ಒಂದೆಡೆ ಜೂನ್ 14ಕ್ಕೆ ಉಪೇಂದ್ರ ಮತ್ತು ಆರ್. ಚಂದ್ರು ಕಾಂಬಿನೇಷನ್ನಿನ ಐ ಲವ್ ಯು ಸಿನಿಮಾ ಕರ್ನಾಟಕ, ಆಂಧ್ರಪ್ರದೇಶ್, ತೆಲಂಗಾಣ ರಾಜ್ಯಗಳಲ್ಲಿ ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ. ಮತ್ತೊಂದೆಡೆ ಪಬ್ಲಿಸಿಟಿ ಕೆಲಸಗಳಲ್ಲಿ ಬ್ಯುಸಿ ಇರುವ ರಚಿತಾ ರಾಮ್ ಸಂದರ್ಶನಗಳಲ್ಲಿ ನೀಡುತ್ತಿರುವ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದೆ.

ಹೌದು ಇತ್ತೀಚಿಗೆ ಐ ಲವ್ ಯು ಚಿತ್ರದ ನಾಯಕಿ ರಚಿತಾ ರಾಮ್ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಸಂದರ್ಶನವೊಂದನ್ನು ನೀಡಿದ್ದಾರೆ. ಆ ಸಂದರ್ಶನದಲ್ಲಿ ಮೊದಲ ಬಾರಿಗೆ ಬೋಲ್ಡ್ ಆಗಿ ಈ ಚಿತ್ರದಲ್ಲಿ ನಟಿಸಿದ್ದೇನೆ. ಅದರಲ್ಲೂ `ಮಾತನಾಡಿ ಮಾಯವಾದೆ’ ಎಂಬ ಹಾಡನ್ನು ಉಪೇಂದ್ರ ಅವರೇ ಡೈರೆಕ್ಟ್ ಮಾಡಿದ್ದರು ಎಂದು ಹೇಳಿದ್ದಾರೆ. ಈ ಹೇಳಿಕೆಗೆ ಉಪೇಂದ್ರ ಪತ್ನಿ ವಿರೋಧ ವ್ಯಕ್ತಪಡಿಸಿದ್ದು, ರಚಿತಾ ರಾಂ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

ರಚಿತಾ ರಾಮ್ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಪ್ರಿಯಾಂಕ ಉಪೇಂದ್ರ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
“ಮಾಯವಾದೆ ಹಾಡಿಗೆ ಚಿನ್ನಿ ಪ್ರಕಾಶ್ ನಿರ್ದೇಶನ ಮಾಡಿದ್ದಾರೆ. ಸುಖಾಸುಮ್ಮನೆ ರಚಿತಾ ರಾಮ್ ಉಪ್ಪಿ ಹೆಸರನ್ನು ತಳುಕು ಹಾಕಿರುವುದು ಎಷ್ಟರಮಟ್ಟಿಗೆ ಸರಿ. ಇಡೀ ಸಿನಿಮಾದಲ್ಲಿ ಒಂದೇ ಒಂದು ಹಾಡಿನ ದೃಶ್ಯವನ್ನೇ ಹೈಲೈಟ್ ಮಾಡುತ್ತಿದ್ದು, ಹೀಗ್ಯಾಕೆ ಮಾಡುತ್ತಿದ್ದಾರೆ. ಆ ಹಾಡಿನಲ್ಲಿ ನಟಿಸುವುದು ಇಷ್ಟವಿಲ್ಲದಿದ್ದರೆ ರಚಿತಾ ನಟನೆ ಮಾಡಬಾರದಿತ್ತು. ಮುಂದೆ ಈ ರೀತಿಯ ಪಾತ್ರ ಮಾಡುವುದಿಲ್ಲ. ಆ ಹಾಡನ್ನು ಚಿತ್ರದಿಂದ ತೆಗೆಸುತ್ತೇನೆ ಎಂದೆಲ್ಲ ಹೇಳುತ್ತಿದ್ದಾರೆ. ಇದನ್ನು ಯಾಕೆ ಅಷ್ಟೊಂದು ದೊಡ್ಡದು ಮಾಡಬೇಕು.

ಸಿನಿಮಾದಲ್ಲಿ ನಟಿಸಿರುವ ಒಬ್ಬ ನಟಿಯೇ ಈ ರೀತಿ ಸ್ಟೇಟ್ ಮೆಂಟ್ ನೀಡಿದರೆ ಸಿನಿಮಾವನ್ನು ನೋಡುವುದು ಹೇಗೆ. ಎರಡು ವರ್ಷದ ನಂತರ ಮತ್ತೊಮ್ಮೆ ಉಪ್ಪಿ ಸಿನಿಮಾ ರಿಲೀಸ್ ಆಗುತ್ತಿದೆ. ಆ ಒಂದು ಹಾಡಿನ ಸನ್ನಿವೇಶವನ್ನೇ ಹೈಲೈಟ್ ಮಾಡುವುದರಿಂದ ಸಿನಿಮಾ ಚೆನ್ನಾಗಿದ್ದರೂ ಈ ರೀತಿ ದೃಶ್ಯಗಳು ಹೈಲೈಟ್ ಆದರೆ ಫ್ಯಾಮಿಲಿ ಹೇಗೆ ಬರುತ್ತದೆ. ಇದರಿಂದ ಉಪ್ಪಿ ಇಮೇಜ್ ಹಾಳಾಗುವುದಿಲ್ಲವೇ. ಉಪೇಂದ್ರ ಅವರಿಗೂ ಕುಟುಂಬವಿದೆ. ಮಕ್ಕಳಿದೆ. ರಚಿತಾ ಪ್ರಬುದ್ಧರಾಗಿ ಮಾತನಾಡಲಿ. ಆ ಹಾಡಿನ ವಿಚಾರದ ಹೊರತಾಗಿ ಮತ್ತಾವ ಸಂಗತಿಯೇ ಆ ಸಿನಿಮಾದಲ್ಲಿ ಇಲ್ಲವೇ! ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ದಚ್ಚು ಭೇಟಿಯಾದ ವಿಲನ್ ಪ್ರೊಡ್ಯೂಸರ್!

Previous article

ಮಲೈಕಾ ಧ್ಯಾನ ಭಂಗಿಯ ಫೋಟೋ ವೈರಲ್!

Next article

You may also like

Comments

Leave a reply

Your email address will not be published. Required fields are marked *