ಬಾಲಿವುಡ್ ನಟಿ ತನುಶ್ರೀ ದತ್ತ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದೇ ಮೀ ಟೂ ಎಂಬ ಅಭಿಯಾನವೊಂದಕ್ಕೆ ಚಾಲನೆ ನೀಡಿದೆ. ಇದರ ಮೂಲಕ ಚಿತ್ರರಂಗದ ನಟಿಯರು ತಾವು ಅನುಭವಿಸಿದ್ದ ಯಾತನೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜಾಹೀರು ಮಾಡಲಾರಂಭಿಸಿದ್ದಾರೆ. ಈ ಮೂಲಕ ಹಲವಾರು ನಟರು ಬೆತ್ತಲಾಗುತ್ತಿದ್ದಾರೆ. ಇದೇ ಅಭಿಯಾನ ಕನ್ನಡದ ಖ್ಯಾತ ಹಾಡುಗಾರ ರಘು ದೀಕ್ಷಿತ್ ಅವರನ್ನೂ ಲುಂಗಿ ಕಳಚಿ ನಿಲ್ಲಿಸಿ ಬಿಟ್ಟಿದೆ.
ಆದರೆ, ತಮ್ಮ ಮೇಲೆ ತೆಲುಗು ಸಿಂಗರ್ ಚಿನ್ಮಯಿ ಶ್ರೀಪಾದ್ ಮಾಡಿದ್ದ ಲೈಂಗಿಕ ಕಿರುಕುಳದ ಆರೋಪವನ್ನು ರಘು ದೀಕ್ಷಿತ್ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ನೇರಾ ನೇರ ಅಭಿಪ್ರಾಯವನ್ನೂ ಹಂಚಿಕೊಂಡಿದ್ದಾರೆ. ಇದಾಗುತ್ತಲೇ ಈ ಬಗ್ಗೆ ರಘು ದೀಕ್ಷಿತ್ ಅವರ ಮಡದಿ ಮಯೂರಿ ಉಪಾಧ್ಯಾಯರ ಅಭಿಪ್ರಾಯವೇನಿರ ಬಹುದೆಂಬ ಬಗ್ಗೆ ಎಲ್ಲರಲ್ಲಿಯೂ ಕುತೂಹಲವಿತ್ತು. ಇದೀಗ ಮೀ ಟೂ ಅಭಿಯಾನದ ಮಯೂರಿ ನೇರವಾಗಿಯೇ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದುವೇ ತಮ್ಮ ಪತಿಯ ಕಿತಾಪತಿಯ ಬಗೆಗಿನ ತಮ್ಮ ಅಭಿಪ್ರಾಯ ಎಂಬುದನ್ನೂ ಕೂಡಾ ಮಯೂರಿ ಪರೋಕ್ಷವಾಗಿ ಹೇಳಿದಂತಿದೆ!
ಮೀಟೂ ಅಭಿಯಾನದ ಮೂಲಕ ಲೈಂಗಿಕ ದೌರ್ಜನ್ಯಕ್ಕೀಡಾಗಿ ನೊಂದ ಮಹಿಳೆಯರೆಲ್ಲ ಧ್ವನಿಯೆತ್ತುತ್ತಿರೋದು ಸಕಾರಾತ್ಮಕ ಬೆಳವಣಿಗೆ. ಈ ಮೂಲಕ ಎಲ್ಲರ ಮುಖವಾಡ ಕಳಚಿಕೊಳ್ಳುತ್ತಿದೆ. ಅಂಥವರಿಗೆಲ್ಲ ಶಿಕ್ಷಿಯಾಗುವಂತಾಗಲಿ. ಈ ಅಭಿಯಾನಕ್ಕೆ ನನ್ನ ಬೆಂಬಲವಿದೆ ಅಂತ ಮಯೂರಿ ಹೇಳಿಕೊಂಡಿದ್ದಾರೆ. ಅವರು ನೇರವಾಗಿ ತನ್ನ ಪತಿ ರಘು ದೀಕ್ಷಿತ್ ಬಗ್ಗೆ ಏನನ್ನೂ ಹೇಳಿಲ್ಲವಾದರೂ ತನ್ನ ಪತಿಯ ವಿರುದ್ಧ ಆರೋಪ ಮಾಡಿರೋ ಅಭಿಯಾನಕ್ಕೆ ಬೆಂಬಲ ಸೂಚಿಸುವ ಮೂಲಕ ಮಯೂರಿ ಎಲ್ಲವನ್ನೂ ಹೇಳಿಕೊಂಡಂತಾಗಿದೆ.
ರಘು ದೀಕ್ಷಿತ್ ಮತ್ತು ಮಯೂರಿ ವಿವಾಹ ವಿಚ್ಚೇದನದ ಹಂತ ತಲುಪಿಕೊಂಡಿದ್ದಾರೆ. ಒಂದು ಮೂಲದ ಪ್ರಕಾರ, ಇವರಿಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿಕೊಂಡು ವರ್ಷಗಳೇ ಕಳೆದಿವೆ. ಇನ್ನು ಒಟ್ಟಿಗಿರೋದರಲ್ಲಿ ಅರ್ಥವಿಲ್ಲ ಅನ್ನಿಸಿ ಈ ಹಿಂದೆಯೇ ಇಬ್ಬರೂ ಸಮ್ಮತಿಸಿ ವಿವಾಹ ವಿಚ್ಚೇದನದ ಮೊರೆ ಹೋಗಿದ್ದರು. ಆದರೆ ಅದು ಇತ್ಯರ್ಥವಾಗೋ ಕಡೇ ಘಳಿಗೆಯಲ್ಲಿ ರಘು ದೀಕ್ಷಿತ್ ಅವರ ಮತ್ತೊಂದು ಮುಖದ ಅನಾವರಣವಾಗಿದೆ. ಇಂಥಾ ಹೊತ್ತಿನಲ್ಲಿಯೂ ಗಂಡನ ಬಗ್ಗೆ ಯಾವ ಆರೋಪವನ್ನೂ ಮಾಡದ ಮಯೂರಿ ಮೀ ಟೂ ಅಭಿಯಾನಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ.
#
No Comment! Be the first one.