ಅಪ್ಪ ಮಗಳ ಬಾಂದವ್ಯವನ್ನೇ ಪ್ರಮುಖ ಅಂಶವಾಗಿಟ್ಟುಕೊಂಡು ಪುಷ್ಬಕ ವಿಮಾನದಂತಹ ಸಿನಿಮಾ ಮಾಡಿ ಸೈ ಎನ್ನಿಸಿಕೊಂಡ ನಿರ್ದೇಶಕ ಎಸ್. ರವೀಂದ್ರನಾಥ್ ಕಂಟ್ರಿ ಮೇಡ್ ಚಾರಿ ಎಂಬ ಸಿನಿಮಾದ ಮೂಲಕ ಮತ್ತೆ ಕಮ್ ಬ್ಯಾಕ್ ಆಗಿದ್ದಾರೆ. ಚಿತ್ರತಂಡ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿದ್ದು, ಕ್ಯಾಚಿ ಟೈಟಲ್ ಇರೋ ಚಿತ್ರದ ಪೋಸ್ಟರ್ ಕೂಡ ಗಮನ ಸೆಳೆಯುವಂತಿದೆ.
ಚಿತ್ರ ಔಟ್ ಅಂಡ್ ಔಟ್ ಮಾಸ್ ಆಕ್ಷನ್ ಥ್ರಿಲ್ಲರ್ ಆಗಿರಲಿದ್ದು ಸದ್ಯ ಚಿತ್ರದ ನಾಯಕ ಯಾರು ಅನ್ನೋದೇ ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿದೆ. ಇನ್ನು ನುರಿತ ತಾಂತ್ರಿಕ ವರ್ಗ ಚಿತ್ರಕ್ಕೆ ಕೆಲಸ ಮಾಡುತ್ತಿದ್ದು, ನೂರೊಂದು ನೆನಪು ಖ್ಯಾತಿಯ ಎಸ್.ಕೆ. ರಾವ್ ಕಂಟ್ರಿ ಮೇಡ್ ಚಾರಿ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಟಚ್ ಬೇರ್ ಸ್ಟುಡಿಯೋ ಸ್ಬ್ಯಾನರ್ ನಡಿಯಲ್ಲಿ ಸುಶೀಲ್ ಸತ್ಯರಾಜ್ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ.
No Comment! Be the first one.