ಜಾನಪದ ಹಾಡುಗಳನ್ನು ವೆಸ್ಟರ್ನ್ ಶೈಲಿಯಲ್ಲಿ ಹಾಡೋ ಮೂಲಕ ವಿಶ್ವ ವಿಖ್ಯಾತಗೊಳಿಸಿರುವವರು ರಘು ಧೀಕ್ಷಿತ್. ಅವರ ಪವರ್ಫುಲ್ ವಾಯ್ಸ್ಗೆ ಬರೀ ಕರ್ನಾಟಕ ಮಾತ್ರವಲ್ಲದೆ ಬಾಲಿವುಡ್ ಮಟ್ಟದಲ್ಲಿಯೂ ಅಭಿಮಾನಿಗಳಿದ್ದಾರೆ. ಇಂಥಾ ರಘು ಧೀಕ್ಷಿತ್ ಆಗಾಗ ಆಯೋಜಿಸೋ ಮ್ಯೂಸಿಕಲ್ ನೈಟ್ಸ್ ಕಾರ್ಯಕ್ರಮಗಳಿಗೊಂದು ಬೇರೆಯದ್ದೇ ಆಕರ್ಷಣೆ ಇದೆ. ಅಂಥಾದ್ದೇ ಒಂದು ಮಾಂತ್ರಿಕ ಸಂಗೀತ ಕಾರ್ಯಕ್ರಮ ಆಯೋಜನೆಗೊಂಡಿದೆ ಮತ್ತು ಅದಕ್ಕೆ ಸನ್ನಿ ಲೊಯೋನ್ ಆಗಮಿಸಲಿದ್ದಾಳೆ!
ರಘು ಧೀಕ್ಷಿತ್ ಮತ್ತು ತಂಡ ಇದೇ ನವೆಂಬರ್ ಮೂರನೇ ತಾರೀಕಿನಂದು ಫ್ಯೂಷನ್ ನೈಟ್ಸ್ ಎಂಬ ಕಾರ್ಯಕ್ರಮವನ್ನು ಆಯೋಜಿಸಿದೆ. ಮಾನ್ಯತಾ ಟೆಕ್ ಪಾರ್ಕಿನ ಆರ್ಕಿಡ್ ಹಾಲ್ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಸನ್ನಿ ಲಿಯೋನ್ ಕೂಡಾ ಪಾಲ್ಗೊಳ್ಳಿದ್ದಾರೆ. ಈ ಕಾರ್ಯಕ್ರಮದ ಪ್ರೋಮೋದಲ್ಲಿಯೇ ಈ ವಿಚಾರವನ್ನು ಖುದ್ದು ಸನ್ನಿಯೇ ಸ್ಪಷ್ಟಪಡಿಸಿದ್ದಾಳೆ.
ಈ ಮೂಲಕ ಸನ್ನಿ ಲಿಯೋನ್ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಬೇಕೆಂಬ ಅಭಿಮಾನಿಗಳ ಬಹು ದಿನಗಳ ಆಸೆ ಈಡೇರಿದೆ. ಈ ಹಿಂದೆ ಹೊಸಾ ವರ್ಷದ ಸಂದರ್ಭದಲ್ಲಿ ಇದೇ ಬೆಂಗಳೂರಿನಲ್ಲಿ ಸನ್ನಿ ನೈಟ್ಸ್ ಎಂಬ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಭದ್ರತೆಯ ಕಾರಣದಿಂದ, ಆ ಕಾರ್ಯಕ್ರಮಕ್ಕೆ ವ್ಯಾಪಕ ವಿರೋಧ ಕೇಳಿ ಬಂದ ಹಿನ್ನೆಲೆಯಲ್ಲಿ ಅದು ಕ್ಯಾನ್ಸಲ್ ಆಗಿತ್ತು.
ಆದರೆ ಈಗಾಗಲೇ ಸಂಗೀತ ಪ್ರೇಮಿಗಳನ್ನು ಹುಚ್ಚೆಬ್ಬಿಸಿರುವ ರಘು ಧೀಕ್ಷಿತ್ ಮತ್ತು ತಂಡದ ಕಾರ್ಯಕ್ರಮಕ್ಕೆ ಯಾವುದೇ ಅಡೆತಡೆ ಎದುರಾಗಿಲ್ಲ. ಇದರಲ್ಲಿ ಸನ್ನಿ ಲಿಯೋನ್ ಪಾಲ್ಗೊಳ್ಳೋದು ಪಕ್ಕಾ!
#
No Comment! Be the first one.