ಯಾ ಉಪೇಂದ್ರ ಅವರ ದೇವಕಿ ಚಿತ್ರವು ತೆರೆಕಂಡಿದ್ದು, ಬರಪೂರ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು.
https://www.instagram.com/p/B0VKCNpH5eq/?utm_source=ig_web_copy_link
ದೇವಕಿ ಸಕ್ಸಸ್ ನಲ್ಲಿರುವ ಪ್ರಿಯಾಂಕ ಮತ್ತೆ ಯಾವ ಸಿನಿಮಾ ಮಾಡಬಹುದೆಂಬ ನಿರೀಕ್ಷೆ ಅಭಿಮಾನಿಗಳಲ್ಲಿತ್ತು. ಆದರೆ ಪ್ರಿಯಾಂಕ ಕಿರುತೆರೆಗೆ ಎಂಟ್ರಿ ಕೊಡುವ ಮೂಲಕ ಅಭಿಮಾನಿಗಳಿಗೆ ಶಾಕ್ ಕೊಡುವ ಜತೆಗೆ ಸಂತಸವನ್ನು ತಂದಿದ್ದಾರೆ. ಹೌದು.. ಪ್ರಿಯಾಂಕ ಉಪೇಂದ್ರ ಉದಯ ಟಿವಿಯಲ್ಲಿ ಪ್ರಸಾರವಾಗಲಿರುವ ನಾನು ನನ್ನ ಕನಸು ಹೊಚ್ಚ ಹೊಸ ಧಾರಾವಾಹಿಯಲ್ಲಿ ಅಭಿನಯಿಸಲಿದ್ದಾರೆ. ಈಗಾಗಲೇ ಇದರ ಪ್ರೋಮೋ ರಿಲೀಸ್ ಆಗಿದ್ದು, ಹಿರಿತೆರೆಯಲ್ಲಿ ಎಲ್ಲರನ್ನು ಸೆಳೆದ ಬಂಗಾಳಿ ಚೆಲುವೆ ಕಿರುತೆರೆಯಲ್ಲಿ ಮತ್ತೇನೂ ಮೋಡಿ ಮಾಡಬಹುದೆಂಬ ನಿರೀಕ್ಷೆಯಲ್ಲಿ ಸಿನಿಪ್ರೇಮಿಗಳಿದ್ದಾರೆ.
No Comment! Be the first one.