ಕ್ಯೂನೆಟ್ ಕಂಪನಿಯ ಬಹುಕೋಟಿ ವಂಚನೆ ಪ್ರಕರಣದ ಆರೋಪದ ಮೇಲೆ ಬಾಲಿವುಡ್ ನ ಹೆಸರಾಂತ ಸ್ಟಾರ್ ಗಳು ತಗುಲಿಕೊಂಡಿರುವ ಸಾಧ್ಯತೆ ಇದ್ದು, ಶಾರುಖ್ ಖಾನ್ ಸೇರಿದಂತೆ ಏಳು ನಟಿರಿಗೆ ತೆಲಂಗಾಣದ ಸೈಬರಾಬಾದ್ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಕಂಪನಿ ಪರವಾಗಿ ಪ್ರಚಾರ ಮಾಡಿದ ಆರೋಪದ ಮೇಲೆ ನೋಟಿಸ್ ಜಾರಿ ಮಾಡಲಾಗಿದ್ದು, ವಂಚಕ ಕ್ಯೂನೆಟ್ ಕಂಪನಿಯಲ್ಲಿ ಸಾರ್ವಜನಿಕರು ಹಣ ಹೂಡಿಕೆ ಮಾಡದಂತೆ ಕೇಂದ್ರ ಸರ್ಕಾರವೇ ಅಧಿಕೃತವಾಗಿ ಘೋಷಿಸಿದೆ.
ವಿಹಾನ್ ಡೈರೆಕ್ಟ್ ಪ್ರೈ.ಲಿ. ಕಂಪನಿ ಪರವಾಗಿ ಪ್ರಚಾರ ಮಾಡಿದ್ದ ಬಾಲಿವುಡ್ 7 ನಟ, ನಟಿಯರ ಜೊತೆಗೆ 500 ಮಂದಿ ಕಂಪನಿ ಪ್ರಚಾರಕರಿಗೂ ನೋಟಿಸ್ ನೀಡಲಾಗಿದೆ. ಈ ಪೈಕಿ ನಟ ಶಾರುಖ್ ಖಾನ್, ಅನಿಲ್ ಕಪೂರ್, ಬೋಮನ್ ಇರಾನಿ ವಕೀಲರ ಮೂಲಕ ಉತ್ತರಿಸಿದ್ದಾರೆ. ಒಂದೊಮ್ಮೆ ನೋಟಿಸ್ ಗೆ ಪ್ರತಿಕ್ರಿಯೆ ಬರದಿದ್ದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಸೈಬರಾಬಾದ್ ಪೊಲೀಸ್ ಆಯುಕ್ತ ವಿ.ಸಿ ಸಜ್ಜನವರ್ ತಿಳಿಸಿದ್ದಾರೆ. ಇನ್ನು ಬಾಲಿವುಡ್ ನಟರಾದ ಜಾಕಿಶ್ರಾಫ್, ವಿವೇಕ್ ಒಬೇರಾಯ್, ಪೂಜಾ ಹೆಗ್ಡೆ, ಅಲ್ಲು ಸಿರೀಷ್ ಅವರಿಗೂ ನೋಟಿಸ್ ನೀಡಲಾಗಿದೆಯಂತೆ.