ವರ್ಷಕ್ಕೆ ಮುಂಚೆ ಎಲ್ಲಿ ನೋಡಿದರೂ ಪುಟ್ಟಗೌರಿಯದ್ದೇ ಮಾತು. ಮನೆಯಲ್ಲಿ ಕೂತು ಟೀವಿ ನೋಡೋ ಹೆಣ್ಮಕ್ಕಳಿಂದಾ ಹಿಡಿದು ಆನ್ಲೈನಲ್ಲಿ ಟ್ರಾಲ್ ಮಾಡೋರ ವರೆಗೂ ಎಲ್ಲರ ಬಾಯಲ್ಲೂ ಪುಟ್ ಗೌರಿಯ ಪ್ರವರ ಓಡಾಡುತ್ತಿತ್ತು. ಪುಟ್ಟಗೌರಿ ಮದುವೆ ಧಾರಾವಾಹಿಯಿಂದ ರಂಜನಿ ರಾಘವನ್ ಹೊರಬಂದಿದ್ದೇ ಬಂದಿದ್ದು ಆ ನಂತರ ಎಲ್ಲೂ ಈಕೆಯ ಸುಳಿವೇ ಇಲ್ಲ. ಸೂಫಿ ಅನ್ನೋ ಸಿನಿಮಾದಲ್ಲಿ ಈಕೆ ಹೀರೋಯಿನ್ ಅನ್ನೋ ಅನೌನ್ಸ್ ಮೆಂಟಾಯಿತು ಆದರದು ಶುರುವಾಗಲೇ ಇಲ್ಲ. ಸಾರಾ ಗೋವಿಂದು ಮಗನ ಜೊತೆಗೊಂದು ಸಿನಿಮಾ ಆರಂಭವಾಯ್ತು ಆದರೆ ಅದು ಎಲ್ಲಿಗೆ ಬಂದು ನಿಂತಿದೆಯೋ ಗೊತ್ತಿಲ್ಲ. ಟಕ್ಕರ್ ಅನ್ನೋ ಸಿನಿಮಾದಲ್ಲಿ ಈಕೆ ನಾಯಕಿ ಎನ್ನುವ ವಿಚಾರ ಹೊರಬಿತ್ತು. ಟಕ್ಕರ್ ಸಿನಿಮಾಗಾಗಿ ಈಕೆ ಮಲೇಷಿಯಾಗೆ ಹೋಗಿದ್ದಾಳೆ ಅಂತೊಂದು ನ್ಯೂಸು ಹರಿದಾಡಿದ್ದು ಬಿಟ್ಟರೆ ಮತ್ತೆ ಭಾರತಕ್ಕೆ ಬಂದಿಳಿದಿದ್ದರ ಬಗ್ಗೆ ಸುದ್ದಿಯೇ ಇಲ್ಲ. ಒಟ್ಟಿನಲ್ಲಿ ಈ ನಟಿಗೂ ಸಿನಿಮಾಗೂ ಅಷ್ಟಾಗಿ ಆಗಿಬರುತ್ತಿಲ್ಲ ಅನ್ನೋದು ಖಾತ್ರಿಯಾಗಿದೆ.
ಈ ನಡುವೆ ರಂಜನಿ ರಾಘವನ್ ಮತ್ತೆ ಪುಟ್ಟ ಗೌರಿ ಟೀಮು ಸೇರುತ್ತಾರೆ ಅನ್ನೋ ಗಾಳಿ ಸುದ್ದಿ ಹಬ್ಬಿತ್ತು. ಜೊತೆಗೆ ಈಕೆ ಸೀರಿಯಲ್ ನಿರ್ಮಾಣಕ್ಕಿಳಿದಿದ್ದಾರೆ ಎನ್ನುವ ವಿಚಾರ ಲೇಟೆಸ್ಟಾಗಿ ಕೇಳಿಬರುತ್ತಿದೆ. ಸಾಮಾನ್ಯವಾಗಿ ಸೀರಿಯಲ್ ಬಿಟ್ಟುಬಂದ ಹುಡುಗಿಯರು ಸಿನಿಮಾಗಳಲ್ಲಿ ಮಿಂಚಿಬಿಡುತ್ತೇವೆ ಎನ್ನುವ ಭಯಾನಕ ಭ್ರಮೆಯಲ್ಲಿರುತ್ತಾರೆ. ಎಲ್ಲ ನಟಿಯರ ವಿಚಾರದಲ್ಲೂ ಅದು ಸಾಧ್ಯವಾಗಬೇಕಲ್ಲ? ರಂಜನಿ ಕೂಡಾ ರಾಧಿಕಾ ಪಂಡಿ ಥರಾನೋ, ಆಶಿಕಾ ರಂಗನಾಥ್ ರೀತಿಯಲ್ಲೋ ಸಿನಿಮಾದಲ್ಲಿ ಕ್ಲಿಕ್ ಆಗುತ್ತೇನೆ ಅಂತಾ ಕನಸು ಕಂಡಿದ್ದರೋ ಏನೋ? ಆದರೆ, ಸದ್ಯದ ಪರಿಸ್ಥಿತಿ ನೋಡಿದರೆ ಪುಟ್ ಗೌರಮ್ಮನ ಕನಸು ನನಸಾಗುವಂತೆ ಕಾಣುತ್ತಿಲ್ಲ!
No Comment! Be the first one.