ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗಷ್ಟೇ ನಿರ್ಮಾಪಕರಾಗಿ ಗುರುತಿಸಿಕೊಳ್ಳುತ್ತಿದ್ದ ಪುರುಶೋತ್ತಮ್ ನಿಧನರಾಗಿದ್ದಾರೆ. ಸಿನಿಮಾ ರಂಗದ ಮೇಲೆ ಅತೀವ ಪ್ರೀತಿ ಹೊಂದಿದ್ದ, ಸಿನಿ ವಲಯದಲ್ಲಿ ಎಲ್ಲರ ಸ್ನೇಹ ಸಂಪಾದಿಸಿಕೊಂಡಿದ್ದ ಅವರ ಅಕಾಲಿಕ ಅಗಲಿಕೆ ಎಲ್ಲರಿಗೂ ಆಘಾತ ತಂದಿದೆ.
ಪುರುಶೋತ್ತಮ್ ವಿಜಯ್ ರಾಘವೇಂದ್ರ ನಾಯಕನಾಗಿ ನಟಿಸಿದ್ದ ಜಾನಿ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಸ್ವತಂತ್ರವಾಗಿ ಪುರುಶೋತ್ತಮ್ ನಿರ್ಮಾಣ ಮಾಡಿದ್ದ ಮೊದಲ ಚಿತ್ರವೂ ಜಾನಿಯೇ. ಅದಾದ ಬಳಿಕ ಎಂಎಂಸಿಎಚ್ ಎಂಬೊಂದು ಚಿತ್ರವನ್ನು ಕೂಡಾ ಅವರೇ ನಿರ್ಮಾಣ ಮಾಡಿದ್ದರು. ಈ ಚಿತ್ರವನ್ನು ಪ್ರೇಕ್ಷಕರೂ ಮೆಚ್ಚಿಕೊಂಡಿದ್ದರು.
ಇದೀಗ ಮತ್ತೊಂದಷ್ಟು ಹೊಸಾ ಯೋಜನೆಯೊಂದಿಗೆ ಹೊಸಾ ಚಿತ್ರ ನಿರ್ಮಾಣ ಮಾಡಲು ಪುರುಶೋತ್ತಮ್ ತಯಾರಿ ನಡೆಸುತ್ತಿದ್ದರು. ಈ ಬಗ್ಗೆ ಉತ್ಸಾಹದಿಂದಲೇ ಗೆಳೆಯರೊಂದಿಗೆ ಚರ್ಚೆಯ್ನ್ನೂ ನಡೆಸುತ್ತಿದ್ದರಂತೆ. ಆದರೆ ಅದ್ಯಾವುದೂ ಕೈಗೂಡದಂತೆ ಅವರನ್ನು ಸಾವು ಸೆಳೆದುಕೊಂಡಿದೆ. ಪುರುಶೋತ್ತಮ್ ಅವರಿಗಿ ಮೂವತ್ತೇಳು ವರ್ಷ ವಯಸ್ಸಾಗಿತ್ತಷ್ಟೇ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಮರೆಯಾದ ಪುರುಶೋತ್ತಮ್ ಅಗಲಿಕೆಯನ್ನು ಭರಿಸಿಕೊಳ್ಳುವ ಶಕ್ತಿ ಅವರ ಕುಟುಂಬಿಕರಿಗೆ ಲಭಿಸಲೆಂದು ಹಾರೈಸೋಣ.