ಸಿನಿಮಾ ನಟರ ಮಕ್ಕಳು ಚಿತ್ರರಂಗಕ್ಕೆ ಬರೋದು ಕಾಮನ್. ಇದೀಗ ಚಂದನವನದಲ್ಲಿ ಸಿನಿ ನಟರ ಮಕ್ಕಳು ಆಗಿಂದಾಗೆ ಬೆಳ್ಳಿತೆರೆಯಲ್ಲಿ ಕಾಣಿಸುತ್ತಿದ್ದಾರೆ. ಇತ್ತೀಚೆಗಷ್ಟೇ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಪುತ್ರ ವಿನೀಶ್, ಉಪ್ಪಿ ಪುತ್ರಿ ಐಶ್ವರ್ಯ ಹಾಗೂ ಗೋಲ್ಡನ್ ಸ್ಟಾರ್ ಮಗನೂ ಬಣ್ಣದ ಲೋಕಕ್ಕೆ ಎಂಟ್ರಿ ಪಡೆದಿದ್ದರು. ಇದೀಗ ಚಿತ್ರರಂಗಕ್ಕೆ ಮತ್ತೊಬ್ಬಳು ಚೋಟಾ ಹೀರೋಯಿನ್ ಎಂಟ್ರಿಯಾಗಿದೆ. ಅದ್ಯಾರು ಅಂದ್ರಾ..? ಕಾಮಿಡಿ ಕಿಂಗ್ ಶರಣ್ ಪುತ್ರಿ..! ಹೌದು, ಸಿಂಪಲ್ ಸುನಿ ಹಾಗೂ ಶರಣ್ ಕಾಂಬಿನೇಷನ್ನಲ್ಲಿ ಬರ್ತಾಯಿರೋ ‘ಅವತಾರ ಪುರುಷ’ ಚಿತ್ರದಲ್ಲಿ ಶರಣ್ ಪುತ್ರಿ, ಪುಣ್ಯ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಬಾರಿಗೆ ಬೆಳ್ಳಿತೆರೆ ಮೇಲೆ ಮಗಳು ಪುಣ್ಯ ಕಾಣಿಸಿಕೊಳ್ಳುತ್ತಿದ್ದು , ಶಾಲಾ ಬಾಲಕಿಯ ರೋಲ್ನಲ್ಲಿ ಅಪ್ಪನ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ.
ಈ ಬಗ್ಗೆ ಶರಣ್ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಇದೊಂದು ಕಾಮಿಡಿ ಕಂ ಥ್ರಿಲ್ಲರ್ ಕತೆಯನ್ನು ಹೊಂದಿರೋ ಚಿತ್ರವಾಗಿದ್ದು, ನಾಯಕಿಯಾಗಿ ಆಶಿಕಾ ರಂಗನಾಥ್ ನಟಿಸುತ್ತಿದ್ದಾರೆ. ಕಳೆದ ತಿಂಗಳು ಚಿತ್ರತಂಡ ಕೇರಳದಲ್ಲಿ ಮುಖ್ಯಭಾಗದ ಶೂಟಿಂಗ್ ನಡೆಸಿದೆ. ಅಲ್ಲದೇ ಶರಣ್ ‘ಅವತಾರ್ ಪುರುಷ’ದಲ್ಲಿ ಹತ್ತಾರು ಗೆಟಪ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರ್ಯಾಬೋ-2 ನಂತರ ಆಶಿಕಾ ಒಂದಾಗುತ್ತಿದ್ದಾರೆ.
No Comment! Be the first one.