ರುದ್ರತಾಂಡವ ಮತ್ತು ನಮಗಾಗಿ ಚಿತ್ರಗಳ ನಂತರ ರಾಧಿಕಾ ಚಿತ್ರರಂಗದಿಂದ ದೂರ ಉಳಿದಿದ್ದರು. ಅಭಿಮಾನಿಗಳೆಲ್ಲ ಅವರಿಗಾಗಿ ಕಾತರಿಸುತ್ತಲೇ ರಾಧಿಕಾ ರಾಜೇಂದ್ರ ಪೊನ್ನಪ್ಪ ಚಿತ್ರದ ಮೂಲಕ ರವಿಚಂದ್ರನ್ ಅವರಿಗೆ ಜೊತೆಯಾಗಿ ಮತ್ತೆ ಬಂದಿದ್ದಾರೆ. ಹೀಗೆ ಒಂಣದಷ್ಟು ಗ್ಯಾಪಿನ ನಂತರ ಮರಳಿರೋ ಅವರು ಮತ್ತೆ ನಟಿಯಾಗಿ ಸಕ್ರಿಯರಾಗುತ್ತಾರಾ ಎಂಬ ಕುತೂಹಲವಂತೂ ಇದ್ದೇ ಇದೆ.
ಸದ್ಯದ ವಿದ್ಯಮಾನಗಳ ಪ್ರಕಾರವಾಗಿ ಹೇಳೋದಾದರೆ ಅದಕ್ಕೆ ಸಕಾರಾತ್ಮಕವಾದ ಉತ್ತರವೇ ಚಾಲ್ತಿಯಲ್ಲಿದೆ!
ನಿರ್ಮಾಪಕರೂ ಆಗಿರುವ ನವರಸನ್ ದಮಯಂತಿ ಎಂಬ ಚಿತ್ರ ಮಾಡುತ್ತಾರೆಂಬ ಸುದ್ದಿ ಒಂದಷ್ಟು ದಿನಗಳಿಂದ ಹರಡಿಕೊಂಡಿದೆ. ಈ ಚಿತ್ರದ ಮುಖ್ಯ ಪಾತ್ರಕ್ಕಾಗಿ ನವರಸನ್ ರಾಧಿಕಾರನ್ನು ಸಂಪರ್ಕಿಸಿದ್ದಾರಂತೆ. ಈ ಚಿತ್ರದ ಸಂಕ್ಷಿಪ್ತವಾದ ಸ್ಟೋರಿಯನ್ನೂ ನವರಸನ್ ಹೇಳಿದ್ದಾರೆ. ಇದನ್ನು ಕೇಳಿದ ರಾಧಿಕಾ ಇಂಪ್ರೆಸ್ ಆಗಿ ಒಪ್ಪಿಗೆ ಸೂಚಿಸಿದ್ದಾರೆಂಬ ಸುದ್ದಿ ಬಂದಿದೆ. ಇನ್ನೇನಿದ್ದರೂ ಅಧಿಕೃತವಾಗಿ ಈ ವಿಚಾರ ಬಯಲಾಗೋದಷ್ಟೇ ಬಾಕಿ ಉಳಿದುಕೊಂಡಿದೆ.
ದಮಯಂತಿ ಎಂಬುದು ಹೆಸರೇ ಸೂಚಿಸುವಂತೆ ಮಹಿಳಾ ಪ್ರಧಾನ ಕಥಾ ಹಂದರ ಹೊಂದಿರೋ ಚಿತ್ರ. ಇದುವರೆಗೂ ರಾಧಿಕಾ ನಾನಾ ಪಾತ್ರಗಳಲ್ಲಿ ಮಿಂಚಿದ್ದಾರಾದರೂ ಮಹಿಳಾ ಕೇಂದ್ರಿತ ಚಿತ್ರ ಅವರಿಗೆ ಹೊಸತು. ಕಥೆಯೂ ಚೆನ್ನಾಗಿರೋದರಿಂದ ರಾಧಿಕಾ ಒಪ್ಪಿಗೆ ಸೂಚಿಸಿದ್ದಾರಂತೆ.
ಸದ್ಯ ರಾಧಿಕಾ ರವಿಚಂದ್ರನ್ ಅವರ ರಾಜೇಂದ್ರ ಪೊನ್ನಣ್ಣ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಭರ್ತಿ ಹನ್ನೊಂದು ವರ್ಷಗಳ ನಂತರ ರವಿಚಂದ್ರನ್ ಅವರಿಗೆ ಜೋಡಿಯಾಗಿ ವಾಪಾಸಾಗಿರುವ ರಾಧಿಕಾ ದಮಯಂತಿಯಾಗಿ ಕಾಣಿಸಿಕೊಳ್ಳಲೂ ರೆಡಿಯಾಗಿದ್ದಾರೆ. #
Comments