ಅಪ್ಪಂದಿರ ದಿನಾಚರಣೆಯ ಅಂಗವಾಗಿ ನಟಿ ರಾಧಿಕಾ ಪಂಡಿತ್ ವಿಶೇಷ ಫೋಟೋವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪತಿ ರಾಕಿಂಗ್ ಸ್ಟಾರ್ ಜೊತೆಗೆ ಮುದ್ದಾದ ಮಗಳಿರುವ ಫೋಟೋ ಇದಾಗಿದೆ. ತಂದೆಯ ಎದೆಯ ಮೇಲೆ ಮಗಳು ಮಲಗಿದ್ದರೆ, ಯಶ್ ಮಗಳಿಗೆ ಮುತ್ತು ನೀಡುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ರಾಕಿಂಗ್ ಅಭಿಮಾನಿಗಳು ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಇನ್ನು ರಾಧಿಕಾ ಪಂಡಿತ್ ಅಪ್ಪನನ್ನು ಸೂಪರ್ ಹೀರೋ ಎನ್ನುವ ಮೂಲಕ ಎಲ್ಲ ಮಕ್ಕಳ ತಂದೆಯರಿಗೆ ಶುಭಾಶಯವನ್ನು ತಿಳಿಸಿದ್ದಾರೆ.
Comments