ಬೋಲ್ಡ್ ಪಾತ್ರಗಳಿಗೆ ನೋ ಎಂದ ರಚ್ಚು!

ಇಲ್ಲಿಯವರೆಗೂ ಹೋಮ್ಲಿ, ಟಾಮ್ ಬಾಯ್ ಮಾದರಿಯ ಖಡಕ್ ಪಾತ್ರಗಳನ್ನೇ ಆರಿಸಿಕೊಳ್ಳುತ್ತಿದ್ದವರು ರಚಿತಾರಾಮ್. ಬಿಡುಗಡೆಗೆ ರೆಡಿಯಿರುವ ಉಪೇಂದ್ರ ಮತ್ತು ಆರ್ ಚಂದ್ರು ಕಾಂಬಿನೇಷನ್ನಿನ ಐ ಲವ್ ಯು ಸಿನಿಮಾದಲ್ಲಿ ಮಾತ್ರ ಸಖತ್ ಬೋಲ್ಡ್ ಆಗಿ ನಟಿಸಿರೋದು ರಿಲೀಸ್ ಆಗಿರುವ ಟ್ರೇಲರ್ ಮೂಲಕವೇ ಜಗಜ್ಜಾಹೀರಾಗಿದೆ. ಅಲ್ಲದೇ ಇದುವರೆಗೆ ಇಷ್ಟೊಂದು ಬೋ್ಲಡ್ ಆಗಿ ಕಾಣಿಸಿರಲಿಲ್ಲವೆಂದು ಸ್ವತಃ ರಚಿತಾ ರಾಮ್ ಅವರೇ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಬಾಯಿ ಬಿಟ್ಟಿದ್ದಾರೆ. ಇನ್ನು ಚಿತ್ರದ ನಿರ್ದೇಶಕ ಆರ್. ಚಂದ್ರು ಅವರ ಪ್ರಕಾರವಿದು ಎರಾಟಿಕ್ ಆಗಿರುವ ಸೀನು. ಚಿತ್ರದ ಕಥೆ ಕೇಳಿದ ನಂತರ ರಚಿತಾ ಅವರೇ ತಾವು ಈ ದೃಶ್ಯವನ್ನು ನಿಭಾಯಿಸುವುದಾಗಿಯೂ ಭರವಸೆ ನೀಡಿದ್ದರು. ಎಂದು ಚಂದ್ರು ಸಮಾರಂಭದಲ್ಲಿ ಬಹಿರಂಗಪಡಿಸಿದ್ದಾರೆ.

ರಚಿತಾ ಅವರ ಬೋಲ್ಡ್ ನಟನೆ ಸಾಕಷ್ಟು ಅಭಿಮಾನಿಗಳಿಗೆ ಇಷ್ಟವಾದರೆ ಮತ್ತೂ ಕೆಲವರಿಗೆ ಬೇಸರವನ್ನುಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ರಚಿತಾ ರಾಮ್ ಇನ್ನುಮುಂದೆ ಇಷ್ಟರಮಟ್ಟಿಗೆ ಬೋಲ್ಡ್ ಆಗಿ ನಟಿಸಲಾರೆ ಎಂದು ತಿಳಿಸಿದ್ದಾರೆ. ಅದೇನೇ ಹಾಗಿರಲಿ ರಿಲೀಸ್ ಆದ ಐ ಲವ್ ಯು ಟ್ರೇಲರ್ ಈಗಾಗಲೇ ಟಾಲಿವುಡ್ ನಲ್ಲಿ ಬಹಳಷ್ಟು ಸದ್ದು ಮಾಡುತ್ತಿದೆ. ಟ್ರೇಲರ್ ಮಧ್ಯದಲ್ಲಿ ಹೋಮ್ಲಿ ಆಗಿ ಕಾಣಿಸಿಕೊಂಡಿರುವ ಸೋನು ಗೌಡ ಅವರ ಪಾತ್ರವೇನು? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಇನ್ನು ರಚಿತಾ ಮಾಡುವ ಪ್ರೇಮ ಪಾಠಕ್ಕೂ ಸೋನುಗೌಡ ಅವರಿಗೂ ಲಿಂಕ್ ಏನು ಎಂಬಿತ್ಯಾದಿ ಗೊಂದಲಗಳನ್ನು ಸೃಷ್ಟಿಮಾಡಿದೆ. ಅದಕ್ಕೆ ಉತ್ತರ ಪಡೆಯಲಾದರೂ ಸಿನಿಮಾ ರಿಲೀಸ್ ಆಗುವವರೆಗೂ ಕಾಯಲೇಬೇಕಲ್ಲವೇ..


Posted

in

by

Tags:

Comments

Leave a Reply