ನಾಲ್ಕು ಹುಡುಗೀರು ಪಕ್ಕಾ ಮಾಸ್ ಲುಕ್ಕಿನಲ್ಲಿರೋ ಸ್ಟಿಲ್ಲುಗಳ ಮೂಲಕವೇ ಸಂಚಲನ ಸೃಷ್ಟಿಸಿರುವ ಚಿತ್ರ ಪುಣ್ಯಾತ್ಗಿತ್ತೀರು. ಹಾಡು, ಟ್ರೈಲರ್ಗಳ ಮೂಲಕ ಹಾದು ಬಂದ ಪುಣ್ಯಾತ್ಗಿತ್ತೀರ ಬಗ್ಗೆ ಜನಸಾಮಾನ್ಯರಲ್ಲಿಯೂ ಒಂದು ಕುತೂಹಲ ಶುರುವಾಗಿದೆ. ಚಿತ್ರವೊಂದರ ಪಾಲಿಗಿದು ಯಶಸ್ಸಿನ ಮೊದಲ ಹೆಜ್ಜೆ. ಆ ಸಂಭ್ರಮವೀಗ ಪುಣ್ಯಾತ್ಗಿತ್ತೀರು ಚಿತ್ರತಂಡದಲ್ಲಿದೆ.
ನಾಯಕಿಯನ್ನೇ ಮಾಸ್ ಲುಕ್ಕಿನಲ್ಲಿ ಕಂಗೊಳಿಸುವಂತೆ ಮಾಡೋ ಪ್ರಯತ್ನಗಳು ಆಗಾಗ ನಡೆಯುತ್ತಿರುತ್ತವೆ. ಆದರೆ ನಾಲ್ವರು ನಾಯಕಿಯರನ್ನು ಕೈಲಿ ಮಚ್ಚು ಲಾಂಗು ಕೊಟ್ಟು, ಎಲ್ಲರೂ ಗಾಬರಿ ಬೀಳುವಂತೆ, ಸೆನ್ಸೇಷನ್ ಕ್ರಿಯೇಟಾಗುವಂತೆ ಮಾಡೋದು ಸದ್ಯದ ಮಟ್ಟಿಗೆ ಹೊಸಾ ಟ್ರೆಂಡು. ಅಂಥಾ ಟ್ರೆಂಡ್ ಹುಟ್ಟುಹಾಕಿದ ಸಂಪೂರ್ಣ ಕೀರ್ತಿ ಪುಣ್ಯಾತ್ಗಿತ್ತೀರು ಚಿತ್ರಕ್ಕೇ ಸಲ್ಲುತ್ತೆ!
ಸತ್ಯನಾರಾಯಣ ಮನ್ನೆ ನಿರ್ಮಾಣ ಮಾಡಿರೋ ಈ ಚಿತ್ರವನ್ನು ರಾಜ್ ನಿರ್ದೇಶನ ಮಾಡಿದ್ದಾರೆ. ಮಮತಾ ರಾವುತ್ ಈ ಚಿತ್ರದಲ್ಲಿ ನಾಲ್ವರು ಬಜಾರಿಯಲ್ಲಿ ಒಬ್ಬರಾಗಿ, ಭಿನ್ನವಾದ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅವರದ್ದು ಆರ್ಟಿಸ್ಟ್ ಆರತಿ ಎಂಬ ಪಾತ್ರ. ಇವರಿಗೆ ಬಾಯ್ಬಡ್ಕಿ ಭವ್ಯಾ, ಮೀಟರ್ ಮಂಜುಳಾ ಮತ್ತು ಸುಳ್ಳಿ ಸುಜಾತಾ ಕೂಡಾ ಜೊತೆಯಾಗಿದ್ದಾರೆ. ಈ ಚಿತ್ರ ಪ್ರೇಕ್ಷಕರ ಪಾಲಿಗೆ ಹೊಸಾ ಅನುಭೂತಿ ನೀಡುತ್ತಲೇ ಭರ್ಜರಿ ಗೆಲುವು ದಾಖಲಿಸುತ್ತದೆ ಎಂಬ ಗಾಢ ಭರವಸೆ ನಿರ್ದೇಶಕರದ್ದು.
ಹುಡುಗೀರ ಜಗತ್ತಲ್ಲಿ ಇಂಥಾದ್ದೂ ಇರಬಹುದಾ ಎಂಬಂತೆ ಅಚ್ಚರಿ ಹುಟ್ಟಿಸುತ್ತಾ, ಈ ಬಜಾರಿಗರ ಬಗ್ಗೆ ಬೈದುಕೊಳ್ಳುವಂತೆ ಮಾಡುತ್ತಲೇ ಬದುಕಿಗೆ ಹತ್ತಿರಾದ ಅನೇಕ ವಿಚಾರವನ್ನೂ ಈ ಚಿತ್ರ ಒಳಗೊಂಡಿದೆ. ಹೀಗೆ ಕಥೆಯೆಂಬುದು ಎತ್ತ ಹೊಯ್ದಾಡಿದರೂ ಇದರ ಪ್ರಧಾನ ಉದ್ದೇಶ ಮನೋರಂಜನೆ. ನೂರಕ್ಕೆ ನೂರರಷ್ಟು ಕಮರ್ಷಿಯಲ್ ಅಂಶಗಳನ್ನೊಳಗೊಂಡಿರೋ ಪುಣ್ಯಾತ್ಗಿತ್ತೀರ ದರ್ಶನ ಸದ್ಯದಲ್ಲಿಯೇ ಆಗಲಿ
#
No Comment! Be the first one.