ವರ್ಷದ ಹಿಂದೆ ಪ್ರಿಯಾ ವಾರಿಯರ್ ಕಣ್ಣೇಟಿನ ನಶೆ ಏರಿಸಿಕೊಂಡಿದ್ದ ಪಡ್ಡೆ ಹೈಕಳು ಇನ್ನೂ ಆ ನಶೆಯಿಂದ ಹೊರ ಬಂದಿಲ್ಲ. ಕರ್ನಾಟಕದಲ್ಲಿಯೂ ಹೀಗೆ ನಶೆಯೇರಿಸಿಕೊಂಡವರ ಸಂಖ್ಯೆಯೇನು ಕಡಿಮೆಯಿಲ್ಲ. ಅವರೆಲ್ಲರಿಗೂ ಈಗ ಪ್ರಿಯಾ ವಾರಿಯರ್ ಳನ್ನು ಒಂದಿಡೀ ಸಿನಿಮಾದ ಮೂಲಕ ಕಣ್ತುಂಬಿಕೊಳ್ಳುವ ಭಾಗ್ಯ ಬಂದೊದಗಿದೆ!
ಪ್ರಿಯಾ ವಾರಿಯರ್ ನಟಿಸಿರೋ ಮಲೆಯಾಳಂ ಸಿನಿಮಾ ಒರು ಅಡಾರ್ ಲವ್ ಕಿರಿಕ್ ಲವ್ ಸ್ಟೋರಿ ಹೆಸರಿನಲ್ಲಿ ಕನ್ನಡಕ್ಕೆ ಡಬ್ ಆಗಿದೆ. ಈ ಚಿತ್ರ ಇದೇ ಫೆಬ್ರವರಿ ಹದಿನಾಲಕ್ಕರ ಪ್ರೇಮಿಗಳ ದಿನದಂದು ಬಿಡುಗಡೆಯಾಗಲಿದೆ. ವರ್ಷದ ಹಿಂದೆ ಪ್ರಿಯಾ ಮಾದಕವಾಗಿ ಕಣ್ಣು ಹೊಡೆದ ವೀಡಿಯೋ ಒಂದು ಏಕಾಏಕಿ ವೈರಲ್ ಆಗಿ ಹೋಗಿತ್ತು. ಇದೊಂದೇ ಒಂದು ದೃಷ್ಯದಿಂದ ಪ್ರಿಯಾ ದಿನ ಕಳೆಯೋದರೊಳಗಾಗಿ ನ್ಯಾಷನಲ್ ಕ್ರಶ್ ಆಗಿ ಹೋಗಿದ್ದಳು. ಆ ಸೀನು ಮಲೆಯಾಳದ ಒರು ಅಡಾರ್ ಲವ್ ಎಂಬ ಸಿನಿಮಾದ್ದು.
ಒಂದು ದೃಷ್ಯವೇ ಹೀಗಿರೋವಾಗ ಇಡೀ ಸಿನಿಮಾ ಇನ್ನ ಹೇಗಿದ್ದೀತು ಅನ್ನೋ ಕುತೂಹಲ ಎಲ್ಲರಲ್ಲಿಯೂ ಇತ್ತು. ಚಿತ್ರ ತಂಡ ಹೇಳೋ ಪ್ರಕಾರ ಇಡೀ ಸಿನಿಮಾ ಯುವ ಸಮುದಾಯವೂ ಸೇರಿದಂತೆ ಎಲ್ಲರನ್ನೂ ಖುಷಿಗೊಳಿಸುವಂತೆ ಮೂಡಿ ಬಂದಿದೆಯಂತೆ. ಅಂತೂ ಈ ಬಾರಿಯ ಪ್ರೇಮಿಗಳ ದಿನ ಕಿರಿಕ್ ಲವ್ ಸ್ಟೋರಿ ಜೊತೆ ಕರ್ನಾಟಕದಲ್ಲಿ ಸಂಪನ್ನಗೊಳ್ಳಲಿದೆ!
#
No Comment! Be the first one.