- ಕುಮಾರ್ ಶೃಂಗೇರಿ
ನ್ಯಾಷನಲ್ ಲಾ ಸ್ಕೂಲ್, ಭಾರತ ವಿಶ್ವವಿದ್ಯಾಲಯ
ಸಿನಿಮಾರಂಗದ ಮನೆ ಮಗನಂತಿದ್ದವನು ನೀವು. ಇಷ್ಟು ಬೇಗ ನೀವು ಎದ್ದು ಹೋಗಬಾರದಿತ್ತು. ನಿಮ್ಮ ಅತಿಯಾದ ಆತ್ಮವಿಶ್ವಾಸವೋ ಅಥವಾ ನಿರ್ಲಕ್ಷವೋ ಗೊತ್ತಿಲ್ಲ. ಎಲ್ಲೋ ಎನೋ ಎಡವಟ್ಟು ಮಾಡಿಕೊಂಡಿರುವುದಂತೂ ನಿಜ. ಯಾಕೆಂದರೆ ಇದು ಸಾಯುವ ವಯಸ್ಸಲ್ಲ, ಸಾಯುವಂತ ಕಾಯಿಲೆಯೂ ಇರಲಿಲ್ಲ. ಬೇರೆಲ್ಲರಿಗೂ ಮಾದರಿಯಾಗಿದ್ದ ದೇಹ ನಿಮ್ಮದು. ಹೀಗಿದ್ದೂ ನೀವು ಎಲ್ಲಿ ಎಡವಿದಿರಿ? ಹೋಗಿ ಬಾ ಅನ್ನಲ್ಲಿಕೆ ನೀವು ಹೋಗಿದ್ದೀರಿ ಎನ್ನವುದನ್ನು ಅರಿಗಿಸಿಕೊಳ್ಳುವುದೇ ಕಷ್ಟವಾಗಿದೆ.
ಜನ ಯಾಕೆ ಹೀಗೇ ಮಾಡಿಕೊಳ್ಳುತ್ತಾರೆ? ಯಾವುದನ್ನೂ ಅತಿಯಾಗಿ ಮಾಡಬಾರದು. ಅದರಲ್ಲೂ ಕೃತಕವಾಗಿ ತನ್ನ ದೇಹವನ್ನು ಇಟ್ಟುಕೊಳ್ಳಲು ಪ್ರಯತ್ನಿಸುವುದು ಇನ್ನು ಕೆಟ್ಟದ್ದು. ಪುನೀತ್ ಸಾವನ್ನು ಒಮ್ಮೆ ಹಿಂಬದಿಯಿಂದ ನೋಡಿದರೆ ತನ್ನ ಸಾವನ್ನು ತಾನೇ ತಂದುಕೊಂಡರಾ ಅನಿಸುತ್ತಿದೆ. ಪುನೀತ್, ದಿಗ್ಗಜ ರಾಜ್ ಕುಮಾರ್ ಗರಿಡಿಯಲ್ಲಿ ಬೆಳೆದವರು. ಅವರು ಜಿಮ್ ನಲ್ಲಿ ಹೆಚ್ಚು ವರ್ಕ್ ಔಟ್ ಮಾಡಿದವರಲ್ಲ. ನೈಸರ್ಗಿಕವಾಗಿ ತಮ್ಮ ದೇಹವನ್ನು ಕೊನೆಯವರಿಗೂ ಸದೃಡವಾಗಿ ಇಟ್ಟುಕೊಂಡವರು. ಅದೇ ರೀತಿಯ ಯೋಗ, ವಾಕ್ ಇತ್ಯಾದಿಗಳನ್ನು ಹೆಚ್ಚು ರೂಢಿಸಿ, ಕೃತಕ ದೇಹದಂಡನೆ ಮಾಡದೇ ಇದ್ದಿದ್ದರೆ ಪುನಿತ್ ತಮ್ಮ ಅಪಾರ ಅಭಿಮಾನಿಗಳನ್ನು ಇಷ್ಟು ಬೇಗ ಬಿಟ್ಟು ಹೋಗುತ್ತಿರಲಿಲ್ಲ.
ಪುನೀತ್ ಸಾವು ಕೃತಕ ದೇಹ ದಂಡನೆ ಮತ್ತು ಕೃತಕ ಪೌಷ್ಟಿಕಾಂಶದ ಆಹಾರವನ್ನು ತಿನ್ನುವವರಿಗೆ ಒಂದು ಪಾಠವಾಗಬೇಕು. ಇನ್ನಾದರೂ ಮಂದಿ ತಮ್ಮ ದೇಹದ ಮೇಲಿನ ಅತಿಯಾದ ಪ್ರಜ್ಞೆಯಿಂದ ಹೊರಬಂದು, ಸಹ ಬದುಕು ರೂಪಿಸಿಕೊಳ್ಳಬೇಕು. ಮಾಡುವ ದೇಹದಂಡನೆ ಮತ್ತು ತಿನ್ನುವ ಆಹಾರ ನೈಸರ್ಗಿಕವಾಗಿ ಇರಬೇಕು. ವ್ಯಾಯಾಮ, ಯೋಗ ಮತ್ತು ನಡಿಗೆ ಗಳಿಗೆ ಹೆಚ್ಚಿನ ಒತ್ತನ್ನು ನೀಡಲು ಗಮನಹರಿಸಬೇಕು.
ಅಪ್ಪು ನೀವಿಲ್ಲ ಅನ್ನೋದನ್ನೂ ಕಲ್ಪಿಸಿಕೊಳ್ಳಲೂ ಆಗುತ್ತಿಲ್ಲ. ಮತ್ತೆ ಹುಟ್ಟಿ ಬಾ ಎಂದಷ್ಟೇ ಆಶಿಸಬಹುದು…
Comments