ಪ್ರಿಯಾಂಕ ಉಪೇಂದ್ರ ನಟನೆಯ ಸೂಪರ್ ಹಿಟ್ ಹಾರರ್ ಮಮ್ಮಿ ಚಿತ್ರವನ್ನು ನಿರ್ದೇಶನ ಮಾಡಿದ್ದ ಲೋಹಿತ್ ಮತ್ತೊಂದು ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಈ ಚಿತ್ರವನ್ನು ನಿರ್ಮಾಣ ಮಾಡಲಿರುವವರು ಪುಷ್ಕರ್ ಮಲ್ಲಿಕಾರ್ಜುನಯ್ಯ.
ಸದ್ಯ ರಕ್ಷಿತ್ ಶೆಟ್ಟಿ ನಾಯಕನಾಗಿರುವ ಶ್ರೀಮನ್ನಾರಾಯಣ, ಭೀಮಸೇನ ನಳ ಮಹಾರಾಜ, ಚಾರ್ಲಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಿರುವ ಪುಷ್ಕರ್ ಮಲ್ಲಿಕಾರ್ಜುನ ಇದೇ ಮೊದಲ ಬಾರಿ ಹಾರರ್ ಚಿತ್ರವೊಂದನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಈ ಹಿಂದೆ ಲೋಹಿತ್ ಮಮ್ಮಿ ಚಿತ್ರ ಮಾಡಿದ್ದರಲ್ಲಾ? ಅದನ್ನು ನೋಡಿದ್ದ ಪುಷ್ಕರ್ ಆವಾಗಲೇ ಲೋಹಿತ್ ಜೊತೆಗೆ ಅದೇ ಜಾನರಿನ ಚಿತ್ರ ಮಾಡಲು ನಿರ್ಧರಿಸಿದ್ದರಂತೆ.
ಈ ಬಗ್ಗೆ ಆಗಲೇ ಮಾತುಕತೆಯೂ ನಡೆದಿತ್ತು. ಮೊದಲ ಚಿತ್ರ ಮಮ್ಮಿ ಯಶಸ್ವೀ ಪ್ರದರ್ಶನ ಕಾಣುತ್ತಿರುವಾಗಲೇ ಲೋಹಿತ್ ಹೌರಾ ಬ್ರಿಡ್ಜ್ ಚಿತ್ರ ನಿರ್ದೇಶನ ಮಾಡಲು ತಯಾರಿ ಆರಂಭಿಸಿದ್ದರು. ಪುಷ್ಕರ್ ಕೂಡಾ ಎರಡ್ಮೂರು ಚಿತ್ರ ನಿರ್ಮಾಣ ಮಾಡಲು ಮುಂದಾಗಿದ್ದರು. ಈಗ ಇಬ್ಬರ ಕೆಲಸ ಕಾರ್ಯಗಳೂ ಮುಗಿಯುತ್ತಾ ಬಂದಿರೋದರಿಂದ ಹೊಸಾ ಹಾರರ್ ಚಿತ್ರದ ತಯಾರಿ ಆರಂಭವಾಗಿದೆ.
ನಿರ್ದೇಶಕ ಲೋಹಿತ್ ಈಗಾಗಲೇ ಒಂದು ಕಥೆ ರೆಡಿ ಮಾಡಿಕೊಂಡಿದ್ದಾರಂತೆ. ಅವರಿಗೆ ಹಾರರ್ ಕಥಾನಕಗಳನ್ನು ಮ್ಯಾನೇಜು ಮಾಡೋ ವಿದ್ಯೆ ಈಗಾಗಲೇ ಕರಗತವಾಗಿರೋದರಿಂದ ಮೂರನೇ ಚಿತ್ರವೂ ಹಾರರ್ ಜಾನರಿನಲ್ಲೇ ಮೂಡಿ ಬರಲಿದೆ. ಮಮ್ಮಿ ಚಿತ್ರದ ನಂತರ ಅವರು ಕೈಗೆತ್ತಿಕೊಂಡಿದ್ದ ಹೌರಾ ಬ್ರಿಡ್ಜ್ ಕೂಡಾ ಹಾರರ್ ಕಂಟೆಂಟು ಹೊಂದಿರೋ ಚಿತ್ರವೇ. ಇದೀಗ ಈ ಚಿತ್ರಕ್ಕಾಗಿ ತಾರಾಗಳದ ಆಯ್ಕೆಗೆ ಮುಂದಾಗಿದ್ದಾರೆ. ಇಷ್ಟರಲ್ಲಿಯೇ ತಾರಾಗಣ, ಶೀರ್ಷಿಕೆ ಮುಂತಾದ ವಿವರಗಳು ಹೊರ ಬೀಳಲಿವೆ.
#
No Comment! Be the first one.