ಸೇಲ್ಸ್ ಮನ್ ಆಗಿದ್ದ ದಿವಾಕರ್ ಬಿಗ್ ಬಾಸ್ ಗೆ ಕಾಮನ್ ಮ್ಯಾನ್ ಆಗಿ ಎಂಟ್ರಿ ಕೊಟ್ಟ ಬೆನ್ನಲ್ಲೇ ರಾತ್ರೋ ರಾತ್ರಿ ಸೆಲೆಬ್ರೆಟಿಯಾಗಿ ಹೋಗಿದ್ದರು. ಬಿಗ್ ಬಾಸ್ ನಿಂದ ಹೊರಬರುವಷ್ಟರಲ್ಲಿ ತಮ್ಮದೇ ಆದ ಹಿಂಬಾಲಕರನ್ನು ಹೊಂದಿ ಫೇಮಸ್ ಆಗಿ ಹೋದರು. ಆನಂತರ ದಿವಾಕರ್ ಮುಟ್ಟಿದ್ದೆಲ್ಲವೂ ಚಿನ್ನವಾಗಿ ಹೋಯಿತು. ಬಳಿಕ ದಿವಾಕರ್ ಕನಸಿನಂತೆಯೇ ಗಾಂಧಿನಗರದಿಂದಲೂ ಆಫರ್ ಬರಹತ್ತಿದವು.
ಸದ್ಯ ದಿವಾಕರ್ ನಟನೆಯ ಮೊದಲ ಸಿನಿಮಾ ಬಿಡುಗಡೆಗೆ ಸಿದ್ದವಾಗಿದ್ದು, ಸಿನಿಮಾದಲ್ಲಿ ಕಿಚ್ಚನ ಅಭಿಮಾನಿಯಾಗಿ ನಟಿಸುತ್ತಿರುವುದು ವಿಶೇಷವಾಗಿದೆ. ಇನ್ನು ಚಿತ್ರದಲ್ಲಿ ದಿವಾಕರ್ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದಾರೆ. ಈಗಾಗಲೇ ರೇಸ್ ಎನ್ನುವ ಒಂದೊಳ್ಳೆ ಮಾಸ್ ಟೈಟಲ್ ನಿಂದಲೇ ಬಹಳಷ್ಟು ಸುದ್ದಿ ಮಾಡಿದ್ದ ಈ ಚಿತ್ರ ಇತ್ತೀಚಿಗಷ್ಟೇ ಟ್ರೇಲರನ್ನು ಸಹ ರಿಲೀಸ್ ಮಾಡಿಕೊಂಡಿದೆ. ಸದ್ಯದಲ್ಲಿಯೇ ರೇಸ್ ಥಿಯೇಟರ್ ಗೆ ಬರಲಿದೆ.
No Comment! Be the first one.