ಸೀರಿಯಲ್ ಪ್ರಿಯರಿಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿದಿನ ಒಂಬತ್ತು ಗಂಟೆಗೆ ಬರುವ ರಾಧಾರಮಣ ಜನಪ್ರಿಯ ಧಾರವಾಹಿ. ವಯಸ್ಸಿನ ಮಿತಿಯಿಲ್ಲದೇ ಆ ಧಾರವಾಹಿಯ ರಾಧಾ ರಮಣ ಪಾತ್ರಗಳನ್ನು ಹೆಚ್ಚಾಗಿ ಇಷ್ಟಪಡುವವರೇ ಹೆಚ್ಚು. ಇನ್ನು ಈ ಹಿಂದೆ ಧಾರವಾಹಿಯ ರಾಧ ಪಾತ್ರದ ಬದಲಾವಣೆಯ ಕುರಿತಾದ ಸುದ್ದಿಯೂ ತಿಳಿಯದೇ ಇರಲಿಕ್ಕಿಲ್ಲ. ಹೌದು ಮಾಡಿಕೊಂಡಿದ್ದ ಅಗ್ರಿಮೆಂಟ್ ಮುಗಿದ ಹಿನ್ನೆಲೆ ರಾಧಾ ಖ್ಯಾತಿಯ ಶ್ವೇತಾ ಪ್ರಸಾದ್ ಬೆರಳೆಣಿಕೆಯ ದಿನಗಳಷ್ಟೇ ಕಾಣಿಸೋದು ಎಂಬ ವಿಚಾರಕ್ಕೆ ಬಹಳಷ್ಟು ಮಂದಿ ಬೇಸರಗೊಂಡದ್ದೂ ಇದೆ. ಅಷ್ಟರಮಟ್ಟಿಗೆ ನೋಡುಗರ ಹೃದಯ ತಟ್ಟಿದೆ ರಾಧಾ ರಮಣ.
ರಾಧಾ ಪಾತ್ರದಾರಿ ಬದಲಾದರೆ ಆ ಪಾತ್ರವನ್ನು ಯಾರು ಪುಲ್ ಫಿಲ್ ಮಾಡುತ್ತಾರೆ ಎಂಬುದೇ ಆಗಿತ್ತು. ಸದ್ಯ ಸುದ್ದಿ ಏನಂದ್ರೆ ಕಲರ್ಸ್ ಕನ್ನಡದಲ್ಲಿಯೇ ಪ್ರಸಾರವಾಗುತ್ತಿದ್ದ ಗಾಂಧಾರಿ ಖ್ಯಾತಿಯ ಕಾವ್ಯಗೌಡ ಎಂಟ್ರಿಯಾಗುವ ಸಾಧ್ಯತೆ ಇದೆ. ಆದರೆ ಅಷ್ಟು ಎಷ್ಟರಮಟ್ಟಿಗೆ ಸತ್ಯವೋ ಸದ್ಯಕ್ಕೆ ತಿಳಿದಿಲ್ಲವಾದರೂ, ಕಾವ್ಯ ಗೌಡ ಆ ಪಾತ್ರವನ್ನು ಮಾಡಲಿರುವುದು ಕನ್ ಫರ್ಮ್ ಆಗಲಿದೆ.
ಪ್ಯಾಟೇ ಮಂದಿ ಕಾಡಿಗ್ ಬಂದ್ರು ರಿಯಾಲಿಟಿ ಶೋ ಮೂಲಕ ಟಿವಿ ಲೋಕಕ್ಕೆ ಎಂಟ್ರಿಯಾದ ಕಾವ್ಯ ಗೌಡ, ಶುಭ ವಿವಾಹ, ಮೀರಾ ಮಾಧವ ಹಾಗೂ ಗಾಂಧಾರಿ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಆರ್.ಜೆ ರೋಹಿತ್ ಅಭಿನಯಿಸಿದ್ದ ‘ಬಕಾಸುರ’ ಸಿನಿಮಾದಲ್ಲೂ ನಟಿಸಿದ್ದರು. ಇನ್ನು ರಾಧಾರಮಣದಿಂದ ಬ್ರೇಕ್ ತೆಗೆದುಕೊಂಡು ಯಾವುದಾದರೂ ಸಿನಿಮಾದಲ್ಲಿ ಶ್ವೇತಾ ಪ್ರಸಾದ್ ನಟಿಸಲಿದ್ದಾರಾ ಎಂಬ ಚರ್ಚೆಯೂ ಶುರುವಾಗಿದ್ದು, ಸದ್ಯಕ್ಕೆ ಮೈಂಡ್ ರಿಲೀಫ್ ಅಗತ್ಯವಿದ್ದು, ಯಾವುದೇ ಸಿನಿಮಾದಲ್ಲಿಯೂ ನಟಿಸುವುದಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ ಶ್ವೇತ. ಈ ಹಿಂದೆ ಕಳ್ಬೆಟ್ಟದ ದರೋಡೆಕೋರರು ಸಿನಿಮಾದಲ್ಲಿ ಶ್ವೇತ ಅಭಿನಯಿಸಿದ್ದರು.
ರಾಧಾ ಪಾತ್ರಕ್ಕೆ ಅಷ್ಟು ಮನ್ನಣೆ, ಅಭಿಮಾನಿಗಳಿದ್ದ ಪಾತ್ರವೇ ಬದಲಾಗಿರುವುದು ಮುಂದೆ ರಾಧಾ ರಮಣದ ಟಿಆರ್ ಪಿ ಕುಸಿಯಬಹುದೆಂಬ ಮಾಹಿತಿಯೂ ಇದೆ. ಮೊದಲೇ ಧಾರವಾಹಿಗಳಲ್ಲಿ ಅಭಿನಯಿಸಿ ಹಿಡಿತ ಹೊಂದಿರುವ ಕಾವ್ಯಗೌಡ ಆ ಅವಕಾಶವನ್ನು ಮಾಡಿಕೊಡದೇ ಎಲ್ಲವನ್ನು ಸರಿಧೂಗಿಸಬಹುದೆಂಬ ಭರವಸೆಯೂ ಇದೆ. ಎಲ್ಲದಕ್ಕೂ ಸದ್ಯದಲ್ಲೇ ಉತ್ತರವೂ ದೊರೆಯಲಿದೆ.
No Comment! Be the first one.