ಸಾಕಷ್ಟು ದಿನಗಳಿಂದ ಪುರಿ ಜಗನ್ನಾಥ್ ತಮ್ಮ ಡ್ರೀಮ್ ಪ್ರಾಜೆಕ್ಟ್ ಜನ ಗಣ ಮನ ಚಿತ್ರಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಅವರನ್ನು ಆಯ್ಕೆ ಮಾಡಿಕೊಂಡಿದ್ದು, ಎರಡು ಮೂರು ಬಾರಿ ಬೆಂಗಳೂರಿನಲ್ಲಿ ಅವರನ್ನು ಭೇಟಿಯಾಗಿ ಅವರ ಜತೆ ಮಾತುಕತೆಯನ್ನು ನಟಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಸದ್ಯ ಪುರಿ ಜಗನ್ನಾಥ್ ತಮ್ಮ ಚಿತ್ರಕ್ಕೆ ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಅವರನ್ನು ಆರಿಸಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.
ಇತ್ತೀಚಿಗೆ ಬಂದ ಮಾಹಿತಿ ಪ್ರಕಾರ ರಾಕಿಂಗ್ ಸ್ಟಾರ್ ಯಶ್ ಕೆಲವು ವೈಯಕ್ತಿಕ ಕಾರಣಗಳಿಂದ ಜನ ಗಣ ಮನ ಚಿತ್ರದಿಂದ ಹೊರ ಬಂದಿದ್ದು, ಅವರ ಜಾಗಕ್ಕೆ ವಿಜಯ್ ದೇವರಕೊಂಡ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.ಈ ಚಿತ್ರದ ಕುರಿತು ದೊಡ್ಡ ಕನಸನ್ನೇ ಕಂಡಿರುವ ಪುರಿ ಜಗನ್ನಾಥ್ ಈ ಮೊದಲು ಪ್ರಿನ್ಸ್ ಮಹೇಶ್ ಬಾಬು ಅವರನ್ನು ನಾಯಕನಾಗಿ ಆಯ್ಕೆ ಮಾಡಿದ್ದರು. ಆದರೆ ವೈಯಕ್ತಿಕ ಕಾರಣದಿಂದ ಮಹೇಶ್ ಬಾಬು ಚಿತ್ರದಿಂದ ಹಿಂದೆ ಸರಿದಿದ್ದರು. ಇದಕ್ಕೂ ಮುನ್ನ ಚಿರಂಜೀವಿ ಅವರಿಗೂ ಆಫರ್ ನೀಡಲಾಗಿತ್ತು ಅವರು ನಿರಾಕರಿಸಿದ್ದರು ಎಂದು ಹೇಳಲಾಗುತ್ತಿದೆ. ಕೆಜಿಎಫ್ ಸಕ್ಸಸ್ ನಲ್ಲಿದ್ದ ಯಶ್ ಅವರನ್ನು ತಮ್ಮ ಚಿತ್ರಕ್ಕೆ ಪುರಿ ಜಗನ್ನಾಥ್ ಆಯ್ಕೆ ಮಾಡಿಕೊಂಡಿದ್ದರು. ಇದರಿಂದ ಯಶ್ ಅಭಿಮಾನಿಗಳು ಸಹ ಪುರಿ ಜಗನ್ನಾಥ್ ಮತ್ತು ಯಶ್ ಕಾಂಬಿನೇಷನ್ ಚಿತ್ರಕ್ಕಾಗಿ ಕಾಯುತ್ತಿದ್ದರು. ಆದರೆ ಇದೀಗ ಪುರಿ ಜಗನ್ನಾಥ್ ತಮ್ಮ ಮುಂದಿನ ಪ್ರಾಜೆಕ್ಟ್ ಗೆ ವಿಜಯ್ ದೇವರಕೊಂಡ ಅವರನ್ನು ಆಯೆ ಮಾಡಿಕೊಂಡಿರೋದು ರಾಕಿಂಗ್ ಅಭಿಮಾನಿಗಳ ಕನಸನ್ನು ನುಚ್ಚುನೂರಾಗಿಸಿದೆ.