ತಮ್ಮ ಆಪ್ತ ವಲಯ ಮತ್ತು ಹೊಸಬರ ಚಿತ್ರಗಳಿಗೆ ತಮ್ಮ ಚಿತ್ರಗಳಿಗಿಂತಲೂ ಹೆಚ್ಚಿನ ಪ್ರಾಶಸ್ತ್ಯ ಕೊಡೋದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿಶೇಷತೆ. ಹೆಚ್ಚಿನ ಸಂದರ್ಭಗಳಲ್ಲಿ ಅವರ ಚಿತ್ರಗಳಿಗೇ ಕೊಡದಷ್ಟು ಮಹತ್ವವನ್ನು ಇತರರಿಗೂ ಕೊಡೋದಿದೆ. ಇದೀಗ ದರ್ಶನ್ ಅಂಥಾದ್ದೇ ಪ್ರೀತಿಯಿಂದ ತಮ್ಮ ಗೆಳೆಯ ವಿನೋದ್ ಪ್ರಭಾಕರ್ ಚಿತ್ರದ ಟ್ರೈಲರ್ ಲಾಂಚ್ ಮಾಡಲು ಮುಂದಾಗಿದ್ದಾರೆ.
ದರ್ಶನ್ ಇದೇ ಇಂದು ವಿನೋದ್ ಪ್ರಭಾಕರ್ ಅಭಿನಯದ ರಗಡ್ ಚಿತ್ರದ ಟ್ರೈಲರ್ ಮತ್ತು ಆಡಿಯೋವನ್ನು ಬಿಡುಗಡೆ ಮಾಡಲಿದ್ದಾರೆವೀ ಹಿಂದೆ ರಗಡ್ ಚಿತ್ರಕ್ಕೆ ಚಾಲನೆ ಕೊಟ್ಟಿದ್ದೂ ಕೂಡಾ ದರ್ಶನ್ ಅವರೇ. ವಿನೋದ್ ಪ್ರಭಾಕರ್ ನಟನೆಯ ಬಹುತೇಕ ಚಿತ್ರಗಳಿಗೆ ದರ್ಶನ್ ಚಾಲನೆ ಕೊಟ್ಟಿರೋದು ವಿಶೇಷ.
ವಿನೋದ್ ಪ್ರಭಾಕರ್ ದರ್ಶನ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ದರ್ಶನ್ ಅಂತೂ ವಿನೋದ್ ರನ್ನು ಸಹೋದರನಂತೆಯೇ ಹಚ್ಚಿಕೊಂಡಿದ್ದಾರೆ. ಇಂಥಾ ಪ್ರೀತಿ ಇರೋದರಿಂದಲೇ ವಿನೋದ್ ಯಾವುದೇ ಚಿತ್ರದಲ್ಲಿ ನಟಿಸಿದರೂ ಆರಂಭದಿಂದ ಕೊನೆಯವರೆಗೂ ಸಂಪೂರ್ಣ ಸಹಕಾರ ನೀಡುತ್ತಾ ಬಂದಿದ್ದಾರೆ.
ಅರುಣ್ ನಿರ್ಮಾಣದ ರಗಡ್ ಚಿತ್ರವನ್ನು ಮಹೇಶ್ ಗೌಡ ನಿರ್ದೇಶನ ಮಾಡಿದ್ದಾರೆ. ವಿಶಿಷ್ಟವಾದ ಕಥೆ ಹೊಂದಿರೋ ಈ ಚಿತ್ರ ವಿನೋದ್ ಪ್ರಭಾಕರ್ ಅವರಿಗೆ ದೊಡ್ಡ ಗೆಲುವೊಂದನ್ನು ತಂದುಕೊಡಲಿದೆ ಎಂಬ ನಿರೀಕ್ಷೆಯೂ ಇದೆ.
Leave a Reply
You must be logged in to post a comment.