ಕನ್ನಡ ಸಿನಿಮಾ ರಂಗದಲ್ಲಿ ಬಹಳಷ್ಟು ಹೊಸ ಪ್ರತಿಭೆಗಳಿಗೆ ವೇದಿಕೆ ಸಿಕ್ಕಿದೆ. ತಮ್ಮ ಕಥೆಯನ್ನು ತೆರೆ ಮೇಲೆ ತರೋದಿಕ್ಕೆ ಕನ್ನಡ ಸಿನಿಮಾ ರಂಗ ವೇದಿಕೆ ಮಾಡಿಕೊಟ್ಟಿರುವ ಉದಾಹರಣೆಗಳು ಸಾಕಷ್ಟಿವೆ. ಇನ್ನೂ ಅದೇ ರೀತಿ ಹೊಸ ಹೊಸ ಟೈಟಲ್ ಗಳು ಕೂಡ ಸದ್ದು ಮಾಡುತ್ತಿವೆ. ಈಗಾಗಲೇ ವಿಭಿನ್ನ ಟೈಟಲ್ ಇಟ್ಟುಕೊಂಡು ಬಂದ ಅನೇಕ ಹೊಸಬರ ಸಾಲಿಗೆ ಪುರಾವೆ ಸಿನಿಮಾ ಕೂಡ ಒಂದು ಸೇರ್ಪಡೆಯಾಗಿದೆ. ಸದ್ಯ ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ.
ಯಾವುದೋ ಪುಟ್ಟ ಹುಡುಗಿಯ ರೇಪ್ ಅಂಡ್ ಮರ್ಡರ್ ನನ್ನು ಹುಡುಕುತ್ತಾ ಹೊರಡುವ ಕಥೆ. ಕಥೆಯಲ್ಲಿ ಆಗುವ ತಿರುವುಗಳು, ಆ ಆರೋಪಿ ಯಾರು ಎಂಬುದನ್ನು ಕಂಡುಹಿಡಿಯಲು ಹೊರಟಾಗ ನಡೆಯುವ ಘಟನೆಗಳು, ಹೀಗೆ ಎಲ್ಲವನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ. ಈ ಸಿನಿಮಾ ಸಸ್ಪೆನ್ಸ್ ಥ್ರಿಲರ್ ಅಂಡ್ ಕಿಲ್ಲಿಂಗ್ ಮರ್ಡರ್ ಕಥೆ ಎನ್ನುವುದು ಟ್ರೇಲರ್ ನಿಂದ ಗೊತ್ತಾಗುತ್ತಿದೆ. ಮಗುವಿನ ಮೇಲಾದ ರೇಪ್ ಹಾಗೂ ಕೊಲೆಯನ್ನು ಯಾರು ಮಾಡಿರಬಹುದು ಎಂಬುದನ್ನು ಸಿನಿಮಾ ಟ್ರೇಲರ್ ನಲ್ಲಿ ತೋರಿಸಲಾಗಿದೆ.
ಸದ್ಯ ಈ ಚಿತ್ರ ವಿನೋದ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ಕೃಷ್ಣಮೂರ್ತಿ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಉಳಿದಂತೆ ಸಿನಿಮಾದಲ್ಲಿ ನಿರಂತ್, ರಕ್ಷಾ ಸೋಮಶೇಖರ್ ಸೇರಿದಂತೆ ಹಲವಾರು ಮಂದಿಯ ತಾರಾಗಣವಿದೆ. ಈಗಾಗಲೇ ಸಿನಿಮಾದ ಹಾಡುಗಳು ಕೂಡ ಸಕ್ಕತ್ ಹಿಟ್ ಆಗಿದ್ದು, ಇದೀಗ ಈ ಸಿನಿಮಾ ಟ್ರೇಲರ್ ಕೂಡ ಸದ್ದು ಮಾಡುತ್ತಿದೆ.