ಸದ್ಯ ಕನ್ನಡದಲ್ಲಿ ಮತ್ತೊಂದು ವರ್ಷಕ್ಕಾಗುವಷ್ಟು ಬ್ಯುಸಿಯಾಗಿರೋ ನಟಿಯರಲ್ಲಿ ರಚಿತಾ ರಾಮ್ ಮೊದಲಿಗರು. ಅವರ ಕೈಲಿರೋ ಚಿತ್ರಗಳ ಪಟ್ಟಿಯೇ ಈ ಮಾತನ್ನು ಸ್ಪಷ್ಟೀಕರಿಸುತ್ತೆ. ಕೇವಲ ಕಮರ್ಶಿಯಲ್ ಮಾತ್ರವಲ್ಲದೇ ಪ್ರಯೋಗಾತ್ಮಕ ಚಿತ್ರಗಳಲ್ಲಿಯೂ ನಟಿಸುತ್ತಿರೋ ರಚಿತಾ ಇದೀಗ ಟಾಲಿವುಡ್ ಪ್ರೇಕ್ಷಕರಿಗೂ ಪರಿಚಯವಾಗುವ ಖುಷಿಯಲ್ಲಿದ್ದಾರೆ. ರಚಿತಾ ರಾಮ್ ತೆಲುಗು ಸೇರಿದಂತೆ ಪರಭಾಷಾ ಚಿತ್ರರಂಗಕ್ಕೂ ಲಗ್ಗೆಯಿಡುತ್ತಾರೆಂಬ ಸುದ್ದಿ ಹರಡಿಕೊಂಡು ಬಹಳಷ್ಟು ಕಾಲವೇ ಆಗಿ ಹೋಗಿದೆ. ಆದರೆ ಆ ಬಗ್ಗೆ ರಚಿತಾ ಮನಸು ಮಾಡಿದಂತಿರಲಿಲ್ಲ. ಆದರೀಗ ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆಗೇ ಟಾಲಿವುಡ್ಡಿಗೆ ಪಾದಾರ್ಪಣೆ ಮಾಡಲು ತಯಾರಾಗಿದ್ದಾರೆ.
ಹಾಗಂತ ರಚಿತಾ ಟಾಲಿವುಡ್ ಸಿನಿಮಾ ಹೀರೋಯಿನ್ ಆಗಿ ನಟಿಸುತ್ತಿದ್ದಾರೆ ಅಂದುಕೊಳ್ಳುಚವಂತಿಲ್ಲ. ಆದರೆ ಅವರು ನಾಯಕಿಯಾಗಿ ನಟಿಸಿರು ಐ ಲವ್ ಯೂ ಚಿತ್ರ ತೆಲುಗಿನಲ್ಲಿಯೂ ತೆರೆ ಕಾಣಲಿದೆ. ಆರ್ ಚಂದ್ರು ನಿರ್ದೇಶನದ ಈ ಚಿತ್ರ ಏಕಕಾಲದಲ್ಲಿಯೇ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲಿದೆ. ಈ ಮೂಲಕ ಡಿಂಪಲ್ ಕ್ವೀನ್ ಹವಾ ತೆಲುಗಿನಲ್ಲಿಯೂ ಹರಡಿಕೊಳ್ಳಲಿದೆ. ಇದೀಗ ಈ ಚಿತ್ರದ ತೆಲುಗು ಟ್ರೈಲರ್ ಕೂಡಾ ಬಿಡುಗಡೆಯಾಗಿದೆ. ಅದಕ್ಕೆ ತೆಲುಗು ಪ್ರೇಕ್ಷಕರ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆಗಳೇ ಕೇಳಿ ಬರುತ್ತಿವೆ. ಇದೇ ತಿಂಗಳ ಕಡೇಯ ಹೊತ್ತೆಗೆ ಈ ಚಿತ್ರ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ರಿಲೀಸ್ ಆಗಲಿದೆ.
No Comment! Be the first one.