ರಾಧಿಕಾ ಕುಮಾರಸ್ವಾಮಿಯವರೇ ತಮ್ಮದೇ ಹೋಮ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿ, ನಟಿಸುತ್ತಿರುವ ಭೈರಾದೇವಿ ಸಿನಿಮಾ ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಬಾರಿ ಸದ್ದು ಮಾಡಿದೆ. ರಾಧಿಕಾ ಕುಮಾರಸ್ವಾಮಿ ಭೈರಾದೇವಿ ಸಿನಿಮಾದಲ್ಲಿ ಅಘೋರಿಯ ಪಾತ್ರದಲ್ಲಿ ನಟಿಸುತ್ತಿರುವುದು ಚಿತ್ರದ ಹೈಲೈಟ್.
ಭೈರಾದೇವಿ ಸಿನಿಮಾದ ಹಾಡೊಂದರ ಚಿತ್ರೀಕರಣದ ಸಲುವಾಗಿ ಬೆಂಗಳೂರಿನ ಸ್ಮಶಾನವೊಂದರಲ್ಲಿ ಶೂಟಿಂಗ್ ನಡೆಸುತ್ತಿದ್ದಾಗ, ಸಮಾಧಿಯ ಮೇಲಿಂದ ಬಿದ್ದು, ಕಾಲುಮುರಿದುಕೊಂಡು ಪೆಟ್ಟು ಮಾಡಿಕೊಂಡಿದ್ದರು. ನಂತರ ಬರೋಬ್ಬರಿ ಒಂದು ತಿಂಗಳ ವಿಶ್ರಾಂತಿಯ ಬಳಿಕ ಕಮ್ ಬ್ಯಾಕ್ ಆಗಿರುವ ರಾಧಿಕಾ ಉಳಿದ ಭಾಗದ ಹಾಡಿನ ಚಿತ್ರೀಕರಣದಲ್ಲಿ ಇಂದು ಭಾಗಿಯಾಗಲಿದ್ದು, ಮತ್ತೆ ಸ್ಮಶಾನ ಸೇರಲಿದ್ದಾರೆ. ಅನಿವಾರ್ಯ ಕಾರಣಗಳಿಂದ ಅರ್ಧಕ್ಕೆ ನಿಂತಿದ್ದ ಹಾಡಿನ ಚಿತ್ರೀಕರಣದಲ್ಲಿ ಇಂದು ರಾಧಿಕಾ ಜೊತೆಯಾಗಿ 400 ಜನ ಸಹ ಕಲಾವಿದರು ಅಘೋರಿಗಳ ವೇಷದಾರಿಗಳಾಗಿ ಭಾಗಿಯಾಗಲಿದ್ದಾರೆ. ಹೈ ಬಜೆಟ್ಟಿನಲ್ಲಿ ತಯಾರಾಗುತ್ತಿರುವ ಹಾಡು ಇದಾಗಿದ್ದು, 200 ಜನ ತಂತ್ರಜ್ಞರು ಸಹ ಭಾಗಿಯಾಗಲಿದ್ದಾರೆ. ಶ್ರೀ ಜೈ ಭೈರಾದೇವಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತಾದರೆ ರಾಧಿಕಾ ಕುಮಾರಸ್ವಾಮಿ ಭೈರಾದೇವಿಯ ಮೂಲಕ ಭಾರತದಾದ್ಯಂತ ಧೂಳೆಬ್ಬಿಸುವುದರಲ್ಲಿ ಸಂಶಯವೇ ಇಲ್ಲ.
No Comment! Be the first one.