ಕನ್ನಡ ಚಿತ್ರಗಳೆಂದರೆ ಕೊಂಕು ಮಾತಾಡುತ್ತಾ ಅಸಡ್ಡೆ ಮಾಡೋ ಕಾಲವೀಗ ಮುಗಿದಿದೆ. ಕೆಜಿಎಫ್ ಮೂಲಕವೇ ಅಂಥಾದ್ದೊಂದು ಕ್ರಾಂತಿ ಪರ್ವ ಆರಂಭವಾಗಿ ಬಿಟ್ಟಿದೆ. ಅದೀಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರದ ಮೂಲಕ ಹಾಗೆಯೇ ಮುಂದುವರೆದಿದೆ. ಲೇಟೆಸ್ಟ್ ವಿಚಾರವೆಂದರೆ, ಈ ಸಿನಿಮಾ ಟ್ರೈಲರ್ ಅಬ್ಬರದ ಮುಂದೆ ಬಾಲಿವುಡ್ನ ಬಹುನಿರೀಕ್ಷಿತ ಸಲ್ಮಾನ್ ಖಾನ್ ಅಭಿನಯದ ಭಾರತ್ ಚಿತ್ರವೇ ಮಂಕಾಗಿ ಬಿಟ್ಟಿದೆ!
ಎರಡ್ಮೂರು ದಿನಗಳ ಹಿಂದೆ ಪವನ್ ಒಡೆಯರ್ ನಿರ್ದೇಶನದ ನಟಸಾರ್ವಭೌಮ ಟ್ರೈಲರ್ ಬಿಡುಗಡೆಯಾಗಿತ್ತು. ಸರಿಯಾಗಿ ಅದೇ ದಿನ ಸಲ್ಮಾನ್ ಖಾನ್ ಭಾರತ್ ಚಿತ್ರದ ಟೀಸರ್ ಕೂಡಾ ರಿಲೀಸ್ ಆಗಿತ್ತು. ಆದರೆ ನಟಸಾರ್ವಭೌಮ ಕಡಿಮೆ ಅವಧಿಯಲ್ಲಿಯೇ ಯೂಟ್ಯೂಬ್ನಲ್ಲಿ ಟ್ರೆಂಡಿಂಗ್ನಲ್ಲಿದೆ. ಈ ಭೃಆಟೆಯಲ್ಲಿ ಭಾರತ್ ಟೀಸರ್ ಥಂಡಾ ಹೊಡೆದಿದೆ.
ರಾಕ್ಲೈನ್ ವೆಂಕಟೇಶ್ ಅದ್ದೂರಿಯಾಗಿ ನಿರ್ಮಾಣ ಮಾಡಿರುವ ನಟಸಾರ್ವಭೌಮ ಒಂದು ವಿಭನ್ನ ಚಿತ್ರವಾಗಿ ನೆಲೆ ಕಂಡು ಕೊಳ್ಳುತ್ತದೆ ಎಂಬ ನಿರೀಕ್ಷೆಯೀಗ ನಂಬಿಕೆಯಾಗಿ ಬದಲಾಗಿದೆ. ಈ ಹಿಂದೆ ರಾಜಕುಮಾರ್ ಚಿತ್ರ ಸಾರ್ವಕಾಲಿಕ ದಾಖಲೆಯ ರೂವಾರಿಯಾಗಿತ್ತಲ್ಲಾ? ಅಂಥಾದ್ದೇ ಭರಪೂರ ಯಶಸ್ಸು ಈ ಸಿನಿಮಾಕ್ಕೂ ದಕ್ಕಲಿದೆ ಎಂಬ ಅಭಿಪ್ರಾಯವೇ ಪ್ರೇಕ್ಷಕರಲ್ಲಿದೆ.
#