ನಟಿ ಪ್ರಿಯಾಂಕಾ ಚೋಪ್ರಾ ಅಭಿನಯದ ’ಈಸ್ ನಾಟ್ ಇಟ್ ರೊಮ್ಯಾಂಟಿಕ್’ ಹಾಲಿವುಡ್ ಸಿನಿಮಾ ತೆರೆಗೆ ಸಿದ್ಧವಾಗಿದೆ. ಇದು ಅವರ ಮೂರನೇ ಹಾಲಿವುಡ್ ಚಿತ್ರ. ಎರಡು ವರ್ಷಗಳ ಹಿಂದೆ ’ಬೇವಾಚ್’ ಚಿತ್ರದೊಂದಿಗೆ ಹಾಲಿವುಡ್ ಪ್ರವೇಶಿಸಿದ ಅವರ ಎರಡನೇ ಇಂಗ್ಲಿಷ್ ಸಿನಿಮಾ ’ಎ ಕಿಡ್ ಲೈಕ್ ಜೇಕ್’ ಕಳೆದ ವರ್ಷ ತೆರೆಕಂಡಿತ್ತು. ಇದೀಗ ನಟಿ ಪ್ರಿಯಾಂಕಾ ಹಾಲಿವುಡ್ ಚಿತ್ರವೊಂದರ ನಿರ್ಮಾಣಕ್ಕೆ ಸಜ್ಜಾಗಿದ್ದು, ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅವರೇ ನಟಿಸಲಿದ್ದಾರೆ.
ಭಾರತೀಯ ಮೂಲದ ವಿವಾದಿತ ಧರ್ಮಗುರು ಓಶೋ ರಜನೀಶ್ ಅವರ ಸಹಾಯಕಿಯಾಗಿದ್ದ ಮಾ ಆನಂದ ಶೀಲಾ ಕುರಿತ ಕತೆಯ ಚಿತ್ರವನ್ನು ಪ್ರಿಯಾಂಕಾ ನಿರ್ಮಿಸಲಿದ್ದಾರೆ. ಆಸ್ಕರ್ ಪುರಸ್ಕೃತ ಹಾಲಿವುಡ್ ತಂತ್ರಜ್ಞ ಬ್ಯಾರಿ ಲ್ಯಾವಿನ್ಸನ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಅಮೆರಿಕದಲ್ಲಿ ರಜನೀಶ್ ಧಾರ್ಮಿಕ ಸಾಮ್ರಾಜ್ಯ ನೆಲೆ ಕಂಡುಕೊಳ್ಳುವಲ್ಲಿ ಅವರ ಆಪ್ತ ಸಹಾಯಕಿ ಶೀಲಾ ಪಾತ್ರ ತುಂಬಾ ದೊಡ್ಡದು. ನಂತರದ ದಿನಗಳಲ್ಲಿ ಅಲ್ಲಿ ರಜನೀಶ್ ಪ್ರಭಾವ ಕುಂದುವಲ್ಲಿ, ವಿವಾದಗಳ ಸಂದರ್ಭದಲ್ಲಿ ಶೀಲಾ ಮುಂಚೂಣಿಯಲ್ಲಿ ಪ್ರಸ್ತಾಪವಾಗುತ್ತಾರೆ. ಅವರ ಪಾತ್ರ ಸುತ್ತ ಸಿನಿಮಾ ಇರಲಿದೆ ಎಂದಿದ್ದಾರೆ ಪ್ರಿಯಾಂಕಾ.
ಈಗಾಗಲೇ ರಜನೀಶ್ ಮತ್ತು ಆಪ್ತ ಸಹಾಯಕಿ ಶೀಲಾ ಕುರಿತ ಪ್ರಸ್ತಾಪ ನೆಟ್ಫ್ಲಿಕ್ಸ್ ಸರಣಿ ’ವೈಲ್ಡ್ ವೈಲ್ಡ್ ಕಂಟ್ರಿ’ಯಲ್ಲಿ ಬಂದಿದೆ. ಸಿನಿಮಾದಲ್ಲಿ ಮತ್ತಷ್ಟು ವಿಸ್ತಾರವಾಗಿ ಹೇಳುವ ಪ್ರಯತ್ನ ನಡೆಯಲಿದೆಯಂತೆ. ಇದು ಪ್ರಿಯಾಂಕಾ ಚೋಪ್ರಾ ಅಭಿನಯದ ನಾಲ್ಕನೇ ಹಾಲಿವುಡ ಚಿತ್ರವಾಗಲಿದೆ. ಉಳಿದಂತೆ ಆಕೆ ಶೋನಾಲಿ ಭೋಸ್ ನಿರ್ದೇಶನದ ’ದಿ ಸ್ಕೈ ಈಸ್ ಪಿಂಕ್’ ಹಿಂದಿ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
#