ಯೂ ಆರ್ ಮೈ ಪೊಲೀಸ್ ಬೇಬಿ ಅನ್ನೋ ಹಾಡು ಕೇಳಿರುತ್ತೀರ. ಶಿವಣ್ಣ ನಟಿಸಿದ್ದ ರುಸ್ತುಂ ಸಿನಿಮಾಗೆ ಅನೂಪ್ ಸಿಳೀನ್ ಸಂಗೀತ ನಿರ್ದೇಶನದಲ್ಲಿ ರಘು ದೀಕ್ಷಿತ್ ಹಾಡಿದ್ದ ಹಾಡಿದು.

ರಘು ದೀಕ್ಷಿತ್ ಈ ಹಾಡು ಹೇಳಿದ್ದಕ್ಕಾಗಿ ಅವರ ಅಭಿಮಾನಿಗಳು ಥೂ ಅಂತಾ ಉಗಿಯುತ್ತಿದ್ದಾರಂತೆ. ನಿನ್ನ ಸನಿಹಕೆ ಎನ್ನುವ ಸಿನಿಮಾಗೆ ರಘು ದೀಕ್ಷಿತ್ ಸಂಗೀತ ಸಂಯೋಜಿಸುತ್ತಿದ್ದಾರೆ. ಈ ಚಿತ್ರದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಾ ”ಕೆಲವೊಮ್ಮೆ ಇಷ್ಟವಿಲ್ಲದಿದ್ದರೂ ಕೆಟ್ಟ ಹಾಡುಗಳಿಗೆ ದನಿ ನೀಡಬೇಕಾಗುತ್ತೆ‌” ಅಂದರು. ಹಾಗಾದರೆ ನೀವು ಹಾಡಿರುವ ಕೆಟ್ಟ ಗೀತೆ ಯಾವುದು ಅಂತಾ ಪತ್ರಕರ್ತರು ಪ್ರಶ್ನಿಸಿದಾಗ, ಪೊಲೀಸ್ ಬೇಬಿ ಹಾಡು ಹಾಡಿದ್ದಕ್ಕೆ ನನ್ನ ಫ್ಯಾನ್ಸು ಥೂ ಅಂಥಾ ಉಗೀತಿದ್ದಾರೆ. ಯಾಕಾದರೂ ಹಾಡಿದೆನೋ ಅನ್ನುಷ್ಟರಮಟ್ಟಿಗೆ ಬೈಸಿಕೊಂಡಿದ್ದೀನಿ ಅಂತಾ ಸ್ವತಃ ರಘು ದೀಕ್ಷಿತ್ ಹೇಳಿದ್ದಾರೆ.

ಒಂದು ವೇಳೆ ಇಷ್ಟವಿಲ್ಲದಿದ್ದರೆ ಹಾಡಬಾರದಿತ್ತು. ಹಾಡು ಹೇಳಿ, ಅದಕ್ಕೆ ಸಂಭಾವನೆಯನ್ನೂ ಪಡೆದು ಈಗ ಥೂ ಚೀ ಅನ್ನುತ್ತಿರುವ ರಘು ವಿರುದ್ದ ಬೇಸರದ ಅಲೆಯೆದ್ದಿದೆ. ಶಿವರಾಜ್ ಕುಮಾರ್ ಅವರ ಸಿನಿಮಾದಲ್ಲಿ ಹಾಡುವ ಅವಕಾಶ ಸಿಕ್ಕರೆ ಸಾಕು ಅಂತಾ ಕಾದಿರುವ ಎಷ್ಟೋ ಜನ ಗಾಯಕರಿದ್ದಾರೆ. ಆದರೆ, ಅವಕಾಶ ಪಡೆದು, ಹಾಡಿ, ಆ ಹಾಡು ಹಿಟ್ ಆದಮೇಲೂ ಅದನ್ನು ಕೆಟ್ಟ ಸಾಂಗು ಅಂದಿರುವ ರಘು ದೀಕ್ಷಿತ್ ರೀತಿಯನ್ನು ನೇರವಂತಿಕೆ ಅನ್ನಬೇಕಾ? ತಿಮಿರು ಅಂದುಕೊಳ್ಳಬೇಕಾ? ಅಧಿಕ ಪ್ರಸಂಗವೆನ್ನುವುದೋ… ನೀವೇ ತೀರ್ಮಾನಿಸಿ!

CG ARUN

ಇಲ್ಲಿಂದ ವಿಹಾನ್ ಇಮೇಜು ಬದಲಾಗುತ್ತಾ?

Previous article

ಯಾವುದೂ ಕೃತಕವಾಗಬಾರದು!

Next article

You may also like

Comments

Leave a reply

Your email address will not be published. Required fields are marked *