ರಾಧಿಕಾ ಪಂಡಿತ್ ಮತ್ತು ನಿರೂಪ್ ಭಂಡಾರಿ ಒಟ್ಟಾಗಿ ನಟಿಸಲಿದ್ದಾರೆಂಬ ಸುದ್ದಿಯೊಂದು ತಿಂಗಳಿಂದೀಚೆಗೆ ಹರಿದಾಡುತ್ತಿತ್ತು. ಆದರೆ ಅದು ಯಾವ ಚಿತ್ರ, ಅದರ ಶೀರ್ಷಿಕೆ ಏನೆಂಬುದರ ಬಗ್ಗೆ ಯಾವ ಮಾಹಿತಿಯೂ ಇರಲಿಲ್ಲ. ಆದರೀಗ ಈ ಚಿತ್ರದ ಟೈಟಲ್ ಯಾವುದೆಂಬುದನ್ನು ಚಿತ್ರತಂಡ ಜಾಹೀರು ಮಾಡಿದೆ!
ಈ ಚಿತ್ರಕ್ಕೆ ಆದಿ ಲಕ್ಷ್ಮಿ ಪುರಾಣ ಎಂಬ ನಾಮಕರಣ ಮಾಡಲಾಗಿದೆಯಂತೆ. ಶೀರ್ಷಿಕೆ ಕೇಳಿದರೇನೇ ಕಥೆ ಎಂಥಾದ್ದಿರಬಹುದೆಂಬ ಕೌತುಕವೂ ಹುಟ್ಟುತ್ತದೆ. ಆದರೆ ಇದೊಂದು ಲವ್ ಸ್ಟೋರಿ ಎಂಬ ಸುಳಿವೂ ಕೂಡಾ ಸಿಗುವಂತಿದೆ. ಇದರ ಜೊತೆ ಜೊತೆಗೇ ರಾಧಿಕಾ ಪಂಡಿತ್ ಮತ್ತು ನಿರೂಪ್ ಭಂಡಾರಿ ಆದಿ ಮತ್ತು ಲಕ್ಷ್ಮಿಯರಾಗಿ ಕಾಣಿಸಿಕೊಳ್ಳಲಿರುವ ಈ ಚಿತ್ರದ ಬಗ್ಗೆ ಅಭಿಮಾನಿಗಳು ಕಾತರರಾಗಿದ್ದಾರೆ!
ಆದರೆ ಈಗ ಈ ಚಿತ್ರಕ್ಕೆ ತಯಾರಿಗಳು ನಡೆಯುತ್ತಿವೆಯಷ್ಟೇ. ಸದ್ಯಕ್ಕೇನೂ ಚಿತ್ರೀಕರಣ ಆರಂಭವಾಗೋ ಸೂಚನೆಗಳಿಲ್ಲ. ಯಾಕೆಂದರೆ ರಾಧಿಕಾ ಪಂಡಿತ್ ಈಗ ಮಗುವೊಂದನ್ನು ಎದುರು ನೋಡುತ್ತಿದ್ದಾರೆ. ಡಿಸೆಂಬರ್ ಹೊತ್ತಿಗೆಲ್ಲ ಅವರು ತಾಯಿಯಾಗಲಿದ್ದಾರೆ. ಆದರೆ ಈ ಚಿತ್ರದಲ್ಲಿ ರಾಧಿಕಾ ನಟಿಸಲು ಒಪ್ಪಿಕೊಂಡಿದ್ದಾಗಿದೆ. ಚಿತ್ರೀಕರಣವೇನಿದ್ದರೂ ಬಾಣಂತನವೆಲ್ಲ ಮುಗಿದಾದ ನಂತರವೇ.
ಸದ್ಯಕ್ಕೆ ತಾಂತ್ರಿಕ ವರ್ಗ ಮತ್ತು ತಾರಾಗಣದ ಆಯ್ಕೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಚಿತ್ರ ತಂಡ ರಾಧಿಕಾ ಮಗುವಿನ ಆರೈಕೆ ಮುಗಿಸಿ ಬರೋವರೆಗೂ ಚಿತ್ರದ ತಯಾರಿಯಲ್ಲಿ ತೊಡಗಲು ತೀರ್ಮಾನಿಸಿದೆಯಂತೆ. ಒಂದು ವಿಭನ್ನ ಪ್ರೇಮ ಕಥೆ ಹೊಂದಿರೋ ಈ ಚಿತ್ರದ ಬಗ್ಗೆ ನಿರೂಪ್ ಕೂಡಾ ನಿರೀಕ್ಷೆ ಹೊಂದಿದ್ದಾರೆ.
#
No Comment! Be the first one.